ಶ್ರೀಸೋಮನಾಥ್ ಟ್ರಸ್ಟ್‍ನ ಮುಂದಿನ ಅಧ್ಯಕ್ಷರಾಗಿ ಪ್ರಧಾನಮಂತ್ರಿ ನರೇಂದ್ರಮೋದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಟ್ರಸ್ಟ್ ಗುಜರಾತ್ ನ ಗಿರ್-ಸೋಮನಾಥ್ ಜಿಲ್ಲೆಯ ಪ್ರಭಾಸ್ ಪಠಾಣ್ ನಗರದಲ್ಲಿರುವ ವಿಶ್ವ ಪ್ರಸಿದ್ಧ ಸೋಮನಾಥ ದೇವಾಲಯದ ನಿರ್ವಹಣೆ ಹೊತ್ತಿದೆ. ಪ್ರಧಾನಮಂತ್ರಿ ನರೇಂದ್ರಮೋದಿ ಭಾಗವಹಿಸಿದ್ದ ಶ್ರೀ ಸೋಮನಾಥ ಟ್ರಸ್ಟ್‍ನ ವರ್ಚುವಲ್ ಸಭೆಯಲ್ಲಿ ಉನ್ನತ ಸ್ಥಾನಕ್ಕೆ ಪ್ರಧಾನಮಂತ್ರಿಯವರನ್ನು ಆಯ್ಕೆ ಮಾಡಲಾಯಿತು. ಇತ್ತೀಚೆಗೆ ನಿಧನ ಹೊಂದಿದ ಗುಜರಾತ್ ಮಾಜಿ ಮುಖ್ಯಮಂತಿ ಹಾಗೂ ಟ್ರಸ್ಟ್ ನ ಮಾಜಿ ಅಧ್ಯಕ್ಷ ಕೇಶುಭಾಯಿ ಪಟೇಲ್ ಅವರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸೋಮನಾಥ ಟ್ರಸ್ಟ್‍ನ ಕಾರ್ಯವನ್ನು ಪ್ರಶಂಸಿಸಿದ ಪ್ರಧಾನಮಂತ್ರಿ ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಂಡರು. ನಮ್ಮ ಪರಂಪರೆಯೊಂದಿಗೆ ಪ್ರವಾಸಿಗರ ಸಂಪರ್ಕವನ್ನು ಗಟ್ಟಿಗೊಳಿಸಲು ಟ್ರಸ್ಟ್‍ವತಿಯಿಂದ ಇನ್ನೂ ಮುಂದೆಯೂ ಹೆಚ್ಚಿನ ಮೂಲಸೌಕರ್ಯ ಹಾಗೂ ಮನರಂಜನಾ ಸೌಲಭ್ಯ, ಹಾಗೂ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಪ್ರಧಾನಮಂತ್ರಿ ಹೇಳಿದರು.
Related Articles
ಟೆಸ್ಟ್, ಟ್ರ್ಯಾಕ್, ಟ್ರೀಟ್, ಲಸಿಕೆಗೆ ಒತ್ತು ನೀಡಿ: ಸಿಎಂಗಳಿಗೆ ಪ್ರಧಾನಿ ಮೋದಿ 4ಟಿ ಮಂತ್ರ
July 17, 2021
Varta Mitra News - SP
ರಾಷ್ಟ್ರೀಯ
Comments Off on ಟೆಸ್ಟ್, ಟ್ರ್ಯಾಕ್, ಟ್ರೀಟ್, ಲಸಿಕೆಗೆ ಒತ್ತು ನೀಡಿ: ಸಿಎಂಗಳಿಗೆ ಪ್ರಧಾನಿ ಮೋದಿ 4ಟಿ ಮಂತ್ರ
Seen By: 91 ಹೊಸದಿಲ್ಲಿ: ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ರಾಜ್ಯಗಳಲ್ಲಿ ಮೂರನೇ ಅಲೆ ತಡೆಗೆ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿಯವರು, ಟೆಸ್ಟ್, [more]
Seen By: 56 ಈ ವರ್ಷದಲ್ಲಿ ಭಾರತ ಸಾಂಕ್ರಾಮಿಕ ಕೋವಿಡ್ ವಿರುದ್ಧ ಸಮರ ಸಾರಿದ್ದು, ಭಾರತದ ರಾಷ್ಟ್ರೀಯ ಗುಣವನ್ನು ಇಡೀ ಜಗತ್ತು ಗಮನಿಸುತ್ತಿದೆ. ಭಾರತದ ನೈಜಶಕ್ತಿ ಏನು [more]
ಕನ್ನಡ ರಾಜ್ಯೋತ್ಸವಕ್ಕೆ ಕನ್ನಡದಲ್ಲೇ ಶುಭ ಕೋರಿದ ಮೋದಿ
November 2, 2020
Varta Mitra News - SP
ರಾಷ್ಟ್ರೀಯ, ಕಾರ್ಯಕ್ರಮಗಳು
Comments Off on ಕನ್ನಡ ರಾಜ್ಯೋತ್ಸವಕ್ಕೆ ಕನ್ನಡದಲ್ಲೇ ಶುಭ ಕೋರಿದ ಮೋದಿ
Seen By: 72 ಹೊಸದಿಲ್ಲಿ: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದ ಜನತೆಗೆ ಕನ್ನಡದ ಶುಭಾಶಯ ಕೋರಿಧಾರೆ.ಕರ್ನಾಟಕದ ನನ್ನ ಸಹೋದರ ಮತ್ತು ಸಹೋದರಿಯರಿಗೆ ಕನ್ನಡ [more]