ತಿರುವನಂತಪುರ: ಮಲೆಯಾಳಂ ತುಳಂ ಮಾಸದ ಹಿನ್ನೆಲೆ ಕೇರಳದ ಪ್ರಸಿದ್ಧ ಶಬರಿಮಲೆ ದೇವಾಲಯದಲ್ಲಿ ಶುಕ್ರವಾರ(ಅ. 16)ದಿಂದ 5 ದಿನ ಭಕ್ತರ ದರ್ಶನಕ್ಕೆ ತಿರುವಾಂಕೂರು ದೇವಸ್ವಂ ಮಂಡಳಿ (ಟಿಬಿಡಿ) ಅವಕಾಶ ನೀಡಿದೆ.
ಕೋವಿಡ್-19ನಿಂದಾಗಿ ಕಳೆದ ಮಾರ್ಚ್ 18ರಂದು ದೇಶಾದ್ಯಂತ ಕೇಂದ್ರ ಸರ್ಕಾರ ಲಾಕ್ಡೌನ್ ಹೇರಿದ್ದರಿಂದ ದೇವಾಲಯದಲ್ಲಿ ಭಕ್ತರ ಪ್ರವೇಶವನ್ನು ರದ್ದುಗೊಳಿಸಲಾಗಿತ್ತು. ತುಳಂ ಮಾಸದ ಅಂಗವಾಗಿ 5 ದಿನಗಳ ಮಟ್ಟಿಗೆ ದೇವಾಲಯದಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಆದರೆ, ಈ ಅವಯಲ್ಲಿ ಟಿಬಿಡಿ ದೇಗುಲಕ್ಕೆ ಆಗಮಿಸುವ ಭಕ್ತರಿಗೆ ಕೋವಿಡ್-19 ಹಿನ್ನೆಲೆ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಿದೆ.
ಟಿಡಿಬಿ ಮಾರ್ಗಸೂಚಿಗಳು
• ಆದ್ಯತೆ ಆಧಾರದಲ್ಲಿ ದರ್ಶನಕ್ಕಾಗಿ ಆನ್ಲೈನ್ ಬುಕ್ಕಿಂಗ್
• ದಿನಕ್ಕೆ 250 ಮಂದಿ ಭಕ್ತರಿಗೆ ಮಾತ್ರ ಪ್ರವೇಶ
• ನೋಂದಣಿಗೊಂಡ ಭಕ್ತರಿಗೆ ಮಾತ್ರ ದೇವಾಲಯ ಪ್ರವೇಶಕ್ಕೆ ಅವಕಾಶ
• ಪಂಬಂ ತಲುಪುವುದಕ್ಕೂ 48 ಗಂಟೆಗಳ ಮೊದಲು ಭಕ್ತರು ಕೋವಿಡ್-19 ನೆಗೆಟಿವ್ ದೃಢೀಕರಣ ಪತ್ರ ಹೊಂದಿರುವುದು ಕಡ್ಡಾಯ
• ಕೋವಿಡ್-19 ದೃಢೀಕರಣ ಪತ್ರ ಹೊಂದಿಲ್ಲದ ಭಕ್ತರು ಪರೀಕ್ಷೆಗೊಳಪಟ್ಟು ಫಲಿತಾಂಶದಲ್ಲಿ ನೆಗೆಟಿವ್ ಬಂದರಷ್ಟೇ ಪ್ರವೇಶ