ಬೆಂಗಳೂರು: ರಾಜ್ಯ ಉಪ ಸಮರದ ಮತದಾನ ಪ್ರಕ್ರಿಯೆ ಅಂತ್ಯವಾಗಿದ್ದು, ಬಹುತೇಕ ಶಾಂತಿಯುತವಾಗಿ ಮತದಾನ ಪೂರ್ಣಗೊಂಡಿದೆ.
ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿದ್ದ ರಾಮನಗರ ವಿಧಾನಸಭೆ ಕ್ಷೇತ್ರ, ಸಿದ್ದು ನ್ಯಾಮಗೌಡ ಅವರ ನಿಧನದಿಂದ ತೆರವಾಗಿದ್ದ ಜಮಖಂಡಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಶಾಸಕ ಶ್ರೀರಾಮುಲು ಮತ್ತು ಸಚಿವ ಸಿ.ಎಸ್. ಪುಟ್ಟರಾಜು ಅವರ ರಾಜೀನಾಮೆಯಿಂದ ತೆರವಾಗಿದ್ದ ಶಿವಮೊಗ್ಗ, ಬಳ್ಳಾರಿ ಮತ್ತು ಮಂಡ್ಯಕ್ಕೆ ಇಂದು ಮತದಾನ ನಡೆದಿದ್ದು, ಮತದಾರರಿಂದ ಕೊಂಚ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನಲಾಗಿದೆ.
ಚುನಾವಣಾ ಆಯೋಗ ನೀಡಿರುವ ಸಂಜೆ 5 ಗಂಟೆ ವರೆಗಿನ ಮಾಹಿತಿ ಪ್ರಕಾರ ರಾಮನಗರದಲ್ಲಿ 73.71 %, ಜಮಖಂಡಿಯಲ್ಲಿ 81.58 %, ಶಿವಮೊಗ್ಗದಲ್ಲಿ 61.05 %, ಬಳ್ಳಾರಿ 63.85 %, ಮಂಡ್ಯದಲ್ಲಿ 53.93 % ಮತದಾನವಾಗಿದೆ.
ಮಂಡ್ಯದಲ್ಲಿ ಅತೀ ಕಡಿಮೆ ಮತದಾನವಾಗಿ ಶೇ.53.93ರಷ್ಟು ಮತದಾನವಾಗಿದೆ. ಜಮಖಂಡಿಯಲ್ಲಿ ಅತ್ಯಂತ ಹೆಚ್ಚಿನ ಮತದಾನವಾಗಿದೆ.
By election,Voting end,Mandya,Jamakhandi