ಕಟ್ಟಡಕ್ಕೆ ಡಿಕ್ಕಿ ಹೊಡೆದ ಏರ್ ಇಂಡಿಯಾ ವಿಮಾನ

ಸ್ಟಾಕ್ ಹೋಮ: ಏರ್ ಇಂಡಿಯಾ ವಿಮಾನವೊಂದು ಸ್ವೀಡನ್ ರಾಜಧಾನಿ ಸ್ಟಾಕ್ ಹೋಮ್ ಅರ್ಲಾಂಡಾ ವಿಮಾನ ನಿಲ್ದಾಣದಲ್ಲಿ ಕಟ್ಟಡವೊಂದಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಈ ಘಟನೆಯಲ್ಲಿ 179 ಮಂದಿ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಭಾರತೀಯ ಸ್ಥಳೀಯ ಕಾಲಮಾನ ನಿನ್ನೆ ಸಂಜೆ 4 ಗಂಟೆ 45 ನಿಮಿಷಕ್ಕೆ ಈ ಘಟನೆ ನಡೆದಿದೆ. ಏರ್ ಇಂಡಿಯಾ ವಿಮಾನ ತಂಗುವ ಟರ್ಮಿನಲ್ ಮುಂದೆ ಈ ಘಟನೆ ನಡೆದಿದೆ.

ವಿಮಾನದ ರೆಕ್ಕೆ ಕಟ್ಟಡದ ದ್ವಾರಕ್ಕೆ ತಗುಲಿತ್ತು. ವಿಮಾನದಲ್ಲಿದ್ದ ಎಲ್ಲ 179 ಮಂದಿ ಪ್ರಯಾಣಿಕರನ್ನು ಮೊಬೈಲ್ ಸ್ಟೇರ್‍ಕೇಸ್‍ನಲ್ಲಿ ಕೆಳಗಿಳಿಸಿ ನಂತರ ನಿಲ್ದಾಣಕ್ಕೆ ಪ್ರವೇಶ ನೀಡಲಾಯಿತು ಎಂದು ಪೆÇಲೀಸರು ತಿಳಿಸಿದ್ದಾರೆ. ಈ ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

ಕೆಲ ದಿನಗಳ ಹಿಂದೆ 136 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ ವಿಮಾನ ತಿರುಚಿರಾಪಳ್ಳಿ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ಆಗುವಾಗ ಪರಿಧಿ ಗೋಡೆಗೆ ಡಿಕ್ಕಿ ಹೊಡೆದು ಅದೇ ಪರಿಸ್ಥಿತಿಯಲ್ಲಿ ದುಬೈಗೆ ಹೋಗಲೆಂದು 4 ಗಂಟೆ ಕಾಲ ಪ್ರಯಾಣ ನಡೆಸಿತ್ತು.

ಈ ಘಟನೆಯಲ್ಲಿ ಕೂಡ ಯಾವುದೇ ಪ್ರಯಾಣಿಕರಿಗೆ ಅಪಾಯವಾಗಿರಲಿಲ್ಲ. ನಂತರ ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನವನ್ನು ಮುಂಬೈಗೆ ತಿರುಗಿಸಲಾಗಿತ್ತು.

Air India flight hits building at Stockholm airport

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ