ಬಾದಾಮಿಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಭರ್ಜರಿ ಪ್ರಚಾರ: ಮಾಜಿ ಶಾಸಕ ಅಶೋಕ ಕಟ್ಟಿಮನಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ

ಬಾಗಲಕೋಟೆ:ಏ-30: ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಬಾದಾಮಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಧುಮುಕಿದ್ದು, ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಭರ್ಜರಿ ಪ್ರಚಾರ ನಡೆಸಲಿದ್ದಾರೆ.

ಈ ನಡುವೆ ಹಿರಿಯ ದಲಿತ ಮುಖಂಡ, ಮಾಜಿ ಶಾಸಕ ಅಶೋಕ ಕಟ್ಟಿಮನಿ ಅವರು ಕಾಂಗ್ರೆಸ್‌ ತೊರೆದು ಇದೀಗ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಒಂದು ಬಾರಿ ಮುಧೋಳ ಕ್ಷೇತ್ರದ ಎಂಎಲ್‌ಎ ಹಾಗೂ ಎರಡು ಬಾರಿ ಎಂಎಲ್‌ಸಿ ಆಗಿದ್ದ ಕಟ್ಟಿಮನಿ ಬಾದಾಮಿ ಮೂಲದವರಾಗಿದ್ದಾರೆ. ಶ್ರೀರಾಮುಲು ಅವರು, ಬಾದಾಮಿ ಕ್ಷೇತ್ರದ ಹೊಸೂರ ಗ್ರಾಮದಲ್ಲಿ ಪ್ರಚಾರದ ವೇಳೆ ಮಾಜಿ ಶಾಸಕ ಕಟ್ಟಿಮನಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಶ್ರೀರಾಮುಲು ಬೆಳಗ್ಗೆ ಹೊಸೂರ ಗ್ರಾಮದಲ್ಲಿ ಪ್ರಚಾರ ಮುಗಿಸಿ, ಜಾಲಿಹಾಳ ಗ್ರಾಮದಲ್ಲಿ ಪ್ರಚಾರ ನಡೆಸಿದರು. ಗ್ರಾಮೀಣ ಪ್ರದೇಶದಲ್ಲಿ ಮನೆ ಮನೆಗೆ ಭೇಟಿ ನೀಡಿ ಬಹಿರಂಗ ಭಾಷಣ ಮಾಡಿದ್ದಾರೆ. ಇದಕ್ಕೆ ಸ್ಥಳೀಯ ಮುಖಂಡರು ಸಾಥ್ ನೀಡಿದ್ದಾರೆ.

Karnataka assembly election,Badami,Shriramulu

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ