ಸಾರ್ಥಕ ಸೇವೆಗೈದ ಶಿಕ್ಷಕ ಜಿ.ವೈ.ತಳವಾರಿಗೆ ಹೃದಯಸ್ಪರ್ಶಿ ಬಿಳ್ಕೋಡುಗೆ

ದಾಂಡೇಲಿ: ಕಳೆದ ಮೂವತ್ತೈದು ವರ್ಷಗಳಿಂದ ಹಳೆದಾಂಡೇಲಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ನಿವೃತ್ತರಾದ ಜಿ.ವೈ. ತಳವಾರರನ್ನು ಶಿಕ್ಷಣ ಇಲಾಖೆ, ಶಿಕ್ಷಕರ ಸಂಘ, ನೌಕರರ ಸಂಘ ಹಾಗೂ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಯವರು ಸೇರಿ ಹೃದಯಸ್ಪರ್ಶಿಯಗಿ ಸನ್ಮಾನಿಸಿ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ನೂರಾರು ಜನರು ಗಂಗಪ್ಪ ಹಾಗೂ ಸುಮಿತ್ರಾ ತಳವಾರ ದಂಪತಿಗಳನ್ನು ಸನ್ಮಾನಿಸಿ ಅಭಿನಂದಿಸಿದ್ದು ವೀಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ನಾಯಕ ಬಾವಿಕೇರಿಯವರು ಜಿ.ವೈ. ತಳವಾರವರ ಸೇವೆ ಮತ್ತು ಅವರ ಸ್ನೇಹಪರತೆಯ ಬಗ್ಗೆ ಕೊಂಡಾಡಿ, ಅವರ ಬೀಳ್ಕೊಡುವ ದಿನ ಇಷ್ಟೊಂದು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಅವರನ್ನು ಸನ್ಮಾನಿಸಿದ್ದೇ ಅವರ ಜನಪ್ರೀಯತೆಗೊಂದು ನಿದರ್ಶನವಾಗಿದೆ. ಜಿ.ವೈ.ತಳವಾರಂತಹ ಶಿಕ್ಷರು ನಿಜಕ್ಕೂ ನಮಗೆಲ್ಲರಿಗೂ ಆದರ್ಶವಾಗಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿದ್ದ ಪತ್ರಕರ್ತ ಬಿ.ಎನ್. ವಾಸರೆ ಮಾತನಾಡಿ ಶಿಕ್ಷಕರಾದವರು ಕೆಲವರು ಕ್ರಿಯಾಶೀಲರಾಗಿರುತ್ತಾರೆ. ಕೆಲವರು ಬುದ್ದಿವಂತರಾಗಿರುತ್ತಾರೆ. ಕೆಲವರು ವೃತ್ತಿಗೆ ಬಾದಕವಾಗದಂತೆ ಇರುತ್ತಾರೆ. ಕೆಲವರು ಮಾತ್ರ ಜನಪ್ರೀತಿಯನ್ನು ಗಳಿಸುತ್ತಾರೆ. ಅಂತಹ ಜನಪ್ರೀತಿಗಳಿಸಿದ ಶಿಕ್ಷಕರಲ್ಲಿ ಜಿ.ವೈ. ತಳವಾರ ಅವರೂ ಒಬ್ಬರು. ತಮ್ಮ ಸರಳ ಸಜ್ಜನಿಕೆಯ ವೈಕ್ತಿತ್ವದ ಮೂಲಕವೇ ಅವರು ವಿದ್ಯಾರ್ಥಿಗಳನ್ನು ಹಾಗೂ ತಮ್ಮ ವೃತ್ತಿ ಬಂಧುಗಳಮನ್ನು ಜನರನ್ನು ಗೆದ್ದವರು. ತಮ್ಮ ಕ್ರಿಯಾಶೀಲತೆಯ ಮೂಲಕವೇ ಹಲವಾರು ಪ್ರಶಸ್ತಿಗಳನ್ನು, ಸನ್ಮಾನಗಳನ್ನು ಪಡೆದುಕೊಂಡವರು. ಅವರು ವೃತ್ತಿಯಿಂಧ ನಿವೃತ್ತರಾಗಿದ್ದರೂ, ಅವರ ಕ್ರಿಯಾಸೀಲತೆ, ಹಾಗೂ ಸೇವೆ ಈ ಸಮಾಜಕ್ಕೆ ಅಗತ್ಯವಾಗಿದೆ ಎಂದರು.

ಜಿ.ವೈ.ತಳವಾರವರ ಗುರು ಕಲಾದಗಿಯ ಜಿ.ಕೆ. ಹೊಸಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಗುರುವನ್ನು ಮೀರಿಸಿದ ಸಾಧನೆಗೈದ ಶಿಷ್ಯನ ಸೇವಾದಕ್ಷತೆ ಶ್ಲಾಘನೀಯ ಎಂದರು. ವೇದಿಕೆಯಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಸಲಿಂ ಜಮಾದರ, ನಿವೃತ್ತ ಉಪನ್ಯಾಸಕರಾದ ಎಸ್.ವೈ. ಹಾದಿಮನಿ, ಕರ್ನಾಟಕ ನೌಕರರ ಸಂಘದ ಅಧ್ಯಕ್ಷ ಏ.ಎಸ್. ಉದ್ದಂಡಿ, ಮಾಜಿ ಅಧ್ಯಕ್ಷ ಜಿ.ಸಿ. ನಾಯ್ಕ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಹಾಗೂ ಕ್ರೀಡಾ ತೀರ್ಪಗಾರ ಸುರೇಶ ನಾಯಕ, ಹಳಿಯಾಳ ನೌಕರರ ಸಂಘದ ಉಪಾಧ್ಯಕ್ಷ ವೆಂಕಟೇಶ ನಾಯಕ, ಶಿಕ್ಷಕರ ಸಂಘದ ಸದಸ್ಯರಾದ ಪ್ರವೀಣ ನಾಯ್ಕ, ಸುಭಾಸ ನಾಯಕ, ಕೆ.ಎಲ್. ರಾಠೋಡ್, ಎಸ್.ಟಿ. ಬಡಿಗೇರ, ಖಾಸಗಿ ಅನುದಾನಿತ ಶಿಕ್ಷಕರ ಸಂಘದ ಕಾರ್ಯದರ್ಶಿ ಸೀತಾರಾಮ ನಾಯ್ಕ, ಹಳೆ ದಾಂಡೇಲಿ ಪ.ಪೂ ಕಾಲೇಜಿನ ಪ್ರಾಚಾರ್ಯ ಜೀವನಾ ನಾಯಕ, ನಿವೃತ್ತ ಮುಖ್ಯಾದ್ಯಾಪಕಿ ಸರಸ್ವತಿ ನಾಯಕ, ಹಳೆದಾಂಡೇಲಿ ಕನ್ನಡ ಶಾಲೆ ಮುಖ್ಯಾದ್ಯಾಪಕಿ ಪಾತಿಮಾ ಪಿ.ಎಸ್. ಉಪಸ್ಥಿತರಿದ್ದರು.

ಶಿಕ್ಷಕಿ ಚಂದ್ರಕಲಾ ಬಾಂದೇಕರ ಸ್ವಾಗತಿಸಿದರು. ಸರಸ್ವತಿ ಲಕಲಕಟ್ಟಿ ಪರಿಚಯಿಸಿದರು. ಬಿ.ಆರ್.ಪಿ ಹೇಮಾ ಕಾಮತ ನಿರೂಪಿಸಿದರು. ಸೀತಾರಾಮ ನಾಯಕ ವಂದಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ