ಛತ್ತೀಸ್ ​ಗಢ ರಾಜ್ಯಪಾಲ ಬಲರಾಮ್ ದಾಸ್​ ಟಂಡನ್​ ಹೃದಯಾಘಾತದಿಂದ ನಿಧನ

ರಾಯ​ಪುರ್​:ಆ-14: ಛತ್ತೀಸ್ ​ಗಢ ಗವರ್ನರ್​ ಬಲರಾಮ್ ಜಿ ದಾಸ್​ ಟಂಡನ್​ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.

ಟಂಡನ್ ಅವರಿಗೆ ಇಂದು ಬೆಳಗ್ಗೆ 8.30ರ ಸುಮಾರಿಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ರಾಯ​ಪುರದ ಡಾ.ಬಿಆರ್ ಅಂಬೇಡ್ಕರ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ ನಿಧನರಾಗಿದ್ದಾರೆ ಎಂದು ಗವರ್ನರ್ ಕಾರ್ಯದರ್ಶಿ ಸುರೇಂದ್ರ ಕುಮಾರ್ ಜೈಸ್ವಾಲ್ ಅವರು ಹೇಳಿದ್ದಾರೆ.

ಜನಸಂಘ ಸಂಸ್ಥಾಪಕರಲ್ಲಿ ಬಲರಾಮ್ ಜಿ ದಾಸ್ ಟಂಡನ್ ಅವರು ಒಬ್ಬರಾಗಿದ್ದು, 2014ರ ಜುಲೈನಲ್ಲಿ ಛತ್ತೀಸ್ ಗಢದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿತ್ತು. ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಟಂಡನ್ ಅವರು ಪಂಜಾಬ್ ನ ಉಪ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದರು.

Chhattisgarh, Governor Balramji Dass Tandon, dies

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ