ರಿಷಿ ಕಪೂರ್ ಅಭಿನಯದ ಮುಲ್ಕ್ ಚಿತ್ರಕ್ಕೆ ಪಾಕಿಸ್ತಾನದಲ್ಲಿ ನಿಷೇಧ!

ಮುಂಬೈ: ಖ್ಯಾತ ಬಾಲಿವುಡ್ ನಟ ರಿಷಿಕಪೂರ್ ಮತ್ತು ಟಾಪ್ಸಿ ಪನ್ನು ಅಭಿನಯದ ಬಹು ನಿರೀಕ್ಷಿತ ಮುಲ್ಕ್ ಚಿತ್ರಕ್ಕೆ ಪಾಕಿಸ್ತಾನ ಸೆನ್ಸಾರ್ ಮಂಡಳಿ ನಿಷೇದ ಹೇರಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸ್ವತಃ ಚಿತ್ರದ ನಿರ್ದೇಶಕ ಅನುಭವ್ ಸಿನ್ಹಾ ಅವರು ಟ್ವೀಟ್ ಮಾಡಿದ್ದು, ಪಾಕಿಸ್ತಾನ ಸೆನ್ಸಾರ್ ಮಂಡಳಿಯ ಕ್ರಮ ಸರಿಯಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಚಿತ್ರವು ಒಂದು ಒಳ್ಳೆಯ ಕೋಮುಸೌಹಾರ್ಧ ಸಂದೇಶವನ್ನು ಹೊಂದಿದ್ದು, ಈ ಚಿತ್ರದ ಮೇಲಿನ ನಿಷೇಧ ನನಗೆ ತೀವ್ರ ನೋವುಂಟು ಮಾಡಿದೆ ಎಂದು ಹೇಳಿದ್ದಾರೆ.
ಭಯೋತ್ಪಾದನೆ ಮತ್ತು ಮುಸ್ಲಿಮರ ಮೇಲಿನ ಪೂರ್ವಾಗ್ರಹಗಳ ಕುರಿತು ಚಿತ್ರ ಬೆಳಕು ಚೆಲ್ಲಲ್ಲಿದ್ದು, ಇಂತಹ ಚಿತ್ರವನ್ನು ನಿಷೇಧಿಸಿರುವುದು ಸರಿಯಲ್ಲ ಎಂದು ಅನುಭವ್ ಸಿನ್ಹಾ ಹೇಳಿದ್ದಾರೆ. ಅಂತೆಯೇ ಪಾಕಿಸ್ತಾನ ಸೆನ್ಸಾರ್ ಮಂಡಳಿಗೆ ಮತ್ತೆ ಪತ್ರ ಬರೆದು ತಮ್ಮ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.
ಆದರೆ ಚಿತ್ರವನ್ನು ಯಾವ ಕಾರಣಕ್ಕೆ ನಿಷೇಧಿಸಲಾಗಿದೆ ಎಂದು ತಿಳಿದುಬಂದಿಲ್ಲ. ಚಿತ್ರವನ್ನು ಅವರು ಸಂಪೂರ್ಣವಾಗಿ ವೀಕ್ಷಿಸಿದರೆ ತಮ್ಮ ನಿರ್ಧಾರ ತಪ್ಪು ಎಂದು ಅವರೇ ನಿರ್ಧರಿಸುತ್ತಾರೆ ಎಂಬ ವಿಶ್ವಾಸ ತಮಗಿದೆ ಎಂದು ಅನುಭವ್ ಸಿನ್ಹಾ ಹೇಳಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ