ನವದೆಹಲಿ:ಜು-೨೧: ಪ್ರಧಾನಿ ನರೇಂದ್ರ ಮೋದಿಯವರು ಅಪ್ಪಿಕೊಳ್ಳಲು ‘ಬುದ್ದು’ಗೆ ಅವಕಾಶ ನೀಡಬಾರದಿತ್ತು ಎಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಅವಿಶ್ವಾಸ ನಿರ್ಣಯ ಮಂಡನೆ ಕುರಿತಂತೆ ಲೋಕಸಭೆಯಲ್ಲಿ ಮೋದಿ ಸರ್ಕಾರದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ ಬಳಿಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಪ್ರಧಾನಿ ಮೋದಿಯವರ ಬಳಿ ಹೋಗಿ ತಬ್ಬಿಕೊಂಡಿದ್ದು, ಈ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿಯವರು ರಾಹುಲ್ ಗಾಂಧಿಯವರನ್ನು ಬುದ್ಧು ಎಂದು ಕರೆದಿದ್ದಾರೆ. ಅಪ್ಪಿಕೊಳ್ಳಲು ‘ಬುದ್ದು’ (ಪೆದ್ದ)ಗೆ ಪ್ರಧಾನಿ ಅವಕಾಶ ನೀಡಬಾರದಿತ್ತು.
ರಷ್ಯಾ ಹಾಗೂ ಉತ್ತರ ಕೊರಿಯಾದಲ್ಲಿ ವಿಷದ ಸೂಜಿಯನ್ನು ಚುಚ್ಚಲು ಇದೇ ರೀತಿಯಾಗಿ ಅಪ್ಪಿಕೊಳ್ಳುವ ತಂತ್ರಗಳನ್ನು ಬಳಸುತ್ತಾರೆ. ಹೀಗಾಗಿ ಅಪ್ಪಿಕೊಳ್ಳಲು ರಾಹುಲ್ ಗಾಂಧಿಯವರಿಗೆ ಮೋದಿ ಅವಕಾಶ ನೀಡಬಾರದಿತ್ತು ಎಂದು ತಿಳಿಸಿದ್ದಾರೆ.
ಇದಲ್ಲದೆ, ಸುನಂದಾ ಪುಷ್ಕರ್ ಸಾವು ಪ್ರಕರಣವನ್ನು ಇದೇ ವೇಳೆ ಪ್ರಸ್ತಾಪಿಸಿರುವ ಸ್ವಾಮಿ, ಕಾಂಗ್ರೆಸ್ ಹಿರಿಯ ನಾಯಕ ಶಶಿತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರ ದೇಹದಲ್ಲಿಯೂ ಸಾಮಾನ್ಯರ ಕಣ್ಣಿಗೆ ಕಾಣದಂತಹ ಅತಿ ಸೂಕ್ಷ್ಮವಾದ ರಂಧ್ರವಿತ್ತು. ಇದೀಗ ರಾಹುಲ್ ಗಾಂಧಿಯವರು ಮೋದಿಯವರನ್ನು ಆಲಿಂಗನ ಮಾಡಿರುವುದಿಂದ ಕೂಡಲೇ ಮೋದಿಯವರು ತುರ್ತಾಗಿ ವೈದ್ಯ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ.
Subramanian Swamy,PM Modi,Rahul gandhi,Buddhu