ಹೊಸದಿಲ್ಲಿ: ಭಾರತೀಯ ರಿಸರ್ವ್ ಬ್ಯಾಂಕ್ ಮೀಸಲು ನಿಧಿಯಿಂದ 3.6 ಲಕ್ಷ ಕೋಟಿ ರೂ. ಹಣವನ್ನು ಪಡೆಯುವ ನಿರೀಕ್ಷೆಯಲ್ಲಿ ಇಲ್ಲ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ತಿಳಿಸಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ನ ಮೀಸಲು ನಿಧಿ ಕಬಳಿಕೆಗೆ ಕೇಂದ್ರ ಸರಕಾರ ಹುನ್ನಾರ ನಡೆಸಿದೆ ಎಂಬ ಮಾಧ್ಯಮದ ವರದಿ ಸಂಪೂರ್ಣ ಸತ್ಯಕ್ಕೆ ದೂರವಾಗಿದ್ದು, ಆರ್ಬಿಐಗೆ ಆರ್ಥಿಕ ಬಂಡವಾಳದ ಚೌಕಟ್ಟು ನಿಗದಿಪಡಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಪ್ರಸ್ತಾಪ ಸರಕಾರದಲ್ಲಿದೆ. ಆದರೆ ಮೀಸಲು ನಿಧಿ ಸರಕಾರಕ್ಕೆ ವರ್ಗಾಯಿಸುವ ಯಾವುದೇ ಪ್ರಸ್ತಾವನೆ ಸರಕಾರಕ್ಕಿಲ್ಲ ಎಂದು ಹಣಕಾಸು ಇಲಾಖೆ ಕಾರ್ಯದರ್ಶಿ ಸುಭಾಷ್ ಚಂದ್ರ ಟ್ವಿಟರ್ ಮೂಲಕ ಹೇಳಿದ್ದಾರೆ.
ಆರ್ಬಿಐ ಹಾಗೂ ಸರಕಾರ ಕಳೆದ ಕೆಲವು ತಿಂಗಳಿನಿಂದ ಒಂದೇ ಹಳಿ ಮೇಲೆ ಇಲ್ಲವಾಗಿದೆ. ಆರ್ಬಿಐ ಡೆಪ್ಯುಟಿ ಗವರ್ನರ್ ವಿರಲ್ ಆಚಾರ್ಯ ಅವರ ಹೇಳಿಕೆಯ ಬಳಿಕ ಸಾಕಷ್ಟು ಬಿಕ್ಕಟ್ಟು ಸೃಷ್ಟಿಯಾಗಿದೆ.