ಹೊಸದಿಲ್ಲಿ: ಭಾರತೀಯ ನೌಕಾಪಡೆಯ ಮಹಿಳಾ ಎಸ್ಎಸ್ಸಿ ಅಕಾರಿಗಳಿಗೆ ಶ್ವಾಶ್ವತ ಆಯೋಗ (ಪಿಸಿ) ಕಲ್ಪಿಸಿಕೊಡುವ ಸುಪ್ರೀಂಕೋರ್ಟ್ ತೀರ್ಪನ್ನು ಅನುಷ್ಠಾನಗೊಳಿಸುವ ಗಡುವನ್ನು ಡಿಸೆಂಬರ್ 31ರ ವರೆಗೆ ಗುರುವಾರ ನ್ಯಾಯಾಲಯ ವಿಸ್ತರಿಸಿದೆ.
ಮಾರ್ಚ್ 17ರಂದು ಸೇನಾ ಪಡೆಗಳಲ್ಲಿಯೂ ಮಹಿಳಾ ಮತ್ತು ಪುರುಷ ಅಕಾರಿಗಳನ್ನು ಸಮಾನರೆಂದು ಪರಿಗಣಿಸುವ ನಿಟ್ಟಿನಲ್ಲಿ ಮಹಿಳಾ ಅಕಾರಿಗಳಿಗೂ ಶಾಶ್ವತ ಆಯೋಗ ಕಲ್ಪಿಸಿಕೊಡಬೇಕು ಮತ್ತು ಈ ಎಲ್ಲ ಪ್ರಕ್ರಿಯೆಗಳನ್ನು 3 ತಿಂಗಳ ಒಳಗೆ ಪೂರ್ಣಗೊಳಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಬಳಿಕ ಕೊರೋನಾ ಬಿಕ್ಕಟ್ಟಿರುವ ಹಿನ್ನೆಲೆ ಪ್ರಕ್ರಿಯೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ 6 ತಿಂಗಳ ಗಡುವು ಕೋರಿ ಮೇಲ್ಮನವಿ ಸಲ್ಲಿಸಿದ್ದು, ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ಇಂದು ಮಲ್ಹೋತ್ರ ಹಾಗೂ ಇಂದಿರಾ ಬ್ಯಾನರ್ಜಿ ಅವರ ತ್ರಿಸದಸ್ಯ ನ್ಯಾಯಪೀಠ ಗುರುವಾರ ಪ್ರಕರಣದ ವಿಚಾರಣೆ ನಡೆಸಿದೆ.
ಕೇಂದ್ರ ಕೋರಿರುವ ಗಡುವು ವಿಸ್ತರಣೆಗೆ ನ್ಯಾಯಪೀಠ ಸಮ್ಮತಿಸಿದ್ದು, ಡಿಸೆಂಬರ್ 31ರವರೆಗೆ ಸಮಯ ನೀಡುವುದಾಗಿ ಹೇಳಿದೆ ಜತೆಗೆ ಪಿಂಚಣಿಯ ಹೊರತಾಗಿ ಪಿಸಿಗೆ ಪರಿಗಣಿಸದ ಐವರು ನೌಕಾಪಡೆಯ ಮಹಿಳಾಅಕಾರಿಗಳಿಗೆ ನಾಲ್ಕು ವಾರಗಳಲ್ಲಿ ತಲಾ 25 ಲಕ್ಷ ರೂ. ಪರಿಹಾರ ನೀಡುವಂತೆಯೂ ಆದೇಶಿಸಿದೆ.