ಇಸ್ಲಾಮಾಬಾದ್,ಜು.26– ಪಾಕಿಸ್ತಾನವು ಭಾರತದಿಂದ 36 ದಶದಲಕ್ಷ ಡಾಲರ್ (250ಕೋಟಿ ರೂಗಳು) ಮೌಲ್ಯದ ರೋಗ ಪ್ರತಿರೋಧಕ ಲಸಿಕೆಗಳನ್ನು ಆಮದು ಮಾಡಿಕೊಂಡಿದೆ.
ಹುಚ್ಚುನಾಯಿ ಕಡಿತ ರೋಗ ಪ್ರತಿರೋಧಕ ಮತ್ತು ಸರ್ಪ ಕಡಿತ ಪ್ರತಿರೋಧಕ ಲಸಿಕೆಗಳು ಹಾಗೂ ಚುಚ್ಚುಮದ್ದುಗಳು ಈ ವಹಿವಾಟಿನಲ್ಲಿ ಸೇರಿವೆ.
ಪಾಕಿಸ್ತಾನದಲ್ಲಿ ಇಂತಹ ಔಷಧಿಗಳು ಮತ್ತು ಲಸಿಕೆಗಳನ್ನು ಸಾಕಷ್ಟು ಪ್ರಮಾಣದಲ್ಲಿ ತಯಾರಿಸುತ್ತಿಲ್ಲವಾದ ಕಾರಣ ಕಳೆದ 16 ತಿಂಗಳಿನಿಂದ ಒಟ್ಟು 250 ಕೋಟಿ ರೂ. ಮೌಲ್ಯದ ರೋಗ ಪ್ರತಿರೋಧಕ ಔಷಧಿಗಳನ್ನು ಮಾಡಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಸೇವೆಗಳ ಸಚಿವಾಲಯ ತಿಳಿಸಿದೆ.
ಈ ಕುರಿತು ಸಂಸದ ರೆಹಮಾನ್ ಮಲಿಕ್ ಅವರು ಭಾರತದಿಂದ ಆಮದುಕೊಳ್ಳಲಾದ ಇಂತಹ ಔಷಧಿಗಳ ಗುಣಮಟ್ಟವಾಗಿದೆಯೇ ಎಂಬ ಮಾಹಿತಿಯನ್ನು ಕೋರಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವಾಲಯವು ಭಾರತ ರಫ್ತು ಮಾಡಿರುವ ರೋಗ ಪ್ರತಿರೋಧಕ ಔಷಧಿ ಮತ್ತು ಲಸಿಕೆಗಳು ಅತ್ಯುತ್ತಮ ಗುಣಮಟ್ಟದಿಂದ ಕೂಡಿವೆ ಎಂದು ಸ್ಪಷ್ಟಪಡಿಸಿದೆ.