ಹೊಸದಿಲ್ಲಿ : ದೇಶದ ರಾಜಕಾರಣದಲ್ಲಿ ಭಾರಿ ಸದ್ದು ಮಾಡಿದ ಬೋಫೆÇೀರ್ಸ್ ಫಿರಂಗಿ ಹಗರಣದಲ್ಲಿ ಮಾಜಿ ಪ್ರಧಾನಿ ದಿವಂಗತ ರಾಜೀವ್ಗಾಂ ಭಾಗಿ ಎಂದು ಸಿಬಿಐ ನಿವೃತ್ತ ನಿರ್ದೇಶಕ ಆರ್. ಕೆ. ರಾಘವನ್ ಹೇಳಿದ್ದಾರೆ. ಇದೇ ವೇಳೆ ಹಗರಣದಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗದಂತೆ ಅಂದಿನ ಕಾಂಗ್ರೆಸ್ ಸರ್ಕಾರ ಷಡ್ಯಂತ್ರ ನಡೆಸಿತ್ತೆಂದು ಅವರು ಬೊಟ್ಟು ಮಾಡಿದ್ದಾರೆ.
ದೇಶದ ಪ್ರಮುಖ ಹಾಗೂ ದಕ್ಷ ಪೋಲೀಸ್ ಅಕಾರಿಗಳಲ್ಲಿ ಒಬ್ಬರಾದ ರಾಘವನ್ ಬರೆದ ಎ ರೋಡ್ ವೆಲ್ ಟ್ರಾವಲ್ಡ್ ಪುಸ್ತಕದಲ್ಲಿ, ಬೋಫೆÇೀರ್ಸ್ ಪ್ರಕರಣದ ತನಿಖೆಯ ಹಿಂದಿನ ಕೆಲವೊಂದು ಸೋಟಕ ಸಂಗತಿಗಳನ್ನು ಉಲ್ಲೇಖಿಸಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.
ಕೈ ನಾಯಕರಿಗೆ ಹಣ ಸಂದಾಯವಾಗಿದೆ ಸ್ಪೀಡಿಷ್ ಕಂಪನಿಯಿಂದ ಕಾಂಗ್ರೆಸ್ನ ಕೆಲ ಪ್ರಮುಖರಿಗೆ ಹಣ ಸಂದಾಯವಾಗಿದ್ದು ಹೌದು. ಇದರಲ್ಲಿ ಅನುಮಾನವೇ ಇಲ್ಲ. ಆದರೆ ನೇರವಾಗಿ ಇದಕ್ಕೆ ಪುರಾವೆಗಳಂತೂ ದೊರಕಲಾರವು. ಆಡಳಿತ ನಡೆಸುವಂತಹ ವ್ಯಕ್ತಿಗಳು ತಮ್ಮ ಪಕ್ಷದ ಪ್ರಮುಖರನ್ನು ಕಾನೂನಿನ ಸಂಕೋಲೆಯಿಂದ ತಪ್ಪಿಸಲು ಅದೆಂತಹ ಸಂಚು ತಂತ್ರ ನಡೆಸುತ್ತಾರೆ ಮತ್ತು ಒಂದು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾದವರನ್ನು ಅತ್ಯಂತ ಜಾಣತನದಿಂದ ತಪ್ಪಿಸಲು ತೆರೆಮರೆಯ ಹಿಂದೆ ಯಾವ ಮಟ್ಟದಲ್ಲಿ ಷಡ್ಯಂತ್ರ ನಡೆಯುತ್ತದೆ ಎಂಬುದಕ್ಕೆ ಇದೇ ನಿದರ್ಶನ ಎಂದು ಅವರು ಹೇಳಿದ್ದಾರೆ.
ವೆಸ್ಟ್ಲ್ಯಾಂಡ್ ಎಂಬ ಪ್ರಕಾಶನ ಸುಮಾರು 213 ಪುಟಗಳ ಪುಸ್ತಕವನ್ನು ಪ್ರಕಟಿಸಿದ್ದು ಇದರ ಬೆಲೆ 599 ರೂಪಾಯಿಗಳಾಗಿದೆ. ರಾಜೀವ್ಗಾಂ 1991 ರಲ್ಲಿ ಹತ್ಯೆಯಾದಾಗ ಶ್ರೀ ಪೆರಂಬದೂರು ಎಸ್ಪಿಯಾಗಿದ್ದ ರಾಘವನ್ , 1999ರಲ್ಲಿ ಸಿಬಿಐ ನಿರ್ದೇಶಕರಾದ ಮೇಲೆ ಬೋಪೋರ್ಸ್ ತನಿಖೆಗೆ ಚಾಲನೆ ನೀಡಿದ್ದರು. ಈ ಸಮಯದಲ್ಲಿ ಅವರಿಗಾದ ಕೆಲ ಅನುಭವಗಳು ಮತ್ತು ಪ್ರತಿಷ್ಠಿತ ನಾಯಕರಿಂದ ಪ್ರಕರಣದ ನೈಜ ತನಿಖೆಗೆ ಉಂಟಾಗಿದ್ದ ತೊಡಕುಗಳನ್ನು ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ.
ದೇಶದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಬೇಕೆಂಬ ದಿಶೆಯಲ್ಲಿ ರಾಜೀವ್ಗಾಂ ಪ್ರಧಾನಿಯಾದ ಮೇಲೆ 1989ರಲ್ಲಿ 1437 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಬೋಪೋರ್ಸ್ ಕಂಪನಿಯಿಂದ ಹೌವಿಟ್ಜರ್ ಫಿರಂಗಿಗಳನ್ನು ಖರೀದಿಸಲಾಗಿತ್ತು . 1986ರಲ್ಲಿ ಫಿರಂಗಿ ಖರೀದಿ ಸಂಬಂಧ ಭಾರತ , ಸ್ವೀಡನ್ ನಡುವೆ ಒಡಂಬಡಿಕೆಗೆ ಸಹಿ ಹಾಕಲಾಗಿದೆ. ಒಪ್ಪಂದದ ವೇಳೆ ಸ್ವೀಡನ್ ಕಂಪನಿಯಿಂದ ಕಾಂಗ್ರೆಸ್ ಸರ್ಕಾರದ ಪ್ರಮುಖರಿಗೆ 64 ಕೋಟಿ ರೂಪಾಯಿ ಲಂಚ ಪಾವತಿಯಾಗಿದೆ ಎಂದು ಆರೋಪಿಸಿದ್ದ ಅಂದಿನ ಪ್ರತಿಪಕ್ಷಗಳು ಸಂಸತ್ ಹೊರಗೂ, ಒಳಗೆ ಪ್ರತಿಭಟನೆ ನಡೆಸಿ ಸಿಬಿಐ ತನಿಖೆಗೆ ಆಗ್ರಹಿಸಿದ್ದವು. ಈ ಪ್ರಕರಣದಲ್ಲಿ ಕ್ವಟ್ರೋಚಿ, ರಕ್ಷಣಾ ಇಲಾಖೆಯ ಮಾಜಿ ಕಾರ್ಯದರ್ಶಿ ಎಸ್. ಕೆ. ಭಟ್ನಾಗರ್, ಅನಿವಾಸಿ ಭಾರತೀಯ ಉದ್ಯಮಿ ವಿನ್ ಚಡ್ಡ ಹಾಗೂ ಮಾರ್ಟಿನ್ ಕಂಪನಿಯನ್ನು ಪ್ರಮುಖ ಆರೋಪಿಗಳಾಗಿ ಉಲ್ಲೇಖಿಸಲಾಗಿತ್ತು .
ಬೋಪೋರ್ಸ್ ಹಗರಣಕ್ಕೆ ಸಂಬಂಸಿದಂತೆ ವಿಶೇಷ ಕೋರ್ಟ್ , ದಿಲ್ಲಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಮುಂದೆ ದಾಖಲಾಗಿದ್ದ ಎಲ್ಲ ಮೊಕದ್ದಮೆಗಳೂ ವಜಾಗೊಂಡಿವೆ. 2004ರಲ್ಲಿ ಕ್ವಟ್ರೋಚಿ ಹಾಗೂ ಭಟ್ನಾಗರ್ ವಿರುದ್ಧ ದಾಖಲಾಗಿದ್ದ ಚಾರ್ಜ್ಶೀಟ್ ಅನ್ನು ದಿಲ್ಲಿ ಹೈಕೋರ್ಟ್ ಅನೂರ್ಜಿತಗೊಳಿಸಿದೆ. ಇದೇ ಕೋರ್ಟ್ನಲ್ಲಿ ಹಿಂದೂಜಾ ಸಹೋದರರ ವಿರುದ್ಧ ದಾಖಲಾಗಿದ್ದ ದೋಷಾರೋಪ ಪಟ್ಟಿ ಕೂಡಾ 2005 ರಲ್ಲಿ ರದ್ದಾಯಿತು. 2011 ರಲ್ಲಿ ಸಿಬಿಐ ಕೋರ್ಟ್ ಮುಂದೆ ಇಡೀ ಪ್ರಕರಣ ವಜಾಗೊಂಡು ಎಲ್ಲ ಆರೋಪಿಗಳೂ ನಿರಾಳರಾದರು. ಅನಂತರ ಇದು ಸುಪ್ರೀಂಕೋರ್ಟ್ ಮೆಟ್ಟಿಲೇರಿದರೂ ಮುಂದಿನ ತನಿಖೆಗೆ ದೇಶದ ಅತ್ಯುನ್ನತ ನ್ಯಾಯಪೀಠ ಒಪ್ಪಲಿಲ್ಲ.