ಡಾ.ಬಿ.ಆರ್.ಅಂಬೇಡ್ಕರ್ ಅವರ 127 ನೇ ಜನ್ಮದಿನೋತ್ಸವ: ಕಡ್ಡಾಯ ಹಾಗೂ ಪ್ರಾಮಾಣಿಕ ಮತದಾನದ ಬಗ್ಗೆ ಜಾಗೃತಿಗಾಗಿ ಅಂಬೇಡ್ಕರ್ ವೇಷಧಾರಿಯಾದ ಡಾ.ಸಿ.ಎಸ್.ರಘು

ಬೆಂಗಳೂರು, ಏ.14-ಚುನಾವಣೆಯ ಹೊಸ್ತಿಲಲ್ಲಿ ನಿಂತಿರುವ ಕರ್ನಾಟಕದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 127 ನೇ ಜನ್ಮದಿನೋತ್ಸವವನ್ನು ವಿಶೇಷವಾಗಿ ಆಚರಿಸಲು ಕರ್ನಾಟಕ ದಲಿತ ಸಂಘರ್ಷ ಸಮಿತಿ ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಅಂಬೇಡ್ಕರ್ ಅವರ ಆಶಯದಂತೆ ಕಡ್ಡಾಯ ಹಾಗೂ ಪ್ರಾಮಾಣಿಕ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ದಸಂಸ ಅಧ್ಯಕ್ಷ ಡಾ.ಸಿ.ಎಸ್.ರಘು ಅವರು ಅಂಬೇಡ್ಕರ್ ವೇಷಧಾರಿಯಾಗಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು.

ಈ ವೇಳೆ ಮಾತನಾಡಿದ ಅವರು, ನಮ್ಮ ಪ್ರಜಾಪ್ರಭುತ್ವದ ಆಚರಣೆಯೇ ಚುನಾವಣೆ. ಚುನಾವಣೆ ನಮ್ಮ ಸಂವಿಧಾನದ ರಕ್ಷಣೆ ಹಾಗೂ ಮೂಲ ಆಶಯದ ಅಂಶ. ಇಂತಹ ಮಹತ್ ಆಚರಣೆಯಲ್ಲಿ ಪ್ರತಿಯೊಬ್ಬ ಮತದಾರ ಪ್ರಾಮಾಣಿಕವಾಗಿ ಪಾಲ್ಗೊಳ್ಳುವುದು ಅತ್ಯವಶ್ಯಕ. ಪ್ರಾಮಾಣಿಕ ಮತದಾರ ಮಾತ್ರ ಪ್ರಾಮಾಣಿಕ ಜನಪ್ರತಿನಿಧಿಯನ್ನು ಹುಟ್ಟಹಾಕಲು ಸಾಧ್ಯ. ಇಂತಹ ಸುಸಂಧರ್ಭವನ್ನು ಬಳಸಿಕೊಂಡು ಕಡ್ಡಾಯವಾಗಿ ಮತದಾನ ಮಾಡುವುದು ಅಗತ್ಯ ಎಂದು ಹೇಳಿದರು.

ನಗರದ ಮೈಸೂರು ಬ್ಯಾಂಕ್ ವೃತ್ತದಿಂದ ವಿಧಾನಸೌಧದ ಅಂಬೇಡ್ಕರ್ ಪ್ರತಿಮೆ ವರೆಗೂ ಬೃಹತ್ ಮೆರವಣಿಗೆಯನ್ನು ಆಯೋಜಿಸಲಾಗಿತ್ತು.

ಇದೇ ಸಂಧರ್ಭದಲ್ಲಿ ಓಂ ಪ್ರಕಾಶ್ ನಿರ್ದೇಶನದಲ್ಲಿ ಡಾ. ಎಸ್ ರಘು ಅರ್ಪಿಸುವ ಬಾಲ ಅಂಬೇಡ್ಕರ್ (ಬಾಬಾ ಸಾಹೇಬರಪಕ್ಕಾ ಅಭಿಮಾನಿ) ಚಲನ ಚಿತ್ರದ ಚಿತ್ರೀಕರಣಕ್ಕೂ ಚಾಲನೆ ನೀಡಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ