ಬೆಂಗಳೂರು, ಜು.21- ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಅವರು ಸಂಸತ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪ್ಪಿಕೊಂಡಿರುವುದು ಮಾನವೀಯತೆಯ ಪ್ರತೀಕ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಸಂಸತ್ನಲ್ಲಿ ರಾಹುಲ್ಗಾಂಧಿ ಅವರ ನಡೆ ಕುರಿತಂತೆ ಬಹಳಷ್ಟು ವ್ಯಾಖ್ಯಾನಗಳು ಕೇಳಿ ಬಂದಿವೆ. ಕೆಲವರು ಟೀಕಿಸಿದ್ದಾರೆ. ಸ್ಪರ್ಧಾ ಮನೋಭಾವದಿಂದ ರಾಹುಲ್ ಅವರು ಆಲಂಗಿಸಿಕೊಂಡಿದ್ದಾರೆ. ಅದು ಮಾನವೀಯತೆಯ ಪ್ರತೀಕ. ನನ್ನ ಪ್ರಕಾರ ರಾಹುಲ್ಗಾಂಧಿ ಅವರು ಸ್ಪರ್ಧಾ ಮನೋಭಾವದಿಂದಲೇ ಆಲಂಗಿಸಿಕೊಂಡಿದ್ದಾರೆ ಎಂದು ನುಡಿದರು.
ಎಐಸಿಸಿ ಎಲ್ಲಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಹಾಗೂ ಶಾಸಕಾಂಗ ಪಕ್ಷದ ನಾಯಕರ ಸಭೆ ಕರೆದಿದೆ. ಅದರಲ್ಲಿ ನಾನು ಭಾಗವಹಿಸುತ್ತಿಲ್ಲ. ಪಕ್ಷದ ಅಧ್ಯಕ್ಷರಾದ ದಿನೇಶ್ಗುಂಡೂರಾವ್, ಶಾಸಕಾಂಗ ಪಕ್ಷದ ಅಧ್ಯಕ್ಷರಾದ ಸಿದ್ದರಾಮಯ್ಯ ಹಾಗೂ ಎಐಸಿಸಿ ಕಾರ್ಯಕಾರಿ ಸಮಿತಿಯ ಸದಸ್ಯರು ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಸಾಲ ಮನ್ನಾ ವಿಷಯದಲ್ಲಿ ಸಮಗ್ರವಾಗಿ ಚರ್ಚಿಸಿಯೇ ನಿರ್ಧಾರ ತೆಗೆದುಕೊಳ್ಳಲಾಗಿದೆ. ವಿಧಾನಸಭೆಯಲ್ಲಿ ಘೋಷಣೆ ಮಾಡುವ ಮುನ್ನ ಎಲ್ಲಾ ರೀತಿಯ ಲೆಕ್ಕಾಚಾರ ನಡೆದಿದೆ. ಸಾಲ ಮನ್ನಾ ವಿಷಯದಲ್ಲಿ ಆದೇಶ ಜಾರಿಯಾಗುತ್ತದೆ ಎಂದು ಹೇಳಿದರು.
DR.G Parameshwar,Rahul Gandhi,Lok sabha