ರಾಯಭಾರ ಕಚೇರಿಯಲ್ಲೇ ಸುರೇಂದ್ರನ್ ಮಾತುಕತೆ: ಆರೋಪಿ ಸರಿತ್ ಚಿನ್ನ ಸಾಗಣೆ: ಯುಎಇಗೆ ಕೇರಳ ಸಚಿವ ಭೇಟಿ

ತಿರುವನಂತಪುರಂ: ಕೇರಳದಲ್ಲಿ ಚಿನ್ನದ ಅಕ್ರಮ ಸಾಗಣೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಕೇರಳ ಸಚಿವ ಕಡಂಪಳ್ಳಿ ಸುರೇಂದ್ರನ್ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಟಿ.ಜಲೀಲ್ ಹಲವು ಬಾರಿ ಯುಎಇ ರಾಯಭಾರ ಕಚೇರಿಗಳಿಗೆ ಭೇಟಿ ನೀಡಿದ್ದರು ಎಂಬುದು ಬಯಲಾಗಿದೆ.
ಈ ಕುರಿತು ಜಾರಿ ನಿರ್ದೇಶನಾಲಯ ಅಕಾರಿಗಳಿಗೆ ಪ್ರಮುಖ ಆರೋಪಿ ಸರಿತ್ ಪಿ.ಎಸ್. ಮಾಹಿತಿ ನೀಡಿದ್ದು, ಪ್ರಕರಣದಲ್ಲಿ ಕೇರಳ ಸರ್ಕಾರ ಭಾಗಿಯಾಗಿದೆ ಎಂಬುದರ ಕುರಿತು ದಿನಕ್ಕೊಂದು ಮಾಹಿತಿ ಲಭ್ಯವಾಗುತ್ತಿವೆ.
ಕಡಂಪಳ್ಳಿ ಸುರೇಂದ್ರನ್ ಒಮ್ಮೆ ಕಾನ್ಸುಲೇಟ್ ಜನರಲ್ ಕಚೇರಿಗೆ ಭೇಟಿ ನೀಡಿದ್ದು, ಜನರಲ್ ಪ್ರತ್ಯೇಕ ಕೊಠಡಿಯಲ್ಲಿ ಮಾತುಕತೆ ನಡೆಸಿದ್ದಾರೆ. ಯುಎಇಯಲ್ಲಿ ತಮ್ಮ ಮಗನಿಗೆ ಉದ್ಯೋಗ ಕೊಡಿಸುವ ದಿಸೆಯಲ್ಲಿ ಅವರು ಭೇಟಿ ನೀಡಿದ್ದರು ಎಂಬುದಾಗಿ ಸರಿತ್ ಮಾಹಿತಿ ನೀಡಿದ್ದಾರೆ.
ಇನ್ನು ರಾಯಭಾರ ಕಚೇರಿ ಆಯೋಜಿಸಿದ್ದ ರಂಜಾನ್ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಕೆ.ಟಿ. ಜಲೀಲ್ ಭಾಗಿಯಾಗಿದ್ದರು ಎಂಬುದಾಗಿ ಸಹ ಅಕಾರಿಗಳಿಗೆ ವಿವರಿಸಿದ್ದಾರೆ.
ಅಷ್ಟೇ ಅಲ್ಲ, ಪ್ರಕರಣಕ್ಕೆ ಸಂಬಂಸಿದಂತೆ ಅಮಾನತಾಗಿರುವ ಕೇರಳ ಮುಖ್ಯಮಂತ್ರಿ ಕಚೇರಿ ಮುಖ್ಯ ಕಾರ್ಯದರ್ಶಿ ಎಂ.ಶಿವಶಂಕರ್ ಅವರನ್ನು ಅವರ ಅಪಾರ್ಟ್‍ಮೆಂಟ್‍ನಲ್ಲಿ ಭೇಟಿಯಾಗಿದ್ದೆವು ಎಂಬುದಾಗಿ ಸಹ ಸರಿತ್ ಹೇಳಿದ್ದಾರೆ.
ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ರಾಯಭಾರ ಮಾರ್ಗ ಬಳಸಿ ಅಕ್ರಮವಾಗಿ ಸಾಗಿಸುತ್ತಿದ್ದ 15 ಕೋಟಿ ರೂ. ಮೌಲ್ಯದ 30 ಕೆಜಿ ಚಿನ್ನ ಸಾಗಣೆ ಪ್ರಕರಣದಲ್ಲಿ ಈಗಾಗಲೇ ಹಲವು ಆರೋಪಿಗಳನ್ನು ಬಂಸಲಾಗಿದ್ದು, ಪ್ರಕರಣಕ್ಕೆ ಸಂಬಂಸಿದಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆ ನೀಡಬೇಕು ಎಂಬ ಒತ್ತಾಯ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ