ಕಣದಲ್ಲಿದ್ದಾರೆ 1,17,383 ಅಭ್ಯರ್ಥಿಗಳು ಗ್ರಾ.ಪಂ. ಮೊದಲನೇ ಹಂತಕ್ಕೆ ಇಂದು ಮತ

ಬೆಂಗಳೂರು: ರಾಜ್ಯದಲ್ಲಿ ಗ್ರಾಮ ಪಂಚಾಯಿತಿಯ ಮೊದಲ ಹಂತದ ಚುನಾವಣೆ ಮಂಗಳವಾರ ನಡೆಯಲಿದ್ದು, ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನಕ್ಕೆ ಅವಕಾಶವಿದೆ. ರಾಜ್ಯದ 113 ತಾಲೂಕುಗಳ 43,238 ಸ್ಥಾನಗಳಿಗೆ ಒಟ್ಟು 1,17,383 ಅಭ್ಯರ್ಥಿಗಳು ಕಣದಲ್ಲಿರೆ. ಕೆಲವೆಡೆ ಸ್ನೇಹಿತರು, ಬಂಧು-ಬಳಗದವರೇ ಎದುರಾಗಳಿಗಳಾಗಿರುವುದು ವಿಶೇಷ.
ಮೊದಲ ಹಂತದಲ್ಲಿ 113 ತಾಲೂಕುಗಳಲ್ಲಿ 3,019 ಗ್ರಾಪಂಗಳಿದ್ದು, ಒಟ್ಟು 48,048 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿತ್ತು. ಈಗಾಗಲೇ 4,377 ಮಂದಿ ಅವಿರೋಧವಾಗಿ ಆಯ್ಕೆ ಆಗಿದ್ದು, 432 ಸ್ಥಾನಗಳು ನಾಮಪತ್ರ ಸಲ್ಲಿಕೆ ಮಾಡದೆ ಖಾಲಿ ಉಳಿದಿವೆ. ಹೀಗಾಗಿ 43,238 ಸ್ಥಾನಗಳಿಗೆ ಮಾತ್ರ ಮತದಾನ ನಡೆಯಲಿದೆ.
ಬೀದರ್ ಜಿಲ್ಲೆಯಲ್ಲಿ ಇವಿಎಂ ಬಳಕೆ:
ಬೀದರ್ ಜಿ¯್ಲಯಲ್ಲಿ ಮಾತ್ರ ಮತಯಂತ್ರ(ಇವಿಎಂ) ಬಳಕೆ ಮಾಡಲಾಗುತ್ತಿದ್ದು, ಉಳಿದ 29 ಜಿಲ್ಲೆಗಳಲ್ಲಿ ಮತಪತ್ರ ಬಳಸಲಾಗುತ್ತದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ದತ್ತ ಜಯಂತಿ ಕಾರಣದಿಂದಾಗಿ ಕಾನೂನು ಸುವ್ಯವಸ್ಥೆ ಕಾರಣಕ್ಕೆ ಒಂದೇ ಹಂತದಲ್ಲಿಯೇ ಮತದಾನ ನಡೆಯಲಿದೆ.
ಸೋಂಕಿತರ ಮತದಾನಕ್ಕೆ ಪ್ರತ್ಯೇಕ ಅವ ನಿಗದಿ:
ಮತದಾನದ ವೇಳೆ ಕೋವಿಡ್ ಹರಡದಂತೆ ಮುನ್ನೆಚ್ಚಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸೋಂಕಿತರು ಮತದಾನ ಮಾಡಲು ಕೊನೆಯ ಒಂದು ಗಂಟೆ ಅವಕಾಶ ನೀಡಲಾಗಿದೆ. ಸಂಜೆ 4ರಿಂದ 5ರ ವರೆಗೆ ಮತದಾನ ಮಾಡಬಹುದು. ಮತದಾನ ಮಾಡಲು ಮತಗಟ್ಟೆ ಬಳಿ ಬಂದ ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ 45 ಸಾವಿರಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
2,97,15,048 ಮತದಾರರು:
ಗ್ರಾ.ಪಂ.ನ ಎರಡು ಹಂತದ ಚುನಾವಣೆಗೆ 1,49,71,676 ಪುರುಷರು, 1,47,41,964 ಮಹಿಳೆಯರು, 1408 ತೃತಿಯ ಲಿಂಗಿಗಳು ಸೇರಿ ಒಟ್ಟು 2,97,15,048 ಮತದಾರರಿದ್ದಾರೆ. 5847 ಚುನಾವಣಾಕಾರಿ ಹಾಗೂ 6085 ಸಹಾಯಕ ಚುನಾವಣಾಕಾರಿಗಳನ್ನು ನೇಮಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ