ಎಪಿಎಸ್‍ಸಿ ಪರೀಕ್ಷೆಗೆ 42 ತೃತೀಯ ಲಿಂಗಿಗಳಿಂದ ಅರ್ಜಿ

ಡಿಸ್ಪುರ್ : ದೇಶದ ಸರ್ವಕ್ಷೇತ್ರಗಳಲ್ಲಿಯೂ ತೃತೀಯ ಲಿಂಗಿಗಳಿಗೆ ಸಮಾನತೆ ನೀಡುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸುತ್ತಿರುವಾಗಲೇ ತೃತೀಯ ಲಿಂಗ ಸಮುದಾಯವೂ ಕೂಡ ಈ ವಿಚಾರದಲ್ಲಿ ಆಸಕ್ತಿತೋರಿದ್ದು, ಅಸ್ಸಾಂನ ಸಾರ್ವಜನಿಕ ಸೇವಾ ಆಯೋಗದ (ಎಪಿಎಸ್‍ಸಿ) ಪರೀಕ್ಷೆಗೆ 42 ಮಂದಿ ತೃತೀಯ ಲಿಂಗಿಗಳು ಅರ್ಜಿ ಸಲ್ಲಿಸಿ, ನಿದರ್ಶನವಾಗಿದ್ದಾರೆ.
ನಾಗರಿಕ ಸೇವಾ ಆಯೋಗಗಳು ಪರೀಕ್ಷೆ ನಡೆಸುವಂತೆಯೇ ರಾಜ್ಯದಲ್ಲಿ ಅಸ್ಸಾಂ ಪಬ್ಲಿಕ್ ಸರ್ವೀಸ್ ಕಮಿಷನ್ (ಎಪಿಎಸ್‍ಸಿ) ರಾಜ್ಯ ನಾಗರಿಕ ಸೇವೆ, ಪೆÇಲೀಸ್ ಮತ್ತು ಇತರ ಸೇವೆಗಳ ನೇಮಕಾತಿಗಾಗಿ ಪರೀಕ್ಷೆಗಳನ್ನು ನಡೆಸುತ್ತಿದೆ.
ಈ ಬಾರಿಯು 2020ರ ಸಂಯೋಜಿತ ಪರೀಕ್ಷೆ ನಡೆಸಲು ಎಪಿಎಸ್‍ಸಿ ಮುಂದಾಗಿದ್ದು, 42 ಮಂದಿ ತೃತೀಯಲಿಂಗಿಗಳು ಪರೀಕ್ಷೆ ಬರೆಯಲು ಅರ್ಜಿ ಸಲ್ಲಿಸಿದ್ದಾರೆ. ಕೊರೋನಾ ಬಿಕ್ಕಟ್ಟಿನಿಂದಾಗಿ ಈ ಬಾರಿಯ ಅರ್ಜಿಗಳನ್ನು ಆನ್‍ಲೈನ್ ಮೂಲಕ ಸ್ವೀಕರಿಸಲಾಗುತ್ತಿದ್ದು, ಮೊದಲಿಗೆ ತೃತೀಯ ಲಿಂಗಿಗಳಿಗಾಗಿ ಪ್ರತ್ಯೇಕ ವರ್ಗ ರಚಿಸಿರಲಿಲ್ಲ.
ಬಳಿಕ ಸಮುದಾಯದ ಹಕ್ಕುಗಳ ಹೋರಾಟಗಾರರಾದ ಸ್ವಾತಿ ಭಿದಾನ್ ಬರವಾ ಅವರೊಂದಿಗೆ ಮಾತನಾಡಿ ಪ್ರತ್ಯೇಕವರ್ಗ ಸೇರ್ಪಡೆಗೊಳಿಸಲಾಯಿತು ನಂತರ ಅರ್ಜಿ ಸಲ್ಲಿಕೆಯ ಗಡುವನ್ನು ಕೂಡ ಅ.25 ರವರೆಗೆ ವಿಸ್ತರಿಸಲಾಗಿತ್ತು.
ಒಟ್ಟು 75,988 ಅರ್ಜಿ ಸಲ್ಲಿಕೆಯಾಗಿದ್ದು, ಅದರಲ್ಲಿ ತೃತೀಯ ಲಿಂಗಿಗಳ ವಿಭಾಗದಲ್ಲಿ 42 ಮಂದಿ ಅರ್ಜಿ ಸಲ್ಲಿಸಿದ್ದಾರೆ ಎಂದು ಎಪಿಎಸ್‍ಸಿ ಅಧ್ಯಕ್ಷ ಪಲ್ಲವ್ ಭಟ್ಟಾಚಾರ್ಯ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ