ತೈಲ ದರ ಮತ್ತಷ್ಟು ಇಳಿಕೆ ನಿರೀಕ್ಷೆ: ಇರಾನ್‌ ತೈಲಕ್ಕೆ ಸದ್ಯ ಅಮೆರಿಕ ನಿರ್ಬಂಧವಿಲ್ಲ

ಹೊಸದಿಲ್ಲಿ: ಇರಾನ್‌ ವಿರುದ್ಧ ನ.5ರಿಂದ ಕಠಿಣ ನಿರ್ಬಂಧ ವಿಧಿಸಲಿದ್ದರೂ, ಭಾರತ ಸೇರಿದಂತೆ 8 ರಾಷ್ಟ್ರಗಳ ತೈಲ ಆಮದಿಗೆ ಇದು ಅಡ್ಡಿಯಾಗುವುದಿಲ್ಲ ಎಂದು ಅಮೆರಿಕಶುಕ್ರವಾರ ತಿಳಿಸಿದೆ. ಇದರೊಂದಿಗೆ ಭಾರತಕ್ಕೆ ಇರಾನ್‌ನಿಂದ ಕಚ್ಚಾ ತೈಲ ಪೂರೈಕೆ ಮುಂದುವರಿಯಲಿದ್ದು, ದರ ಇಳಿಕೆಯಾಗುವ ನಿರೀಕ್ಷೆ ಇದೆ.

2019ರ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಚ್ಚಾ ತೈಲ ದರದ ದಿಢೀರ್‌ ಏರಿಕೆಯು ಮೋದಿ ಸರಕಾರಕ್ಕೆ ಸವಾಲಾಗಿ ಪರಿಣಮಿಸಿತ್ತು. ರೂಪಾಯಿ ಮೌಲ್ಯ ಕುಸಿತ, ವಿದೇಶಿ ವಿನಿಮಯ ಸಂಗ್ರಹ ಇಳಿಕೆಗೆ ಇದೂ ಕಾರಣವಾಗಿತ್ತು. ಇದೀಗ ಬಹು ದೊಡ್ಡ ಕಂಟಕ ನಿವಾರಣೆಯಾಗಿದ್ದು, ಮುಂಬರುವ ದಿನಗಳಲ್ಲಿ ತೈಲ ದರ ಮತ್ತಷ್ಟು ಇಳಿಕೆಯಾಗುವ ನಿರೀಕ್ಷೆ ಇದೆ.

ಈ ನಡುವೆ, ಪೆಟ್ರೋಲ್‌ ದರ 1 ತಿಂಗಳಲ್ಲಿ 4.23 ರೂ. ದರ ಇಳಿಕೆಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ