ಹುಬ್ಬಳ್ಳಿ;ಏ-14: ಹುಬ್ಬಳ್ಳಿಯಲ್ಲಿ ಶಿವಸೇನಾ ರಾಜ್ಯ ಅಧ್ಯಕ್ಷ ಸುರೇಶ್ ಲಾಂಡಗೆ ಹಾಗೂ ಆದೋಲನ ಶ್ರೀ ಸಿದ್ದಲಿಂಗ ಸ್ವಾಮೀಜಿಯಿಂದ ಶಿವಸೇನಾದಿಂದ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ.
ಕರ್ನಾಟಕದಲ್ಲಿ ಶಿವಸೇನಾ ಹಾಗೂ ಶ್ರೀ ರಾಮ ಸೇನೆ ಎರಡು ಜೊತೆಯಲ್ಲಿದೆ.ಎರಡನೇ ಪಟ್ಟಿ ೧೮ ರಂದು ಬಿಡುಗಡೆ ಮಾಡಲಾಗುವುದು. ರಾಜ್ಯದ ೨೨೪ ಕ್ಷೇತ್ರದಲ್ಲಿ ೬೦ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ. ಇಂದು ೨೧ ಅಭ್ಯರ್ಥಿಗಳ ಹೆಸರು ಬಿಡುಗಡೆ ಮಾಡಲಾಗಿದೆ ಎಂದು ಸುರೇಶ್ ಲಾಂಡಗೆ ತಿಳಿಸಿದ್ದಾರೆ. ಕರ್ನಾಟಕದಲ್ಲಿ ರಾಷ್ಟ್ರೀಯ ಪಕ್ಷಗಳು ಸುಳ್ಳು ಹೇಳಿಕೊಂಡು ಹೊರಟಿವೆ. ಹಿಂದುತ್ವ ವಿಚಾರ ಹಾಗೂ ರೈತರ ಸಹಾಯಕ್ಕಾಗಿ ಶಿವಸೇನಾ ಮುಂದೆ ಬಂದಿದ್ದೇವೆ.
ಹಿಂದುತ್ವದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ.ಭ್ರಷ್ಟಾಚಾರ ಹೊತ್ತ ಕೇಸರಿ ನಾಯಕರು ಮನೆ ಮನೆ ಪ್ರಚಾರ ಮಾಡುತ್ತಿದ್ದಾರೆ. ಆದ್ರೇ ಬಿಜೆಪಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೂರು ಪಕ್ಷವನ್ನು ನಾವು ಮನೆಗೆ ಕಳುಹಿಸುತ್ತೇವೆ ಎಂದು ವಾಗ್ದಾಳಿ ನಡೆಸಿದರು.
ಅಭ್ಯರ್ಥಿಗಳ ಪಟ್ಟಿ ಹೀಗಿದೆ:
ಕಲಘಟಗಿ -ಈರಣ್ಣ ಕಾಳೆ,
ಹುಬ್ಬಳ್ಳಿ ಸೆಂಟ್ರಲ್ -ಕುಮಾರ ಹಕಾರೆ.
ಧಾರವಾಡ ಗ್ರಾಮೀಣ -ಈಶ್ವರಪ್ಪ ಪಾಟೀಲ್
ನರಗುಂದ -ದಾನು ದಾನಪ್ಪಗೌಡರ.
ಹಾಸನ-ಹೇಮಂತ ಜಾನಕೇರೆ.
ಶೃಂಗೇರಿ-ಮಹೇಶಕುಮಾರ ಕೊಪ್ಪಾ.
ಉಡುಪಿ ನಗರ-ಮಧುಕರ ಮುದರಡ್ಡಿ.
ಮಂಗಳೂರು-ಆನಂದ ಶೆಟ್ಟಿ ಅಡ್ಡಯಾರ.
ಹೆಬ್ಬಾಳ-ಟ.ಜಯಕುಮಾರ.
ತಿಪ್ಪಟೂರ-ದಂತೋಷ್ ಕುಮಾರ್ ಬೈರಟ್ಟಿ.
ಕನಕಗಿರಿ-ಕೆ.ಬಾಲಪ್ಪ.
ಜಮಖಂಡಿ-ವಾಸುದೇವ ಪಾರಸ್.
ಯಾದಗಿರಿ-ವಿಜಯಕುಮಾರ ಪಾಟೀಲ.
ಸುರಪುರ-ರಾಜಾಪಿಡ್ಡನಾಯಕ.
ರಾಯಚೂರ-ರಾಜಾ ಚಂದ್ರ ರಾಮನಗೌಡ್ರು.
ಶಿರಸಿ-ಆಕಾಶ.
ಸವದತ್ತಿ-ಜಯಶಂಕರ ವಣ್ಣೂರ
ಕುಡುಚಿ-ತಾವರಸಿಂಗ್ ಠಾಕೂರ.
ಹುಕ್ಕೇರಿ-ಸುಭಾಸಬಾಮು ಕಾಸರಕರ.
ಭಾಲ್ಕಿ-ವೆಂಕಟರಾವ ಬಿರಾದಾರ.
ಹುನಗುಂದ- ಪ್ರದೀಪ್.
Assembly election,Shivasena,candidate list