ದಸರಾ ಆಚರಣೆಗೆ ನಿಯಮಾವಳಿ ಶಿಫಾರಸು

ಬೆಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ವಿಶ್ವ ವಿಖ್ಯಾತ ದಸರಾ ಆಚರಣೆ ಹೇಗಿರಬೇಕು ಎಂದು ಡಾ.ಎಂ.ಕೆ. ಸುದರ್ಶನ್ ನೇತೃತ್ವದ ತಾಂತ್ರಿಕ ಸಲಹಾ ಸಮಿತಿಯು ಸರ್ಕಾರಕ್ಕೆ ಶಿಫಾರಸು ಸಲ್ಲಿಸಿದೆ.
ಮೈಸೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಶಿಫಾರಸುಗಳನ್ನು ಸಲ್ಲಿಸಿರುವ ಸಮಿತಿ, ಪ್ರಮುಖವಾಗಿ ವ್ಯಕ್ತಿಗತ ಅಂತರ, ಮಾ¸್ಕï ಧಾರಣೆ ಸೇರಿದಂತೆ ಇನ್ನಿತರ ಮುಂಜಾಗ್ರತಾ ಕ್ರಮಗಳಲ್ಲಿ ರಾಜಿಯಾಗದಂತೆ ಸ್ಪಷ್ಟವಾಗಿ ಹುಲ್ಲೆಖಿಸಿದೆ.
ಅ.17 ರಿಂದ 26 ರವರೆಗೆ ದಸರಾ ಆಚರಣೆ ನಡೆಯಲಿದ್ದು, ಮೊದಲ ದಿನ ಚಾಮುಂಡಿ ಬೆಟ್ಟದಲ್ಲಿ ಮಧ್ಯಾಹ್ನದ ವೇಳೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಚಾಲನೆ ನೀಡಲಿದಾರೆ. ಅಕಾರಿ, ಸಿಬ್ಬಂದಿ, ಕಲಾವಿದರು, ಭದ್ರತಾ ಸಿಬ್ಬಂದಿ ಸೇರಿ 200 ಕ್ಕಿಂತ ಹೆಚ್ಚು ಜನರು ಸೇರದಂತೆ ನೋಡಿಕೊಳ್ಳಬೇಕು.
ಅ.24 ರವರೆಗೆ 8 ದಿನ ಮೈಸೂರು ಅರಮನೆ ಆವರಣದಲ್ಲಿ ಸಂಜೆ ಸಮಯದಲ್ಲಿ 2 ಗಂಟೆಗಳ ಕಾಲ ಮಾತ್ರ ಸಾಂಸ್ಕತಿಕ ಕಾರ್ಯಕ್ರಮಗಳನ್ನು ನಡೆಸಬಹುದಾಗಿದ್ದು, ಹೊರರಾಜ್ಯ ಅಥವಾ ಹೊರದೇಶಗಳ ಕಲಾವಿದರಿಗೆ ಅವಕಾಶ ನೀಡಬಾರದು. ಸ್ಥಳೀಯ ಕಲಾವಿದರಿಗೇ ಆದ್ಯತೆ ನೀಡಬೇಕು. 50 ಕ್ಕೂ ಕಲಾವಿದರಿಗೆ ಅವಕಾಶ ಕೊಡುವುದು ಬೇಡ.
ಅ.27 ರವರೆಗೆ 10 ದಿನಗಳ ಕಾಲ ಸಂಜೆ 7 ಗಂಟೆಗೆ ಮೈಸೂರಿನ ಆಯ್ದ ಪ್ರದೇಶಗಳಲ್ಲಿ ವಿದ್ಯುದ್ದೀಪಾಲಂಕಾರ ಮಾಡಬಹುದಾಗಿದ್ದು, ಹೆಚ್ಚು ಜನದಟ್ಟಣೆ ಆಗದಂತೆ, ಪ್ರತಿಯೊಬ್ಬ ನಾಗರಿಕರೂ ಮಾ¸್ಕï ಧರಿಸಿರುವಂತೆ ಪೊಲೀಸರು ನಿಗಾ ಇಡಬೇಕು.
ಅ.26 ರ ಸೋಮವಾರದಂದು ನಡೆಯಲಿರುವ ಜಂಬೂ ಸವಾರಿ ಸಂದರ್ಭದಲ್ಲಿ 300 ಕ್ಕಿಂತ ಅಕ ಮಂದಿ ಸೇರಬಾರದು.
ಈ ಯಾವುದೇ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರೂ ಅ.14 ರ ನಂತರ ಕೊರೋನಾ ಪರೀಕ್ಷೆ ಮಾಡಿಸಿರಬೇಕು. ನೆಗಟೀವ್ ವರದಿ ಇದ್ದವರು ಮಾತ್ರ ಭಾಗಿಯಾಗಲು ಅವಕಾಶ ನೀಡಬೇಕು ಎಂದು ಶಿಫಾರಸು ಮಾಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ