ದಾಂಡೇಲಿ : ದಿನೆ ದಿನೆ ಹೆಚ್ಚುತ್ತಿರುವ ಜನ ಸಂಖ್ಯೆ ಹಾಗೂ ಪರಿಸರದ ಸಂರಕ್ಷಣೆಯ ನಿಷ್ಕಾಳಜಿಯಿಂದ ಪರಿಸರದ ಮೇಲೆ ಮತ್ತು ಪ್ರತಿಯೊಂದು ಜೀವಿಯ ಮೇಲೆ ಅನೇಕ ರೀತಿಯಲ್ಲಿ ದುಷ್ಪರಿಣಾಮಗಳು ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ನಮ್ಮ ಆಧ್ಯ ಕರ್ತವ್ಯವಾಗಬೇಕೆಂದು ಎ.ಸಿ.ಎಫ್ ಚಂದ್ರಕಾಂತ ಗಾರವಾಡ ನುಡಿದರು.
ಅವರು ಮಂಗಳವಾರ ನಗರದ ವಿನಾಯಕ ನಗರದಲ್ಲಿ ಹಳಿಯಾಳ -ದಾಂಡೇಲಿ ಅರಣ್ಯ ಇಲಾಖೆ, ಲಯನ್ಸ್ ಕ್ಲಬ್ ಅಂಬಿಕಾನಗರ-ದಾಂಡೇಲಿ ವತಿಯಿಂದ ಲಯನ್ಸ್ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ನಗರಸಭಾ ಅಧ್ಯಕ್ಷ ನಾಗೇಶ ಸಾಳುಂಕೆ ಪರಿಸರ ಸಂರಕ್ಷಣೆಯ ಮಹತ್ವ ತಿಳಿಯಲು ಅರಣ್ಯ ಇಲಾಖೆ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಹಮ್ಮಿಕೊಳ್ಳುವ ಕಾರ್ಯಕ್ರಮ ಇಂದು ಹಾಗೂ ನಾಳಿನ ಜೀವನಕ್ಕೆ ಹೆಚ್ಚು ಉಪಯುಕ್ತವಾಗಲಿವೆ ಎಂದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡಿದ ಲಯನ್ಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಯು.ಎಸ್. ಪಾಟೀಲ್ ಪ್ರತಿ ಮಗು ಒಂದು ಗಿಡ ನೆಡುವ ಮೂಲಕ ಪರಿಸರಕ್ಕೆ ಉತ್ತಮ ಕೊಡುಗೆ ನೀಡಬೇಕೆಂದು, ಪ್ರತಿ ಮನೆಯಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ಆಗುವ ಅನಾಹುತಗಳ ಬಗ್ಗೆ ತಿಳುವಳಿಕೆ ಮೂಡಿ ಬರಬೇಕಾಗಿದೆ ಎಂದರು.
ಬೆಂಗಳೂರಿನಿಂದ ಬೈಸಿಕಲ್ ಮೇಲೆ ಪರಿಸರ ಸಂರಕ್ಷಣೆಗೆ ಜಾಗೃತಿ ಮೂಡಿಸಲು ಹೊರಟಿರುವ ಪರಿಕ್ರಮ ಸಂಘದ ಯುವಕರ ತಂಡದ ಸದಸ್ಯರಾದ ಧನರಾಜ, ಡಿ ಶಾಸ್ಮಾ, ಭರತ್, ಚಂದನ್ ಹಾಗೂ ಉದಯ ಮಾತನಾಡಿ ಒರ್ವ ಮನುಷ್ಯ ನೆಮ್ಮದಿಯಿಂದ ಉಸಿರಾಡಿ ಬದುಕ ಬೇಕೆಂದರೆ ಆ ಒರ್ವ ವ್ಯಕ್ತಿಗೆ ಕನಿಷ್ಟ ಏಳು ಗಿಡಗಳ ಅವಶ್ಯಕತೆ ಇದೆ ಆದ್ದರಿಂದ ಗಿಡಗಳ ಕೊರತೆ ಬಗ್ಗೆ ಚಿಂತಿಸಿ ಹಾಗು ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನೀಷೇಧಿಸದಿದ್ದರೆ ಇಡಿ ಮಾನವಕುಲಕ್ಕೆ ಉಳಿಗಾಳವಿಲ್ಲಾ ಎಂದರು.
ಆರಂಭದಲ್ಲಿ ಸಸಿ ನೆಟ್ಟು ಲಯನ್ಸ್ ಶಾಲಾ ಮಕ್ಕಳೊಂದಿಗೆ ಅರಣ್ಯ ಸಿಬ್ಬಂದಿ ವಿನಾಯಕ ನಗರದಲ್ಲಿ ಪರಿಸರ ಸಂರಕ್ಷಣೆ ಘೋಷಣೆಗಳೊಂದಿಗೆ ಜಾಗೃತಿ ಮೂಡಿಸಲು ಜಾಥಾ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಲಯನ್ಸ್ ಸದಸ್ಯರಾದ ಪ್ರಸಾದ ಶಿರಹಟ್ಟಿ, ಮಾರುತಿರಾವ್ ಮಾನೆ, ಡಿಸೊಜಾ ಮಾಜಿ ನಗರಸಭಾ ಸದಸ್ಯ ರಿಯಾಜ್ ಸ್ಯೆಯದ್ , ಇಮ್ತೀಯಾಜ್ ಸ್ಯೆಯದ್ ಮುಖ್ಯೊಪಾಧ್ಯಯಿನಿ ವಾಹಿದಾ, ಅರಣ್ಯ ಸಿಬ್ಬಂದಿಗಳು ಇತರರು ಉಪಸ್ಥಿತರಿದ್ದರು. ಆರ್.ಎಫ್.ಓ.ಮಂಜುನಾಥ ನಿರೂಪಿಸಿದರು.