ಜಯಲಲಿತಾಗೆ ರಾಜಕೀಯ ಕಡುವೈರಿ… ವರ್ಣರಂಜಿತ ವ್ಯಕ್ತಿತ್ವದ ಮೇರು ಕಲಾವಿದ ಈ ಕರುಣಾನಿಧಿ!

ಇಂತಹ ಮೇರು ನಾಯಕ ಈಗ ಇಹಲೋಕ ತ್ಯಜಿಸಿದ್ದಾರೆ. ಭಾರತದ ರಾಜಕೀಯದಲ್ಲಿ ಶೂನ್ಯ ಸೃಷ್ಠಿಯಾಗಿದ್ದು, ತಮಿಳುನಾಡಿನಲ್ಲಂತೂ ನೀರವ ಮೌನ ಆವರಿಸಿದೆ.  ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪಾಂಡಿತ್ಯ ಪೂರ್ಣ ವ್ಯಕ್ತಿತ್ವ ಕರುಣಾನಿಧಿ ಅವರದ್ದು.
ಜಯಲಲಿತಾಗೆ ರಾಜಕೀಯ ಕಡುವೈರಿ! 

ಎಂ.ಜಿ. ರಾಮಚಂದ್ರನ್ ಬಳಿಕ ಎಐಎಡಿಎಂಕೆ ಸಾರಥ್ಯ ವಹಿಸಿಕೊಂಡ ಜೆ.ಜಯಲಲಿತಾ 1991 ರಿಂದ ಕರುಣಾನಿಧಿಗೆ ರಾಜಕೀಯ ಕಡುವೈರಿಯಾಗಿ ಯುದ್ಧಕ್ಕೆ ನಿಂತರು… ತಮಿಳುನಾಡಿನಲ್ಲಿ ಎರಡೇ ಪಕ್ಷದ ನಡುವೆ ಹೋರಾಟ.. ಒಮ್ಮೆ ಅವರು… ಇನ್ನೊಮ್ಮೆ ಇವರು… ಈಗಲೂ ಅದೇ ಸಂಪ್ರದಾಯ…  ತಮಗಾದ ಅವಮಾನದಿಂದ ಜರ್ಜರಿತರಾದ ಜಯಲಲಿತಾ ಅದನ್ನೇ ಸವಾಲಾಗಿ ಸ್ವೀಕರಿಸಿ 1991 ರಲ್ಲಿ ಕರುಣಾನಿಧಿ ವಿರುದ್ಧ ಸೆಟೆದು ನಿಂತು ಅಧಿಕಾರಿಕ್ಕೆ ಬಂದರು…  ಆದರೆ, ರಾಜಕೀಯ ಅನುಭವವಿಲ್ಲದ ಜಯಾ ಅಷ್ಟೇ ಬೇಗ ಭ್ರಷ್ಟಾಚಾರದ ಕುಣಿಕೆಗೆ ಸಿಲುಕಿ ಅಧಿಕಾರ ಕಳೆದುಕೊಂಡರು.. 1996 ಕರುಣಾನಿಧಿ ಅಧಿಕಾರಕ್ಕೆ ಬಂದಾಗ, ಭ್ರಷ್ಟಾಚಾರ ಪ್ರಕರಣದಲ್ಲಿ ಜಯಲಲಿತಾ ಜೈಲಿಗೆ ಹೋಗುವಂತಾಯಿತು.
ಮತ್ತೆ ಅಧಿಕಾರಕ್ಕೆ ಬಂದ ಜಯಲಲಿತಾ ಕರುಣಾನಿಧಿ ಅವರನ್ನ ನಡುರಾತ್ರಿ ಪೊಲೀಸರಿಂದ ಬಂಧಿಸಿ ಸೇಡು ತೀರಿಸಿಕೊಂಡಿದ್ದರು. ಒಟ್ಟಿನಲ್ಲಿ ಜಯಾ- ಕರುಣಾ ಹಾವು ಮುಂಗುಸಿ ಆಟ ತಮಿಳುನಾಡು ಅಷ್ಟೇ ಅಲ್ಲದೆ ದೇಶದ ಗಮನ ಸೆಳೆದಿತ್ತು.. ಇದಕ್ಕೆಲ್ಲ ಈಗ ತೆರೆ ಬಿದ್ದಿದೆ.  ಇಬ್ಬರು ನಾಯಕರು ಇಹಲೋಕ ತ್ಯಜಿಸಿರುವುದರಿಂದ ಈಗ ತಮಿಳುನಾಡಿನಲ್ಲಿ ನಿರ್ವಾತ ನಿರ್ಮಾಣವಾಗಿದೆ.

ಕರುಣಾಗೆ ಚಿತ್ರರಂಗದ ನಂಟು: 

ಇನ್ನು ಕರುನಾನಿಧಿ ರಾಜಕೀಯದಲ್ಲಿ ಮಾತ್ರವಲ್ಲದೇ ಚಿತ್ರರಂಗದಲ್ಲೂ ಹೆಸರು ಮಾಡಿದ್ದಾರೆ. ಕಥೆಗಾರರಾಗಿ ತಮ್ಮ ವೃತ್ತಿ ಜೀವನವನ್ನುಆರಂಭಿಸಿದರ ಇವರು, ಐತಿಹಾಸಿಕ ಮತ್ತು ಸಾಮಾಜಿಕ ಕಥೆಗಳನ್ನ ಬರೆಯುವುದರಲ್ಲಿ ನಿಸ್ಸಿಮರು.
ತಮಿಳು ಸಾಹಿತ್ಯದ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಕರುಣಾನಿಧಿ ಕವನಗಳು, ಪತ್ರಗಳು, ಚಿತ್ರಕಥೆಗಳು, ಕಾದಂಬರಿಗಳು, ಜೀವನ ಚರಿತ್ರೆ, ಐತಿಹಾಸಿಕ ಕಾದಂಬರಿಗಳು, ರಂಗ ಕೃತಿ, ಸಂಭಾಷಣೆ, ಗೀತೆಗಳು ಇತ್ಯಾದಿ ವ್ಯಾಪಕ ಕ್ಷೇತ್ರಗಳಲ್ಲಿ ಇವರು ತಮ್ಮ ಕೊಡುಗೆ ಸಲ್ಲಿಸಿದ್ದಾರೆ.
ವಿದೇಶಗಳಲ್ಲೂ ಜನಪ್ರಿಯತೆ
ಕರುಣಾನಿಧಿ 1970ರಲ್ಲಿ ಪ್ಯಾರಿಸ್‌ನಲ್ಲಿ ನಡೆದ 3ನೇ ವಿಶ್ವ ತಮಿಳು ಅಧಿವೇಶನದ ಉದ್ಘಾಟನೆ ಕಾರ್ಯಕ್ರಮ ಹಾಗೂ 1987ರಲ್ಲಿ ಮಲೇಷ್ಯಾದಲ್ಲಿ ನಡೆದ 6ನೇ ವಿಶ್ವ ತಮಿಳು ಅಧಿವೇಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿಶೇಷ ಭಾಷಣ ಮಾಡಿದ್ದಾರೆ.

LTTE ಜತೆ ಸಂಪರ್ಕ
ಎಲ್​ಟಿಟಿಇ ಜತೆ ಕರುಣಾನಿಧಿ ಸಂಪರ್ಕ ಹೊಂದಿದ್ದಾರೆಂಬ ಆರೋಪವು ಕೇಳಿ ಬಂದಿತ್ತು.
ಆದರೆ ಎಲ್ಲ ಆಪಾದನೆಗಳಿಂದ ಇವರು ಮುಕ್ತರಾಗಿದ್ದರು. ಮತ್ತೊಂದೆಡೆ ಕರುಣಾನಿಧಿ 2009ರ ಏಪ್ರಿಲ್‌ನಲ್ಲಿ  “ಪ್ರಭಾಕರನ್ ನನ್ನ ಉತ್ತಮ ಸ್ನೇಹಿತ” ಎಂಬ ವಿವಾದಾತ್ಮಕ ಹೇಳಿಕೆ ಸಹ ನೀಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ