ಪಾಕಿಸ್ಥಾನ ಸಂಸತ್ತಿನಲ್ಲೇ ಈಗ ಮೋದಿ ಮೋದಿ ಘೋಷಣೆ !

ಇಸ್ಲಾಮಾಬಾದ್: ಪಾಕಿಸ್ಥಾನ ಸಂಸತ್ತಿಲ್ಲೇ ಇದೀಗ ಮೋದಿ.. ಮೋದಿ …ಘೋಷಣೆಗಳು ಮೊಳಗಿವೆ !
ಬುಧವಾರ ಪಾಕ್ ನ್ಯಾಷನಲ್ ಅಸೆಂಬ್ಲಿಯಲ್ಲಿ ಫ್ರೆಂಚ್ ಉತ್ಪನ್ನಗಳನ್ನು ಬಹಿಷ್ಕರಿಸುವುದಕ್ಕೆ ಸಂಬಂಸಿ ಪಾಕ್ ವಿದೇಶಾಂಗ ಸಚಿವ ಶಾ ಮೊಹಮ್ಮೂದ್ ಖುರೇಶಿ ಅವರು ಮಾತನಾಡುತ್ತಿದ್ದಾಗ ಬಲೂಚಿಸ್ತಾನ್‍ನ ಸಂಸದರು ಮೋದಿ …ಮೋದಿ…ಘೋಷಣೆಗಳನ್ನು ಕೂಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದರು. ಈ ಮೂಲಕ ಭಾರತದ ವಿರುದ್ಧ ದ್ವೇಷ ಸಾಸಲು ಭಯೋತ್ಪಾದನೆಯನ್ನು ಪ್ರಚೋದಿಸುತ್ತಿರುವ ಪಾಕಿಸ್ಥಾನಕ್ಕೆ ಭಾರೀ ಮುಜುಗರ ಉಂಟಾಗಿದೆ.
ಕಾಶ್ಮೀರದಲ್ಲಿ ಕಾಶ್ಮೀರಿಗಳ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂಬುದಾಗಿ ನಿರಂತರವಾಗಿ ಸುಳ್ಳು ಪ್ರಚಾರ ನಡೆಸುತ್ತಾ ಬಂದು , ವಾಸ್ತವದಲ್ಲಿ ತಾನೇ ಬಲೂಚಿಸ್ತಾನದಲ್ಲಿ ಬಲೂಚಿಗಳು, ಸಿಂಗಳ ಮೇಲೆ ಕ್ರೂರ ದೌರ್ಜನ್ಯ ನಡೆಸುತ್ತಿರುವ ಪಾಕಿಸ್ಥಾನದ ಬರ್ಬರತೆಯ ವಿರುದ್ಧ ಬಲೂಚಿ ಸಂಸದರು ಬುಧವಾರ ಪಾಕ್ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಬಲವಾಗಿ ಬೆಂಬಲಿಸಿದರಲ್ಲದೆ, ಮೋದಿ ಮೋದಿ ಘೋಷಣೆಗಳನ್ನು ಕೂಗಿದರು. ಹಾಗೆಯೇ ಆಜಾದಿ ಘೋಷಣೆಗಳನ್ನೂ ಕೂಗಿದರು.
ಫ್ರೆಂಚ್ ವಸ್ತುಗಳನ್ನು ಬಹಿಷ್ಕರಿಸಬೇಕೆಂಬುದರ ಕುರಿತಂತೆ ಪಾಕ್ ಸಂಸತ್ತಿನಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ, ಭಾರತೀಯ ವಾಯುಪಡೆ ಪೈಲಟ್ ಅಭಿನಂದನ್ ವರ್ತಮಾನ್ ಅವರನ್ನು ಬಿಡುಗಡೆಗೊಳಿಸುವ ಸಂದರ್ಭವೂ ಉಲ್ಲೇಖಗೊಂಡಿತು. ಈ ಸಂದರ್ಭ ಪಾಕ್ ಮುಸ್ಲಿಂಲೀಗ್(ಪಿಎಂಎನ್-ಎಲ್) ಸಂಸದ ಆಯಾಜ್ ಸಾದಿಕ್ , ಅಭಿನಂದನ್ ಅವರನ್ನು ಬಿಡುಗಡೆಗೊಳಿಸದಿದ್ದರೆ ಭಾರತ ಪಾಕ್ ಮೇಲೆ ದಾಳಿ ನಡೆಸಲು ನಿರ್ಧರಿಸಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಪಾಕ್ ಸೇನಾಮುಖ್ಯಸ್ಥ ಹೇಗೆ ಥರಗುಟ್ಟಿದ್ದರು ಎಂಬುದನ್ನು ಬಹಿರಂಗಪಡಿಸಿದ್ದರು. ಅಲ್ಲದೆ ವರ್ತಮಾನ್ ಅವರನ್ನು ಬಿಡುಗಡೆಗೊಳಿಸದೆ ಹೋದರೆ ಇಂದೇ ರಾತ್ರಿ 9ಕ್ಕೆ ಭಾರತ ದಾಳಿ ನಡೆಸಲಿದೆ ಎಂಬುದಾಗಿ ಪಾಕ್ ವಿದೇಶಾಂಗ ಸಚಿವ ಖುರೇಶಿ ಅವರೇ ಎಚ್ಚರಿಸಿದ್ದರು . ಆಗ ಪಾಕ್ ಸೇನಾ ಮುಖ್ಯಸ್ಥ ಜ. ಖಮರ್ ಜಾವೇದ್ ಬಜ್ವಾ ಅವರ ಕಾಲುಗಳು ನಡುಗುತ್ತಿದ್ದವು ಎಂದು ಸಾದಿಕ್ ಬಹಿರಂಗಪಡಿಸಿದ್ದರು. ಈ ವರದಿಗಳಿಂದ ಪಾಕ್ ಸರಕಾರ ಮತ್ತು ಸೇನೆ ತೀವ್ರ ಮುಜುಗರಕ್ಕೀಡಾಗಿತ್ತು. ಇದೀಗ ಬಲೂಚಿ ಸಂಸದರ ನಿಲುವು ಪಾಕಿಗೆ ಇನ್ನಷ್ಟು ಪೇಚು ತಂದಿದೆ.
ಈ ಘಟನೆಯು , ಕೋವಿಡ್-19ರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲರಾಗಿರುವ ಮತ್ತು ವಿಪಕ್ಷ ನಾಯಕರ ವಿರುದ್ಧ ಸುಳ್ಳು ಕೇಸುಗಳನ್ನು ಜಡಿದು ಅಕಾರ ದುರ್ಬಳಕೆ ಮಾಡುತ್ತಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ವಿರುದ್ಧ ದೇಶದಲ್ಲಿ ಹೆಚ್ಚುತ್ತಿರುವ ಅಸಂತೋಷದ ಅಭಿವ್ಯಕ್ತಿ ಎಂದು ವಿಶ್ಲೇಷಿಸಲಾಗಿದೆ.
ಆರಂಭದಲ್ಲಿ ಖುರೇಶಿ ಫ್ರೆಂಚ್ ವಸ್ತುಗಳನ್ನು ಬಹಿಷ್ಕರಿಸಬೇಕೆಂಬ ನಿರ್ಣಯ ಕುರಿತಂತೆ ಮಾತನಾಡಲಾರಂಭಿಸಿದರು. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಫ್ರಾನ್ಸ್ ಸರಕಾರ ಇಸ್ಲಾಮ್ ವಿರೋ , ಯುರೋಪಿನಲ್ಲಿ ಇಸ್ಲಾಮ್‍ಪೊಬಿಯಾ ಇದ್ದು, ಇದರ ವಿರುದ್ಧ ಎಲ್ಲ ಮುಸ್ಲಿಂ ದೇಶಗಳು ಒಟ್ಟಾಗಬೇಕೆಂದು ಪ್ರತಿಪಾದಿಸಿದ್ದರು. ಆದರೆ ಚೀನಾ ಸರಕಾರವು ಕ್ಸಿಂಜಿಯಾಂಗ್ ಪ್ರಾಂತದಲ್ಲಿ ಉಯಿಗುರ್ ಮುಸ್ಲಿಮರ ಜನಾಂಗೀಯ ನಿರ್ಮೂಲನೆಯಲ್ಲಿ ತೊಡಗಿದ್ದರೂ ಇಮ್ರಾನ್‍ಖಾನ್ ಚಕಾರವೆತ್ತಲೂ ಆಗದೆ ಹೋಗಿದ್ದರು. ಈ ಸಂದರ್ಭ ವಿಪಕ್ಷ ಸದಸ್ಯರು ಪಾಕ್ ಸರಕಾರವನ್ನು ತರಾಟೆಗೆತ್ತಿಕೊಂಡರು. ಅನಂತರ ಬಲೂಚಿಸ್ತಾನ್ ಚಳವಳಿ ಕುರಿತಂತೆ ಅವರ ಮಾತು ಹೊರಳುತ್ತಿದ್ದಂತೆ, ವಿಪಕ್ಷ ಸದಸ್ಯರು ಅವರ ಮಾತಿಗೆ ತೀವ್ರ ಆಕ್ಷೇಪ ಎತ್ತಿದರು. ಈ ಸಂದರ್ಭ ಬಲೂಚಿ ಸಂಸದರು ಪ್ರಧಾನಿ ಮೋದಿಯವರನ್ನು ಶ್ಲಾಘಿಸುತ್ತಾ ಅವರ ಪರ ಘೋಷಣೆಗಳನ್ನು ಕೂಗಿದರು. ಬಲೂಚ್ ಸೇರಿದಂತೆ ಪಾಕ್ ಆಕ್ರಮಿತ ಕಾಶ್ಮೀರದ ಭಾಗಗಳನ್ನು ತೊರೆಯುವಂತೆ ಭಾರತ ಈಗಾಗಲೇ ಪಾಕಿಸ್ತಾನಕ್ಕೆ ನೇರವಾಗಿ ಆಗ್ರಹಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ