ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಕೋಡಲಸಂಗಮಕ್ಕೆ ಭೇಟಿ; ಆದರೆ ಬಸವಣ್ಣನ ಐಕ್ಯ ಮಂಟಪ ದರ್ಶನ ಪಡೆಯದೇ ಅಮಿತ್ ಶಾ ವಾಪಸ್

ಬಾಗಲಕೋಟೆ:ಏ-28: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌‌ ಶಾ ಅವರು ವಿಶ್ವಗುರು ಬಸವಣ್ಣನ ಐಕ್ಯ ಕ್ಷೇತ್ರ ಕೂಡಲಸಂಗಮಕ್ಕೆ ಭೇಟಿ ನೀಡಿದರು. ಆದರೆ ಬಸವಣ್ಣನ ಐಕ್ಯಮಂಟಪ ದರ್ಶನ ಮಾಡದೇ ಹಾಗೆಯೇ ತೆರಳಿರುವುದು ಹಲವರ ಆಕ್ರೋಶಕ್ಕೆ ಕಾರನವಾಗಿದೆ.

ಭೇಟಿ ವೇಳೆ ಅಮಿತ್‌ ಶಾ, ಕೇವಲ ಸಂಗಮನಾಥನ ದರ್ಶನ ಪಡೆದು, ಆರತಿ ತೀರ್ಥ ತೆಗೆದುಕೊಂಡು ನಮಸ್ಕರಿಸಿದರು. ನಂತರ ಐಕ್ಯ ಮಂಟಪದ ಕಡೆಗೆ ತೆರಳಿದ ಶಾ ಐಕ್ಯಮಂಟಪದ ದರ್ಶನ ಪಡೆಯದೇ ದೂರದಿಂದಲೇ ನಮಸ್ಕರಿಸಿದ್ದಾರೆ.

ಅಮಿತ್‌‌ ಶಾ ಐಕ್ಯ ಮಂಟಪದ ದರ್ಶನ ಪಡೆಯದೇ ವಾಪಸ್‌ ಆಗಿರುವುದು ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಶಾ ಅವರಿಗೆ ಬಿಜೆಪಿ ಮುಖಂಡ ಲಕ್ಷ್ಮನ್ ಸವದಿ ಸಾಥ್ ನೀಡಿದರು.

Assembly election,amit shah,visit,kudalasangama

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ