ತಿರುವನಂತಪುರ: ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆ ನಡೆಸುತ್ತಿದ್ದ ಆರೋಪದಲ್ಲಿ ಎನ್ಸಿಬಿ ಬಲೆಗೆ ಬಿದ್ದಿರುವ ಆಪಾದಿತನೋರ್ವನ ಜತೆ ಹಣಕಾಸು ವಹಿವಾಟು ಹೊಂದಿದ್ದ ಆಪಾದನೆ ಮೇಲೆ, ಕೇರಳ ಸಿಪಿಎಂ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ಅವರ ಪುತ್ರ ಬಿನಿಶ್ ಕೊಡಿಯೇರಿಯನ್ನು ಅನುಷ್ಟಾನ ನಿರ್ದೇಶನಾಲಯವು ಗುರುವಾರ ಬೆಂಗಳೂರಲ್ಲಿ ಬಂಸಿದೆ.
ಜಾರಿ ನಿರ್ದೇಶನಾಲಯದ ಬೆಂಗಳೂರು ಕಚೇರಿಯಲ್ಲಿ ಸುಮಾರು 3ತಾಸು ವಿಚಾರಣೆ ನಡೆಸಿದ ನಂತರ ಬಿನಿಶ್ನನ್ನು ದಸ್ತಗಿರಿ ಮಾಡಲಾಯಿತು. ಇ.ಡಿ. ಸೂಚನೆ ಮೇರೆಗೆ ವಿಚಾರಣೆಗೆಂದು, ಬೆಂಗಳೂರಿನ ಶಾಂತಿನಗರದಲ್ಲಿನ ಇ.ಡಿ. ವಲಯ ಕಚೇರಿಗೆ ಈತ ಬೆಳಗ್ಗೆ 11ಕ್ಕೆ ತಲುಪಿದ್ದ. ವಿಚಾರಣೆಯ ನಂತರ ಬಿನಿಶ್ನನ್ನು ಬಂಸಿ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯ ಈತನನ್ನು ನಾಲ್ಕು ದಿನಗಳವಗೆ ಇ.ಡಿ. ಕಸ್ಟಡಿಗೆ ಹಸ್ತಾಂತರಿಸಿದೆ.
ಬಿನಿಶ್ ಬೆಂಗಳೂರಲ್ಲಿ ಇ.ಡಿ. ವಿಚಾರಣೆಗೊಳಗಾದ್ದು ಇದು ದ್ವಿತೀಯ ಬಾರಿ. ಅ. 6ರಂದು ಕೂಡ ಬಿನಿಶ್ ಇ.ಡಿ. ವಿಚಾರಣೆಗೊಳಗಾಗಿದ್ದರು. ಇದಕ್ಕೂ ಮುನ್ನ ರಾಜತಾಂತ್ರಿಕ ಬ್ಯಾಗ್ನಲ್ಲಿ ಕೆಜಿಗಟ್ಟಲೆ ಚಿನ್ನ ಕಳ್ಳಸಾಗಣೆ ಪ್ರಕರಣದ ಬಂತ ಆರೋಪಿಗಳ ಜತೆ ನಂಟು ಹೊಂದಿರುವ ಶಂಕೆಯಲ್ಲಿ ಕೇರಳದಲ್ಲಿ ಈತನನ್ನು ಇ.ಡಿ. ವಿಚಾರಣೆಗೊಳಪಡಿಸಿತ್ತು.
ಎನ್ಸಿಬಿಯಿಂದ ಆ.22ರಂದು ಬಂಧನಸತ್ರ ಶುರುವಾದ ಬೆನ್ನಲ್ಲೇ, ಡ್ರಗ್ಸ್ ಬಳಸುತ್ತಿರುವ ಕರ್ನಾಟಕದ ಸೆಲೆಬ್ರಿಟಿಗಳು, ಖ್ಯಾತ ಚಿತ್ರತಾರೆಯರನ್ನು ಬೆಂಗಳೂರು ಕ್ರೈಮ್ ಬ್ರಾಂಚ್ ತಂಡ ಸರಣಿಯೋಪಾದಿಯಲ್ಲಿ ಬಂಸಿ ವಿಚಾರಣೆಗೊಳಪಡಿಸಿತ್ತು.