ಚಿತ್ರಸಾಹಿತ್ಯದಿಂದ ಸಿಎಂ ಪಟ್ಟದವರೆಗೆ ಕಲೈಗ್ನರ್ ಕರುಣಾನಿಧಿ

ಅಭಿಮಾನಿಗಳ ಕಲೈಗ್ನರ್ ಮುತ್ತುವೇಲು ಕರುಣಾನಿಧಿ ಒಬ್ಬ ಚಲನಚಿತ್ರ ಕಥೆಗಾರರಾಗಿದ್ದವರು ಒಂದು ಹಂತದಲ್ಲಿ ತಮಿಳುನಾಡಿನ ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸಿ ಅವರ ಭಾವನೆಗಳ ಅಲೆಯ ಬೆನ್ನೇರಿ ಮುಖ್ಯಮಂತ್ರಿ ಸ್ಥಾನ ಪಡೆದವರು. ದಿ.ಎಂ.ಜಿ.ರಾಮಚಂದ್ರನ್ ಮತ್ತು ದಿ.ಜಯಲಲಿತಾ ಅವರನ್ನು ಹೊರತು ಪಡಿಸಿ ತಮಿಳುನಾಡಿನ ರಾಜಕೀಯದಲ್ಲಿ ಪ್ರಮುಖ ಸ್ಥಾನ ಪಡೆದವರು.

ಕರುಣಾನಿಧಿ ಅವರನ್ನು ಅವರ ಬೆಂಬಲಿಗರು ಅಭಿಮಾನದಿಂದ ಕಲೈಗ್ನರ್ (ಕಲಾವಿದ) ಎಂದೇ ಕರೆಯುತ್ತಿದ್ದರು. 1969-2011ರ ನಡುವೆ 5 ಪ್ರತ್ಯೇಕ ಅವಗಳಲ್ಲಿ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ದ್ರಾವಿಡವಾದದ ಹೆಸರಿನಲ್ಲಿ ರಾಜಕೀಯ ಮಾಡುತ್ತಾ ಬಂದ ದ್ರಾವಿಡ ಮುನ್ನೇತ್ರ ಕಳಗಂ ರಾಜಕೀಯ ಪಕ್ಷದ ಅಧ್ಯಕ್ಷರಾಗಿ ಒಂದಲ್ಲ, ಎರಡಲ್ಲ ಹತ್ತು ಬಾರಿ ನೇತೃತ್ವ ವಹಿಸಿದವರು ಕರುಣಾನಿಧಿ. ಕೇಂದ್ರದಲ್ಲಿ ವಾಜಪೇಯಿ ಅವರ ಬಿಜೆಪಿ ನೇತೃತ್ವದ ಕೇಂದ್ರ ಸರಕಾರಕ್ಕೆ ಬೆಂಬಲ ನೀಡಿ ಬಿಜೆಪಿ ವಿರೋಗಳ ಹುಬ್ಬೇರುವಂತೆ ಮಾಡಿದ್ದರು.
ರಾಜಕೀಯ ಪ್ರವೇಶಿಸುವ ಮೊದಲು ಕರುಣಾನಿಧಿಯವರು ತಮಿಳು ಚಲನಚಿತ್ರ ರಂಗದಲ್ಲಿ ಚಿತ್ರಕಥೆಗಾರರಾಗಿ ಕಾರ್ಯನಿರ್ವಹಿಸಿದ್ದರು. ಅವರು ಕಥೆಗಳು, ನಾಟಕಗಳು, ಕಾದಂಬರಿಗಳು ಮತ್ತು ಬಹು-ಸಂಪುಟದ ನೆನಪಿನ ಕೃತಿ ಸೇರಿದಂತೆ ತಮಿಳು ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದರು.
ನಾಗಪಟ್ಟಣಂ ಜಿಲ್ಲೆಯ ತಿರುಕ್ಕುವಾಲೆ` ಗ್ರಾಮದಲ್ಲಿ 1924ರ ಜೂನ್ 3ರಂದು ಜನನ. ತಂದೆ ಮುತ್ತುವೇಲು ಮತ್ತು ತಾಯಿ ಅಂಜು . ಕರುಣಾನಿಧಿ ತನ್ನ ಶಾಲಾ ದಿನಗಳಲ್ಲೇ ನಾಟಕ, ಕವಿತೆ ಮತ್ತು ಸಾಹಿತ್ಯದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದವರು. ಜಸ್ಟಿಸ್ ಪಾರ್ಟಿಯ ನೇತಾರ ವಾಗ್ಮಿ ಅಳಗಿರಿಸಾಮಿಯಿಂದ ಪ್ರೇರಣೆ ಪಡೆದ ಕರುಣಾನಿಧಿ ತಮ್ಮ 14 ನೇ ವಯಸ್ಸಿನಲ್ಲಿ ಸಾರ್ವಜನಿಕ ಚಳವಳಿಯಲ್ಲಿ ತೊಡಗಿಕೊಂಡವರು.

ಪ್ರಾದೇಶಿಕವಾದಕ್ಕೆ ಪ್ರಚೋದನೆ
ಮೊದಲಿಗೆ ದ್ರಾವಿಡ ಪಕ್ಷದ ವಿದ್ಯಾಥರ್ಿ ಸಂಘಟನೆ ಆಲ್ ಸ್ಟೂಡೆಂಟ್ಸ್ ಕ್ಲಬ್ ರಚಿಸಿ ಆ ಕಾಲದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದರು. ಪಕ್ಷದ ಅಕತ ವತ್ತಪತ್ರಿಕೆ, ಮುರಸೋಲಿ ಮೂಲಕ ಪಕ್ಷದ ವಾದವನ್ನು ಹರಡಲು ಯತ್ನಿಸಿದರು. 1953ರ ಕಲ್ಲುಕುಡಿ ಪ್ರದರ್ಶನ ಅವರ ರಾಜಕೀಯ ಪ್ರವೇಶಕ್ಕೆ ರಂಗಸಜ್ಜಿಕೆಯಾಗಿತ್ತುಘಿ. ಈ ಕೈಗಾರಿಕಾ ನಗರದ ಹಿಂದಿನ ಹೆಸರು ಕಲ್ಲಗುಡಿ ಎಂದಿದ್ದುದನ್ನು ,ಅಲ್ಲಿ ಉತ್ತರ `ಾರತದ ಉದ್ಯಮಿ ದಾಲ್ಮಿಯಾ ಅವರು ಸಿಮೆಂಟ್ ಕಾಖರ್ಾನೆ ಸ್ಥಾಪಿಸಿದರು. ಅವರ ಅಭಿಮಾನಿಗಳು ಪ್ರದೇಶಕ್ಕೆ ದಾಲ್ಮಿಯಾಪುರ ಎಂದು ಹೆಸರಿಟ್ಟರು. ಇದನ್ನೇ ತನ್ನ ರಾಜಕೀಯ ಬೆಳವಣಿಗೆಗೆ ಬಳಸಿಕೊಂಡ ಕರುಣಾನಿ, ಈ ಹೆಸರು ಬದಲಾವಣೆಯು ಉತ್ತರ `ಾರತೀಯರ ದಬ್ಬಾಳಿಕೆಯ ಸಂಕೇತ ಎಂದು ವ್ಯಾಖ್ಯಾನಿಸಿ ತಮಿಳರನ್ನು ಉತ್ತರ `ಾರತೀಯರ ವಿರುದ್ಧ ಎತ್ತಿಕಟ್ಟಿ ಅವರಲ್ಲಿ ಪ್ರಾದೇಶಿಕವಾದವನ್ನು ಪ್ರಚೋದಿಸಿದರು. ರೈಲ್ವೆ ನಿಲ್ದಾಣ ಮಂಡಳಿಯಲ್ಲಿರುವ ದಾಲ್ಮಿಯಾಪುರಂ ಹೆಸರಿನ ಮೇಲೆ ಪತ್ರಿಕೆಗಳನ್ನು ಅಂಟಿಸಿ ವ್ಯಾಪಕ ಪ್ರತಿ`ಟನೆ ಆಯೋಜಿಸಿದರು. ಈ ವೇಳೆ ಉದ್ರಿಕ್ತರನ್ನು ನಿಯಂತ್ರಿಸಲು ಪೊಲೀಸರು ನಡೆಸಿದ ಕಾಯರ್ಾಚರಣೆಯಲ್ಲಿ ಇಬ್ಬರು ಸಾವನ್ನಪ್ಪಿದರು. ಕರುಣಾನಿ ಅವರನ್ನು ಬಂಸಲಾಯಿತು. ಇದು ಕರುಣಾನಿ ಅವರ ರಾಜಕೀಯ ಅದೃಷ್ಟವನ್ನು ಖುಲಾಯಿಸುವಂತೆ ಮಾಡಿತು.

ತಮಿಳು ಚಿತ್ರರಂಗದಲ್ಲಿ ಕರುಣಾನಿಧಿ
ತಮಿಳು ಚಲನಚಿತ್ರೋದ್ಯಮದಲ್ಲಿ ಕರುಣಾನಿಧಿ ಅವರು ತಮ್ಮ ವತ್ತಿಜೀವನವನ್ನು ಚಿತ್ರಕಥೆಗಾರರಾಗಿ ಪ್ರಾರಂಭಿಸಿದರು. ಚಿತ್ರಕಥೆಗಾರನಾಗಿ ಅವರ ಮೊದಲ ಚಿತ್ರ 1947ರಲ್ಲಿ ಬಂದ , ಎಂ.ಜಿ. ರಾಮಚಂದ್ರನ್ (ಎಂಜಿಆರ್)ನಟಿಸಿದ ಎಎಸ್ಎ ಸಾಮಿ ನಿದರ್ೇಶನದ ರಾಜಕುಮಾರಿ ರಾಜಕುಮಾರಿ. ಕೊಯಮತ್ತೂರು ಮೂಲದ ಜುಪಿಟರ್ ಪಿಕ್ಚಸರ್್ ನಿಮರ್ಿಸಿದ ಚಿತ್ರ ಇದಾಗಿತ್ತುಘಿ. ಈ ಅವಯಲ್ಲಿ ಕರುಣಾನಿ ಮತ್ತು ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದ ಸ್ಥಾಪಕ ಎಂ.ಜಿ. ರಾಮಚಂದ್ರನ್ ಮಿತ್ರರಾಗಿದ್ದರು. ಎಂಜಿಆರ್ ನಟಿಸಿದ ಹಲವು ಯಶಸ್ವೀ ಚಿತ್ರಗಳ ಚಿತ್ರಕಥೆಗಾರ ಕರುಣಾನಿಯಾಗಿದ್ದರು. ಆದರೆ ಅನಂತರದ ವರ್ಷಗಳಲ್ಲಿ ಉ`ಯ ನಾಯಕರೂ ರಾಜಕೀಯದಲ್ಲಿ ಪ್ರತಿಸ್ರ್ಪಗಳಾಗಿ ಮಾರ್ಪಟ್ಟರೆಂಬುದು ಬೇರೆ ವಿಚಾರ.
1949ರಲ್ಲಿ ಸೇಲಂನ ಮಾಡನರ್್ ಥಿಯೇಟಸರ್್ ಸ್ಟುಡಿಯೋದ ಟಿ.ಆರ್.ಸುದರಂ ಅವರು ಕರುಣಾನಿಗೆ ತಮ್ಮ ಸ್ಟುಡಿಯೋದಲ್ಲಿ ಚಿತ್ರಕಥೆಗಾರರಾಗಿ ಖಾಯಂ ಇರಲು ಅವಕಾಶ ನೀಡಿದರು. ಆಗ ಇವರು ಬರೆದ, ಎಂಜಿಆರ್ ಅಭಿನಯದ ಮಂತ್ರಿಕುಮಾರಿ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಹಿಟ್ ಆಗಿ ಕರುಣಾನಿಗೆ ಮತ್ತಷ್ಟು ಹೆಸರು ತಂದುಕೊಟ್ಟಿತು. ಅನಂತರ ಕರುಣಾನಿ ತನ್ನ ದ್ರಾವಿಡ ಚಳವಳಿಗೆ ಬಲ ನೀಡುವ ಪರಾಶಕ್ತಿ ಚಿತ್ರ ಕಥೆ ಬರೆದು ರಾಜ್ಯದಲ್ಲಿ ಜಾತಿಸಂಘರ್ಷವನ್ನು ಇನ್ನಷ್ಟು ತೀವ್ರವಾಗುವಂತೆ ಮಾಡಿ ತನ್ನ ರಾಜಕೀಯ ಬೆಳವಣಿಗೆಗೆ ಮೆಟ್ಟಲುಗಳಾಗುವಂತೆ ನೋಡಿಕೊಂಡರು. ಇಂತಹ ಹಲವು ಸಿನಿಮಾಚಿತ್ರಗಳನ್ನು ಬರೆದು ಅವುಗಳ ಮೂಲಕ ಜನರಲ್ಲಿ ಹುಚ್ಚೆಬ್ಬಿಸಿದರು.

ಉತ್ತಮ ವಾಗ್ಮಿ
ಇವೆಲ್ಲವುಗಳ ಜೊತೆಗೆ ಅವರ ಕುಶಲತೆ ಮತ್ತು ಮಾತಿನ ಕೌಶಲ್ಯ ಅವರನ್ನು ಶೀಘ್ರದಲ್ಲೇ ಜನಪ್ರಿಯ ರಾಜಕಾರಣಿಯಾಗುವಂತೆ ಮಾಡಿತು. ಆಗ ಅಣ್ಣಾದುರೈ ಕೂಡಾ ತನ್ನ ರಾಜಕೀಯ ಪ್ರ`ಾವ ವಿಸ್ತರಿಸಲು ಚಿತ್ರಗಳನ್ನೇ ಬಳಸಿಕೊಂಡರು. ಇದು ಕೂಡಾ ಕರುಣಾನಿಗೆ ನೆರವಾಯಿತು. ತಮಿಳು ಕವಿ, ವಿದ್ವಾಂಸ ತಿರುವಳ್ಳುವರ್ ಅವರ 133ಅಡಿ ಎತ್ತರದ ಪ್ರತಿಮೆ ನಿಮರ್ಿಸಿದ್ದು ಅವರ ಕೊಡುಗೆಯಾಗಿದೆ. ಅವರು 100ಕ್ಕೂ ಹೆಚ್ಚು ಪದ್ಯಘಿ, ಗದ್ಯಗಳನ್ನು ಬರೆದಿದ್ದಾರೆ.

ರಾಜಕೀಯ ಜೀವನ:
ಕರುಣಾನಿ ಅವರು 14 ನೇ ವಯಸ್ಸಿನಲ್ಲಿ ರಾಜಕೀಯ ಪ್ರವೇಶಿಸಿದರು. ಜಸ್ಟೀಸ್ ಪಾಟರ್ಿಯ ಅಲಗಿರಿಸಾಮಿ ಅವರ `ಾಷಣದಿಂದ ಪ್ರೇರಿತರಾಗಿ ಹಿಂದಿ ವಿರೋ ಚಳವಳಿಯಲ್ಲಿ ಸಕ್ರಿಯರಾಗಿ `ಾಗವಹಿಸಿದರು. 1957 ರ ಚುನಾವಣೆಯಲ್ಲಿ 33 ನೇ ವಯಸ್ಸಿನವರಾಗಿದ್ದ ಕರುಣಾನಿ ಕುಲಿತಾಲೆ` ಕ್ಷೇತ್ರದಲ್ಲಿ ಗೆದ್ದು ತಮಿಳುನಾಡು ವಿ`ಾನಸ`ೆ ಪ್ರವೇಶಿಸಿದರು. 1961 ರಲ್ಲಿ ಡಿಎಂಕೆ ಖಜಾಂಚಿಯಾಗಿ 1962 ರಲ್ಲಿ ರಾಜ್ಯ ವಿ`ಾನಸ`ೆಯಲ್ಲಿ ವಿರೋ` ಪಕ್ಷದ ಉಪ ನಾಯಕರಾದರು ಮತ್ತು 1967 ರಲ್ಲಿ ಡಿಎಂಕೆ ಅಕಾರಕ್ಕೆ ಬಂದಾಗ ಲೋಕೋಪಯೋಗಿ ಸಚಿವರೂ ಆದರು.
ಪಕ್ಷದ ಪ್ರ`ಾನ ಕಾರ್ಯದಶರ್ಿಯಾಗಿದ್ದ ಅಣ್ಣಾದೊರೆ` 1969 ರಲ್ಲಿ ನಿ`ನರಾದಾಗ ಕರುಣಾನಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಸ್ಥಾನ ತುಂಬಿದರು. ಇಂದಿರಾ ಗಾಂ ನೇತೃತ್ವದ ಕಾಂಗ್ರೆಸ್ ಸರಕಾರ ದೇಶದ ಮೇಲೆ ಹೇರಿದ್ದ ತುತರ್ು ಪರಿಸ್ಥಿತಿಯನ್ನು ಕರುಣಾನಿಯವರು ತೀವ್ರವಾಗಿ ಖಂಡಿಸಿ ಅದರ ವಿರುದ್ಧ ಹೋರಾಟ ನಡೆಸಿದರು. ಇದರಿಂದ ಕ್ರೋ`ಗೊಂಡ ಇಂದಿರಾ ಗಾಂ ಅವರ ಕೇಂದ್ರ ಕಾಂಗ್ರೆಸ್ ಸರಕಾರ ಕರುಣಾನಿ ಸರಕಾರವನ್ನು ವಜಾಗೊಳಿಸಿ ಅವರ ಪಕ್ಷದ ನಾಯಕರನ್ನು ಬಂಸಿತು. ಅನಂತರ ಜನತಾ ಪಕ್ಷದ ಜೊತೆ ಸೇರಿಕೊಂಡರೂ ಚುನಾವಣೆಯಲ್ಲಿ ಸೋಲುಂಡಿತು. ಈ ನಡುವೆ ಕರುಣಾನಿಯವರಿಂದಲೇ ಉಚ್ಚಾಟಿಸಲ್ಪಟ್ಟಿದ್ದ ಎಂಜಿಆರ್ ಅವರು ಎಡಿಎಂಕೆ ಪಕ್ಷ ರಚಿಸಿ ಚುನಾವಣೆಯಲ್ಲಿ ಗೆದ್ದು ಅಕಾರಕ್ಕೆ ಬಂದರು. ಎಂಜಿಆರ್ ಅವರು 1987ರಲ್ಲಿ ನಿ`ನರಾಗುವವರೆಗೂ ಅವರೇ ಅಕಾರದಲ್ಲಿದ್ದರಿಂದ ಕರುಣಾನಿ ಅವರ ಪಕ್ಷ ಚುನಾವಣೆಗಳಲ್ಲಿ ಅನೇಕ ಸೋಲುಗಳನ್ನು ಕಾಣುವಂತಾಗಿತ್ತು.ಈ ನಡುವೆ ಕರುಣಾನಿ ಅವರು ಶ್ರೀಲಂಕಾದಲ್ಲಿ ಪ್ರತ್ಯೇಕತಾವಾದಿ ಹೋರಾಟ ನಡೆಸುತ್ತಿದ್ದ ಎಲ್ಟಿಟಿಇಗೆ ಬೆಂಬಲ ನೀಡುತ್ತಿರುವ ಆರೋಪಕ್ಕೀಡಾದರು. ಎಲ್ಟಿಟಿಇ ನಾಯಕ ವೇಲುಪಿಳ್ಳೆ ಪ್ರ`ಾಕರನ್ ತನ್ನ ಉತ್ತಮ ಸ್ನೇಹಿತ ಎಂದು ಹೇಳಿಕೆ ನೀಡಿದ ಕರುಣಾನಿ ವಿವಾದ ಸೃಷ್ಟಿಸಿದ್ದರು.
ರಾಜೀವ್ಗಾಂಧಿ ಅವರ ಹತ್ಯೆಯಾದ ಬಳಿಕ ಕರುಣಾನಿ ಸರಕಾರವನ್ನು ಮತ್ತೊಮ್ಮೆ ವಜಾಗೊಳಿಸಲಾಗಿತ್ತುಘಿ. ಆದಾಗ್ಯೂ ಕರುಣಾನಿ 1996 ರಲ್ಲಿ ಮತ್ತೊಮ್ಮೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಆದರೆ ಎಂಜಿಆರ್ ಬಳಿಕ ಜಯಲಲಿತಾ ಅವರು ಎಡಿಎಂಕೆಯ ನೇತೃತ್ವ ವಹಿಸಿದ್ದರಿಂದ ಕರುಣಾನಿ ಪಕ್ಷಕ್ಕೆ ಮತ್ತೆ ಹಿನ್ನಡೆ ಉಂಟಾಗಿ ಜಯಲಲಿತಾ ಅವರು ಮುಖ್ಯಮಂತ್ರಿಯಾದರು.
ಮೇ 2006 ರ ಚುನಾವಣೆಯಲ್ಲಿ ತನ್ನ ಪ್ರಮುಖ ಎದುರಾಳಿ ಜೆ. ಜಯಲಲಿತಾ ಅವರನ್ನು ಸೋಲಿಸಿದ ನಂತರ ಅವರು ಮೇ 13, 2006 ರಂದು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪುನಃ ಅಕಾರ ವಹಿಸಿಕೊಂಡರು. ಆದರೆ 2011 ರಲ್ಲಿ ತಮಿಳುನಾಡು ವಿ`ಾನಸ`ಾ ಚುನಾವಣೆಯಲ್ಲಿ ಡಿಎಂಕೆ ಬಹುತೇಕ ಸ್ಥಾನಗಳನ್ನು ಕಳೆದುಕೊಂಡು ಜಯಲಲಿತಾಗೆ ಅಕಾರ ಬಿಟ್ಟುಕೊಡಬೇಕಾಯಿತು. 2016ರಲ್ಲಿ ಮತ್ತೆ ಕರುಣಾನಿ ಅವರ ಪಕ್ಷ ಜಯಲಲಿತಾ ಅವರ ಎಡಿಎಂಕೆಯ ಎದುರು ಸೋಲುಣ್ಣಬೇಕಾಯಿತು. ಆದರೆ ಈ ಬಾರಿ ಕರುಣಾನಿ ಪಕ್ಷ ಸ್ವಲ್ಪದರಲ್ಲಿ ಅಕಾರ ಕಳೆದುಕೊಂಡಿದ್ದರು.
ಅವರು ತಮಿಳುನಾಡು ವಿ`ಾನಸ`ೆಯಲ್ಲಿ ತಿರುವರೂರು ಕ್ಷೇತ್ರವನ್ನು ಪ್ರತಿನಿಸಿದ್ದುಘಿ, ಅವರು ತಮಿಳುನಾಡು ವಿ`ಾನಸ`ೆಗೆ 13 ಬಾರಿ (1957 ರಿಂದ 2016 ರವರೆಗೆ) ಚುನಾಯಿತರಾಗಿ ದಾಖಲೆ ನಿಮರ್ಿಸಿದ್ದಾರೆ. 2009ರಲ್ಲಿ ತನ್ನ ಪುತ್ರ ಸ್ಟಾಲಿನ್ರನ್ನು ಉಪಮುಖ್ಯಮಂತ್ರಿಯಾಗಿಸಿದ ಕರುಣಾನಿ ಕ್ರಮ ವಿವಾದಕ್ಕೆ ಕಾರಣವಾಗಿ ಪಕ್ಷದಲ್ಲೂ ಭಿನ್ನಮತ ಸೃಷ್ಟಿಸಿತ್ತುಘಿ. ಅವರ ಹಿರಿಯ ಪುತ್ರ ಅಳಗಿರಿ ಈ ಕ್ರಮವನ್ನು ವಿರೋಸಿದಾಗ ಸ್ಟಾಲಿನ್ ತಂದೆಯ ಮೇಲೆ ನಿಯಂತ್ರಣ ಹೊಂದಿ ಅಣ್ಣನನ್ನು ಪಕ್ಷದಿಂದಲೇ ಹೊರಹಾಕುವಂತೆ ಮಾಡಿದರು.
ಕೇಂದ್ರದಲ್ಲಿ ವಾಜಪೇಯಿ ನೇತೃತ್ವದ ಎನ್ಡಿಎ ಸರಕಾರವನ್ನು ಬೆಂಬಲಿಸಿದ್ದ ಕರುಣಾನಿ ಅನಂತರ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವನ್ನು ಬೆಂಬಲಿಸಿತು. ಈ ಅವಯಲ್ಲಿ ಯುಪಿಎ ಸರಕಾರ `ಾರೀ `್ರಷ್ಟಾಚಾರ ಹಗರಣಗಳಲ್ಲಿ ಸಿಲುಕಿದ್ದುಘಿ, ಇದರಲ್ಲಿ ಕರುಣಾನಿ ಪುತ್ರಿ ಕನಿಮೋಳ್ ಸೇರಿದಂತೆ ಡಿಎಂಕೆಯ ಹಲವು ಸಚಿವರು ಆರೋಪಿಗಳಾಗಿದ್ದರು.
ದೇವರನ್ನು ನಂಬುವುದಿಲ್ಲ ಎಂಬ ನೆಲೆಯಲ್ಲಿ ಹಲವು ವಿವಾದಗಳನ್ನು ಹುಟ್ಟುಹಾಕಿದ್ದ ಕರುಣಾನಿ ರಾಮಸೇತು `್ವಂಸವನ್ನು ಬೆಂಬಲಿಸಿ ರಾಮಸೇತು ಯೋಜನೆ ನಿಮರ್ಿಸಲು ಯತ್ನಿಸಿ ಕೇಂದ್ರದಲ್ಲಿನ ಯುಪಿಎ ಸರಕಾರಕ್ಕೆ ಒತ್ತಡ ಹೇರಿದರು. ಆಗ ಸೋನಿಯಾ ನೇತೃತ್ವದ ಸೂಚನೆಯಂತೆ ಕೇಂದ್ರದ ಮನಮೋಹನ್ ಸರಕಾರ ಸೇತುಸಮುದ್ರಂ ಯೋಜನೆಗೆ ಮುಂದಾದರೂ ಹಿಂದುಗಳ ಮತ್ತು ಬಿಜೆಪಿಯ ತೀವ್ರ ಪ್ರತಿ`ಟನೆ ಹಾಗೂ ಕಾನೂನು ಹೋರಾಟದ ಬಳಿಕ ಯೋಜನೆ ಸ್ಥಗಿತಗೊಳ್ಳುವಂತಾಗಿತ್ತುಘಿ. ಈ ಸಂದರ್` ರಾಮ ಯಾವ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಲಿತಿದ್ದು ಎಂದು ಪ್ರಶ್ನಿಸಿ ವಿವಾದ ಸೃಷ್ಟಿಸಿದ್ದ ಕರುಣಾನಿ ಶ್ರೀರಾಮನನ್ನು ನಿಂದಿಸಿ ದೇಶದ ಜನತೆಯ ಆಕ್ರೋಶಕ್ಕೆ ತುತ್ತಾಗಿದ್ದರು.

ಮೂವರು ಪತ್ನಿಯರು
ಕರುಣಾನಿ ಅವರು ಮೂವರು ಪತ್ನಿಯರನ್ನು ಹೊಂದಿದ್ದರು. ಅವರ ಹಿರಿಯ ಪತ್ನಿ ಪದ್ಮಾವತಿಯಾದರೆ ದಯಾಳು ಅಮ್ಮಾಳು ದ್ವಿತೀಯ ಪತ್ನಿ. ರಾಜತಿಯಮ್ಮಾಳ್ ಮೂರನೇ ಪತ್ನಿ. ಈ ಪೈಕಿ ಹಿರಿಯ ಪತ್ನಿ ಪದ್ಮಾವತಿಯ ಪುತ್ರ ಎಂ.ಕೆ.ಮುತ್ತು ಆಗಿದ್ದರೆ, ದಯಾಳು ಅಮ್ಮಾಳ್ರಲ್ಲಿ ಜನಿಸಿದವರು ಎಂ.ಕೆ.ಅಳಗಿರಿ ಮತ್ತು ಸ್ಟಾಲಿನ್ ಹಾಗೂ ಪುತ್ರಿ ಸೆಲ್ವಿ. ರಾಜತಿಯಮ್ಮಾಳ್ರಲ್ಲಿ ಜನಿಸಿದ ಪುತ್ರಿ ಕನಿಮೋಳ್.

ಕರುಣಾನಿಧಿ -ಕನರ್ಾಟಕ ನಂಟು
ಎಡಿಎಂಕೆ ನಾಯಕಿ ದಿ.ಜಯಲಲಿತಾ ಅವರಿಗೆ ಹೋಲಿಸಿದರೆ ,ತಮಿಳ್ನಾಡಿನ ಮಾಜಿ ಸಿಎಂ ಕರುಣಾನಿ ಅವರು ಕನರ್ಾಟಕದ ಜೊತೆಗಿನ ಸಂಬಂ`ವನ್ನು ಕದಡಲು ಯತ್ನಿಸಿದ್ದು ಕಡಿಮೆ. ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರಕಾರ ಇದ್ದಾಗ ಕನರ್ಾಟಕ ಮತ್ತು ತಮಿಳ್ನಾಡುಗಳಲ್ಲಿ ತಿರುವಳ್ಳುವರ್ ಮತ್ತು ಸರ್ವಜ್ಞನ ಪ್ರತಿಮೆ ಸ್ಥಾಪನೆ ಘಟನೆ ಮತ್ತು ಡಾ.ರಾಜಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿದ ಸಂದರ್` ಅವರ ಬಿಡುಗಡೆ ಯತ್ನ ಕರುಣಾನಿ ಕನರ್ಾಟಕದ ಜೊತೆ ಸಹಕರಿಸಿದ್ದನ್ನು ನೆನಪಿಸುತ್ತದೆ.
ಕನರ್ಾಟಕದಲ್ಲಿ ಯಡಿಯೂರಪ್ಪ ಅವರ ಬಿಜೆಪಿ ನೇತೃತ್ವದ ಸರಕಾರ ಇದ್ದಾಗ ತಮಿಳ್ನಾಡಿನಲ್ಲಿ ಕರುಣಾನಿ ನೇತೃತ್ವದ ಡಿಎಂಕೆ ಸರಕಾರವಿತ್ತುಘಿ.ಆಗ ಯಡಿಯೂರಪ್ಪ ಅವರು ಕಾವೇರಿ ಮತ್ತು ಹೋಗೇನಕಲ್ ಜಲವಿದ್ಯುತ್ ಯೋಜನೆ ವಿವಾದಗಳಿಗೆ ಸೌಹಾರ್ದ ಪರಿಹಾರವೊಂದನ್ನು ಕಲ್ಪಿಸಬೇಕು ಹಾಗೂ ಕನರ್ಾಟಕ ಮತ್ತು ತಮಿಳ್ನಾಡು ಸಂಬಂ`ಗಳನ್ನು ಉತ್ತಮ ಪಡಿಸಬೇಕೆಂದು ಬಯಸಿದ್ದರು. ಇದಕ್ಕೆ ಕರುಣಾನಿ ಪೂರ್ಣ ಸಹಕಾರ ನೀಡಿದ್ದರು.
ಇದರಂತೆ , 2009ರ ಆ.9ರಂದು ಬೆಂಗಳೂರಿನ ಅಲಸೂರಿನಲ್ಲಿ ತಮಿಳು ಕವಿ ತಿರುವಳ್ಳುವರ್ ಅವರ ಪ್ರತಿಮೆಯನ್ನು ತ.ನಾ.ಮುಖ್ಯಮಂತ್ರಿಯಾಗಿದ್ದ ಕರುಣಾನಿ ಅವರು ರಾಜ್ಯದ ಸಿಎಂ ಆಗಿದ್ದ ಯಡಿಯೂರಪ್ಪ ಅವರ ಉಪಸ್ಥಿತಿಯಲ್ಲಿ ಉದ್ಘಾಟಿಸಿದ್ದರು. ಈ ಸಂದರ್` ಅವರು ಮಾತನಾಡಿ , ಕನರ್ಾಟಕದಿಂದ ನಾಯಕರು ಬಂದಾಗಲೆಲ್ಲ ಇಂತಹ ಒಂದು ಸಂಬಂ`ಕ್ಕಾಗಿ ನಾನು ತುಡಿಯುತ್ತಿದ್ದೆಘಿ. 17ವರ್ಷಗಳ ಬಳಿಕ ಯಡಿಯೂರಪ್ಪ ಅದನ್ನು ಸಾಕಾರಗೊಳಿಸಿದ್ದಾರೆ. ಯಡಿಯೂರಪ್ಪ ವೈದ್ಯಕೀಯ ತಪಾಸಣೆಗೆಂದು ಚೆನ್ನೈಗೆ ಬಂದಿದ್ದಾಗ ಅವರನ್ನು `ೇಟಿ ಮಾಡಬೇಕೆಂಬ ಇಚ್ಛೆಯನ್ನು ನಾನು ವ್ಯಕ್ತಪಡಿಸಿದಾಗ, ನೀವು ಹಿರಿಯರು, ಅನು`ವದಲ್ಲೂ ಹಿರಿಯರು. ನಾನೇ ನಿಮ್ಮಲ್ಲಿಗೆ ಬರುವೆ ಎಂದು ಯಡಿಯೂರಪ್ಪ ನಮ್ಮ ಮನೆಗೆ ಬಂದಿದ್ದರು. ಇದು ಅವರ ಸೌಜನ್ಯ ಮತ್ತು ಸ`್ಯತೆಯನ್ನು ತೋರಿಸಿದೆ.ಈಗ ನನಗೆ ತುಂಬ ಸಂತಸವಾಗಿದೆ ಎಂದು ಹೇಳಿದ್ದರು.ಆಗ ಯಡಿಯೂರಪ್ಪ ಅವರು , ನಾವೆಲ್ಲ`ಾರತ ಮಾತೆಯ ಮಕ್ಕಳು. ಆದ್ದರಿಂದ ಮೊದಲು `ಾರತೀಯರು, ಅನಂತರ ಕನ್ನಡಿಗರು ಮತ್ತು ತಮಿಳಿಗರು ಎಂದು ಹೇಳಿ ಉ`ಯ ರಾಜ್ಯಗಳ ನಡುವೆ ಸೌಹಾರ್ದ ಸಂಬಂ`ಕ್ಕೆ ಒತ್ತು ನೀಡಿದ್ದರು. ಕೆಲವು ಸ್ವಘೋಷಿತ ಕನ್ನಡ ಗುಂಪುಗಳ ವಿರೋ`ವನ್ನು ನಿರ್ಲಕ್ಷಿಸಿ ಯಡಿಯೂರಪ್ಪ ಈ ಪ್ರತಿಮೆ ಸ್ಥಾಪನೆಗೆ ಕ್ರಮ ಕೈಗೊಂಡಿದ್ದರು.
ಅನಂತರ ಆ.13ರಂದು ಚೆನ್ನೈಯ ಅಯನಾವರಂನಲ್ಲಿ ಸರ್ವಜ್ಞನ ಪ್ರತಿಮೆಯನ್ನು ಯಡಿಯೂರಪ್ಪ ಅವರು ಕರುಣಾನಿ ಉಪಸ್ಥಿತಿಯಲ್ಲಿ ಉದ್ಘಾಟಿಸಿದ್ದರು. ತಮಿಳ್ನಾಡಿನಲ್ಲಿ ಯಾರೂ ಸರ್ವಜ್ಞನ ಪ್ರತಿಮೆ ಸ್ಥಾಪನೆಗೆ ವಿರೋ` ವ್ಯಕ್ತಪಡಿಸಿಲ್ಲ ಎಂಬುದಾಗಿ ಆಗ ಕರುಣಾನಿ ಹೇಳಿದ್ದರು.
ಡಾ.ರಾಜ್ ಅಪಹರಣ
ಕನ್ನಡದ ವರನಟ ಡಾ.ರಾಜ್ ಕುಮಾರ್ ಅವರನ್ನು 2000ದ ಜು.30ರಂದು ಗಾಜನೂರಿನ ತೋಟದ ಮನೆಯಿಂದ ಕುಖ್ಯಾತ ನರಹಂತಕ , ಕಾಡುಗಳ್ಳ ವೀರಪ್ಪನ್ ಅಪಹರಿಸಿದಾಗ ಅವರನ್ನು ಬಿಡುಗಡೆಗೊಳಿಸುವಲ್ಲೂ ಕರುಣಾನಿ ಅವರು ಪೂರ್ಣ ಸಹಕಾರ ನೀಡಿದ್ದರು.
ರಾಜಕುಮಾರ್ ಅಪಹರಣವಾದ ಮರುದಿನವೇ ರಾಜ್ಯದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಚೆನ್ನೈಗೆ ಹಾರಿ ಕರುಣಾನಿಯವರನ್ನು `ೇಟಿ ಮಾಡಿ ಡಾ.ರಾಜಕುಮಾರ್ ಬಿಡುಗಡೆಗೆ ಸಹಕರಿಸುವಂತೆ ಕೋರಿದ್ದರು. ಇದಾದ ಬಳಿಕವೇ ನಕ್ಕೀರನ್ ಪತ್ರಿಕೆಯ ಸಂಪಾದಕ ಆರ್.ಆರ್.ಗೋಪಾಲನ್ ಮತ್ತಿತರರ ತಂಡ ಸತ್ಯಮಂಗಲ ಅರಣ್ಯಕ್ಕೆ ತೆರಳಿ ವೀರಪ್ಪನ್ ಜೊತೆಗೆ ಸಂ`ಾನ ನಡೆಸಿ ಆರನೇ ಪ್ರಯತ್ನದಲ್ಲಿ ಡಾ.ರಾಜ್ ಅವರನ್ನು ಬಿಡುಗಡೆಗೊಳಿಸಲು ಸಾ`್ಯವಾಗಿತ್ತುಘಿ.
1996ರಲ್ಲಿ ನಾನು ಪ್ರ`ಾನಿಯಾಗಲು ಕರುಣಾನಿಯವರ ಪಾತ್ರವಿತ್ತುಘಿ.ಅವರನ್ನೆಂದೂ ನಾನು ಮರೆಯಲಾರೆ ಎಂಬುದಾಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಇತ್ತೀಚೆಗೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ