ಬಾದಾಮಿಯಿಂದ ಸಿಎಂ ಸಿದ್ದರಾಮಯ್ಯ ಏ.23ಕ್ಕೆ ನಾಮಪತ್ರ ಸಲ್ಲಿಕೆ ಎಂದು ಟ್ವೀಟ್ ಮಾಡಿ ಕೆಲ ಹೊತ್ತಲೇ ಡಿಲಿಟ್ ಮಾಡಿದ ಸಿಎಂ ಪುತ್ರ ಡಾ.ಯತೀಂದ್ರ

ಮೈಸೂರು:ಏ-20: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸುವ ವಿಷಯ ಇನ್ನೂ ಕಗ್ಗಂಟಾಗಿಯೇ ಇರುವ ನಡುವೆಯೇ ಸಿಎಂ ಪುತ್ರ ಡಾ.ಯತೀಂದ್ರ ಅವರು ಸಿದ್ದರಾಮಯ್ಯ ಬಾದಾಮಿಯಿಂದ ನಾಮಪತ್ರ ಸಲ್ಲಿಸುವ ವಿಚಾರ ಟ್ವೀಟ್ ಮಾಡಿ ಬಳಿಕ ಕೆಲ ಹೊತ್ತಲ್ಲೇ ಡಿಲೀಟ್‌ ಮಾಡಿರುವುದು ಮತ್ತಷ್ಟು ಗಮನಸೆಳೆದಿದೆ.

ಎಪ್ರಿಲ್‌ 23 ರಂದು ಸಿದ್ದರಾಮಯ್ಯ ಅವರು ಬಾದಾಮಿಯಂದ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಟ್ವೀಟ್‌ ಮಾಡಿದ್ದರು. ಆದರೆ ಕೆಲ ಹೊತ್ತಲ್ಲೇ ಟ್ವೀಟನ್ನು ಅಳಿಸಿ ಹಾಕಿರುವುದು ಹಲವು ಗೊಂದಲಗಳಿಗೆ ಕಾರಣವಾಗಿದೆ.

ಮೈಸೂರಿನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ ‘ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯ ಮುಖಂಡರು, ಎಸ್‌.ಆರ್‌. ಪಾಟೀಲ್‌, ಎಂ.ಬಿ .ಪಾಟೀಲ್‌, ತಿಮ್ಮಾಪುರ ಮೊದಲಾದ ನಾಯಕರು ಬಾದಾಮಿಯಂದ ಸ್ಪರ್ಧಿಸಲು ಒತ್ತಾಯಿಸಿದ್ದರು. ನಾನು ಬೇಡ ಅಂದಿದ್ದೆ. ಹೈಕಮಾಂಡ್‌ಗೆ ಈ ಬಗ್ಗೆ ಮನವಿಯನ್ನೂ ಸಲ್ಲಿಸಿದ್ದಾರೆ. ಹೈ ಕಮಾಂಡ್‌ ಯಾವ ತೀರ್ಮಾನ ಕೈಗೊಳ್ಳುತ್ತದೆಯೋ ಅದಕ್ಕೆ ನಾನು ಬದ್ಧ’ ಎಂದಿದ್ದಾರೆ

ಇನ್ನು ಈ ಬಗ್ಗೆ ರಾಹುಲ್‌ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿ ನಾಳೆ ಅಂತಿಮ ನಿರ್ಧಾರಕ್ಕೆ ಬರುತ್ತೇನೆ ಎಂದು ತಿಳಿಸಿದ್ದಾರೆ.

Assembly election,CM Siddaramaih,nomination,Badami, Tweet delete

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ