ಪ್ರಧಾನಿ ಮೋದಿಯವರೆ ನಿಮಗೆ ಸಿಟಿಗಳನ್ನು ಕಟ್ಟುವುದಂಕ್ಕಿಂತ ಸುಳ್ಳುಗಳನ್ನು ಕಟ್ಟುವುದು ಸುಲಭ: ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ:ಮೇ-4: ಪ್ರಧಾನಿ ನರೇಂದ್ರ ಮೋದಿಯವರಿಗೆ ನಗರಗಳನ್ನು ಕಟ್ಟುವುದಕ್ಕಿಂತಲೂ ಸುಳ್ಳುಗಳನ್ನು ಕಟ್ಟುವುದು ಬಲು ಸುಲಭ ಎಂದು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಲೇವಡಿ ಮಾಡಿದ್ದಾರೆ.

ಪ್ರಧಾನಿ ಮೋದಿಯವರ ವಿರುದ್ದ ಟ್ವೀಟರ್ ವಾರ್ ಮುಂದುವರೆಸಿರುವ ರಾಹುಲ್ ಗಾಂಧಿ, ಗಾರ್ಡನ್ ಸಿಟಿ ಎಂಬ ಹೆಮ್ಮೆಯ ನಗರವಾಗಿರುವ ಬೆಂಗಳೂರನ್ನು ಗಾರ್’ಬೇಜ್ ಸಿಟಿ ಎಂದು ಕರೆದಿರುವುದು ಅವಮಾನಕರ ವಿಚಾರ. ಸುಳ್ಳುಗಳು ಕಟ್ಟುವುದು ನಿಮಗೆ ಸರಾಗವಾಗಿ ಬರುತ್ತೆ. ಆದರೆ, ನಗರಗಳನ್ನು ಕಟ್ಟುವುದು ನಿಮಗೆ ಕಷ್ಟಕರ. ಸತ್ಯಾಂಶಗಳು ನೀವು ಕಟ್ಟುವ ಸುಳ್ಳುಗಳನ್ನು ಅನಾವರಣ ಮಾಡುತ್ತಿವೆ ಎಂದು ವಾಗ್ದಾಳಿ ನಡೆಸಿದ್ದಾರೆ.

ನಿನ್ನೆಯಷ್ಟೇ ನಗರದಲ್ಲಿ ಬಿಜೆಪಿ ನಡೆಸಿದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿಯವರು ಕಂಪ್ಯೂಟರ್ ಕ್ಯಾಪಿಟಲ್ ಆಗಿದ್ದ ಕರ್ನಾಟಕ ರಾಜ್ಯವನ್ನು ಕಾಂಗ್ರೆಸ್ ಕ್ರೈಮ್ ಕ್ಯಾಪಿಟಲ್ ಆಗಿ ಪರಿವರ್ತಿಸಿದೆ. ಸಿಲಿಕಾನ್ ಸಿಟಿ ಎನಿಸಿಕೊಂಡಿದ್ದ ಬೆಂಗಳೂರನ್ನು ಸಿನ್ ವ್ಯಾಲಿಯನ್ನಾಗಿ ಮಾಡಿದೆ. ಗಾರ್ಡನ್ ಸಿಟಿಯಾಗಿದ್ದ ಬೆಂಗಳೂರನ್ನು ಗಾರ್ಬೇಜ್ ಸಿಟಿ ಮಾಡಿದೆ ಎಂದು ಟೀಕಿಸಿದ್ದರು.

ಮೋದಿಯವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ರಾಹುಲ್, ಪ್ರಧಾನಿ ಮೋದಿಯವರೇ ಕರ್ನಾಟಕ ಮತ್ತು ಬೆಂಗಳೂರಿನ ಮಾನ ಮರ್ಯಾದೆಯನ್ನು ಈ ರೀತಿಯಾಗಿ ಕಳೆದಿರುವುದು ನಿಜಕ್ಕು ನಿಮಗೇ ಅವಮಾನಕರ ಎಂದಿದ್ದಾರೆ.

Rahul gandhi, Twitter, attacks, PM Modi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ