ದಾಂಡೇಲಿ: ತಾಲೂಕು ಕಾನೂನು ಸೇವಾ ಸಮಿತಿ, ನಗರದ ವಕೀಲರ ಸಂಘ, ಕಂದಾಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೋಲಿಸ್, ಕಾಲೇಜು, ಸಾರ್ವಜನಿಕ ಶಿಕ್ಷಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಾಲ್ಕು ದಿನಗಳ ಕಾಲ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ‘ ಸಾಕ್ಷರತಾ ಜಾಥಾ’ ದಾಂಡೇಲಿ ಮತ್ತು ಜೊಯಿಡಾದ ವಿವಿದೆಡೆ ಶಿಬಿರಗಳನ್ನು ನಡೆಸಿ ಯಶಸ್ವಿಯಾಗಿ ಶುಕ್ರವಾರ ಸಮಾರೋಪಗೊಂಡಿತು.
ದಾಂಡೇಲಿಯ ಕನ್ಯಾ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ಸಮಾರೋಪ ಸಮಾರಂಬವನ್ನು ಹಿರಿಯ ವಕೀಲ ಎಚ್.ಎಸ್.ಕುಲಕರ್ಣಿ ಉದ್ಘಾಟಿಸಿ ಮಾತನಾಡಿ ಸಾಕ್ಷರತಾ ಜಾಥಾದ ಮಹತ್ವನನ್ನು ತಿಳಿಸಿ, ಕಾನೂನಿನ ಅರಿವು ಪ್ರತಿಯೊಬ್ಬರಿಗಿರಬೇಕೆಂದರು. ಮುಖ್ಯ ಅತಿಥಿಗಳಾಗಿ ವಕೀಲರುಗಳಾದ ಎಮ್.ಸಿ.ಹೆಗಡೆ, ಸೋಮಕುಮಾರ ಎಸ್, ಎನ್.ಕೆ.ಮಹೇಶ್ವರಿ, ಪ್ರಾಚಾರ್ಯೆ ಲತಾ ಪಾಟೀಲ ಮುಖ್ಯಾದ್ಯಾಪಕಿ ಶಶಿಕಲಾ ಉಪಸ್ಥಿತರಿದ್ದರು. ನ್ಯಾಯವಾದಿ ಅನಿತಾ ಸೋಮಕುಮಾರ ಮಹಿಳೆಯರಿಗೆ ಸಿಗುವ ಸೌಲತ್ತುಗಳು ಮತ್ತು ಕಾನೂನುಗಳ ಕುರಿತು ಉಪನ್ಯಾಸ ನೀಡಿದರು.
ಕಾಲೇಜಿನ ಉಪನ್ಯಾಸಕ ಹನುಮಂತ ಕುಂಬಾರ ಸ್ವಾಗತಿಸಿದರು, ವಕೀಲ ಆರ್.ವಿ.ಗಡೆಪ್ಪನವರ ನಿರೂಪಿಸಿದರು. ಶಿಕ್ಷಕ ಬಿಜು ನಾಯ್ಕ ವಂದಿಸಿದರು. ನ್ಯಾಯಾಂಗ ಇಲಾಖೆಯ ಸಿಬ್ಬಂದಿಗಳು ಮತ್ತು ಪೋಲಿಸ ಇಲಾಖೆಯ ಸಿಬ್ಬಂದಿಗಳು ಕಾರ್ಯಕ್ರಮಕ್ಕೆ ಸಹಕರಿಸಿದರು.