ಇನ್ಫೋಸಿಸ್ ಸಿಎಫ್ಓ ಎಂ ಡಿ ರಂಗನಾಥ್ ರಾಜೀನಾಮೆ

ಬೆಂಗಳೂರು: ಐಟಿ ದಿಗ್ಗಜ ಇನ್ಫೋಸಿಸ್ ಮುಖ್ಯ ಕಾರ್ಯನಿರ್ವಾಹಕ ಎಂ.ಡಿ ರಂಗನಾಥ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಸುಮಾರು 18 ವರ್ಷಗಳಿಂದ ಇನ್ಫೋಸಿಸ್ ಜೊತೆ ಕೆಲಸ ಮಾಡಿದ್ದ ರಂಗನಾಥ್ ತಾವು ಹೊಸ ಕ್ಷೇತ್ರಗಳಲ್ಲಿ ವೃತ್ತಿಪರ ಅವಕಾಶಗಳನ್ನು ಹುಡುಕುತ್ತೇನೆ ಎಂದಿದ್ದಾರೆ.
ಅವರು ಪ್ರಸ್ತುತ ನವೆಂಬರ್ 16, 2018 ರವರೆಗೆ ಈ ಹುದ್ದೆಯಲ್ಲಿ ಮುಂದುವರಿಯಲಿದ್ದು ಅಷ್ಟರಲ್ಲಿ ಸಂಸ್ಥೆಯು ನೂತನ ಸಿಎಫ್ ಓ ಅವರನ್ನು ನೇಮಕ ಮಾಡಿಕೊಳ್ಳಲಿದೆ.
“ಕಳೆದ ಮೂರು ವರ್ಷಗಳಿಂದ ಇನ್ಫೋಸಿಸ್ ಸಿಎಫ್ಓ  ಆಗಿರುವ ರಂಗನಾಥ್ 18 ವರ್ಷಗಳಲ್ಲಿ ಸಂಸ್ಥೆಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ. ನಾನು ಈಗ ಹೊಸ ಕ್ಷೇತ್ರಗಳಲ್ಲಿ ವೃತ್ತಿಪರ ಅವಕಾಶಗಳನ್ನು ಶೋಧಿಸಲು ಬಯಸಿದ್ದೇನೆ”  ರಂಗನಾಥ್ ಹೇಳಿದರು.
“ಕಳೆದ ಮೂರು ವರ್ಷಗಳಲ್ಲಿ ದಂಸ್ಥೆಯ ನಿರ್ಣಾಯಕ ಹಂತದಲ್ಲಿ ನಾನು ಬಲವಾದ ಮತ್ತು ಸ್ಥಿರವಾದ ಫಲಿತಾಂಶ ನೀಡಿದ್ದೇನೆ. ಹಣಕಾಸು ವರದಿಗಳಲ್ಲಿ ಉನ್ನತ ಗುಣಮಟ್ಟವಿರುವುದು ಸಾಬೀತಾಗುತ್ತಿದೆ. ವಿಶ್ವ ದರ್ಜೆಯಲ್ಲಿ ಕಂಪನಿಯ ಸ್ಪರ್ಧಾತ್ಮಕತೆಯನ್ನು ಮತ್ತಷ್ಟು ಬಲಪಡಿಸಿದ ತೃಪ್ತಿ ನನ್ನದಾಗಿದೆ”ಅವರು ಹೇಳಿದರು.
ರಂಗನಾಥ್ ಅವರು 2015ರಲ್ಲಿ ರಾಜೀವ್ ಬನ್ಸಾಲ್ ನಿವೃತ್ತಿಯ ಬಳಿಕ ಸಿಎಫ್ಓ ಆಗಿ ಅಧಿಕಾರ ವಹಿಸಿಕೊಂಡಿದ್ದರು.
“ಕಳೆದ 18 ವರ್ಷಗಳಲ್ಲಿ ಇನ್ಫೋಸಿಸ್ ನ ಬೆಳವಣಿಗೆ ಮತ್ತು ಯಶಸ್ಸಿಗೆ ರಂಗ ಪ್ರಮುಖ ಪಾತ್ರ ವಹಿಸಿದ್ದಾರೆ.ತಂಡದಲ್ಲಿ ಅವರ ದೀರ್ಘಕಾಲದ  ಅನುಭವದಲ್ಲಿ ನಾನವರಲ್ಲಿ ನಾಯಕತ್ವದ ಗುಣ ಕಂಡಿದ್ದೇನೆ”.ಎಂದು ಇನ್ಫೋಸಿಸ್ ಮಂಡಳಿ ಅಧ್ಯಕ್ಷ ನಂದನ್ ನಿಲೇಕಣಿ ಹೇಳಿದ್ದಾರೆ.
ರಂಗನಾಥ್ ಅವರು ಇನ್ಫೋಸಿಸ್ ಲೀಡರ್ ಶಿಪ್ ಭಾಗವಾಗಿದ್ದಾರೆ.ಮತ್ತು ಕನ್ಸಲ್ಟಿಂಗ್, ಫೈನಾನ್ಸ್, ಸ್ಟ್ರಾಟಜಿ, ರಿಸ್ಕ್ ಮ್ಯಾನೇಜ್ಮೆಂಟ್ ಮತ್ತು ಎಮ್ & ಎ ಕ್ಷೇತ್ರಗಳಲ್ಲಿ ಹಲವಾರು ಮಹತ್ವದ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ