ನವದೆಹಲಿ, ಜು. 8– ಸವೋಚ್ಛ ನ್ಯಾಯಾಲಯದ ರಿಜಿಸ್ಟ್ರಿಯಲ್ಲಿ ನಡೆಯುತ್ತಿದ್ದೆ ಎನ್ನಲಾದ ಭ್ರಷ್ಟಾಚಾರ ಮತ್ತು ಅವ್ಯವಹಾರಗಳ ಬಗ್ಗೆ ನಿಗಾ ವಹಿಸಲು ಸಿಬಿಐ ಮತ್ತು ದೆಹಲಿ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ.
ಇಂತಹ ಪ್ರಕರಣಗಳು ವರದಿಯಾಗುತ್ತಿರುವುದನ್ನು ಪರಿಗಣಿಸಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಯ್ ತಮಗೆ ಪ್ರದತ್ತವಾದ ಆಡಳಿತಾತ್ಮಕ ಅಧಿಕಾರಿ ಬಳಸಿ ಸಿಬಿಐ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳನ್ನು ಉಸ್ತುವಾರಿ ಕಾರ್ಯಕ್ಕೆ ನಿಯೋಜಿಸಲಿದ್ದಾರೆ.
ಯಾವುದೇ ಪ್ರಕರಣಗಳು ವಿಚಾರಣಕ್ಕೆ ದಾಖಲಾಗುವ ಮುನ್ನ ಅದು ನ್ಯಾಯಾಲಯದ ರಿಜಿಸ್ಟ್ರಿಯಲ್ಲಿ ನಮೂದಾಗಬೇಕು ರಿಜಿಸ್ಟ್ರಿ ಮೂಲಕ ಯಾವ ಪೀಠದ ಮುಂದೆ ಪ್ರಕರಣದ ವಿಚಾರಣೆ ನಡೆಯುತ್ತದೆ ಎಂಬುದನ್ನು ತಿಳಿಸಲಾಗುತ್ತದೆ.
ಹಂತದಲ್ಲಿ ಆಯಾಯ ಪೀಠದಲ್ಲಿ ವಿಚಾರಣೆ ನಿಗದಿಗೊಳಿಸಲು ಅವ್ಯವಹಾರ ನಡೆಯುತ್ತಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.