ಜಮೀರ್ ಅಹ್ಮದ್ ಅಕ್ರಮಗಳ ದಾಖಲೆ ಶೀಘ್ರದಲ್ಲಿಯೇ ಬಿಡುಗಡೆ: ಅಲ್ತಾಫ್ ಪಾಷಾ ಸವಾಲು

ಬೆಂಗಳೂರು:ಏ-2: ಜೆಡಿಎಸ್ ಪಕ್ಷದಿಂದ ಬಂಡಾಯ ಎದ್ದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಜಮೀರ್ ಅಹ್ಮದ್ 300 ಕೋಟಿ ರೂಪಾಯಿ ಆಸ್ತಿ ಹೇಗೆ ಸಂಪಾದಿಸಿದ್ದಾರೆ ಎಂಬುದು ಗೊತ್ತಿದೆ. ಜಮೀರ್ ಅಹ್ಮದ್ ಅಕ್ರಮಗಳ ದಾಖಲೆ ಶೀಘ್ರದಲ್ಲಿಯೇ ಬಿಡುಗಡೆ ಮಾಡುತ್ತೇನೆ ಎಂದು ಅಲ್ತಾಫ್ ಪಾಷಾ ಸವಾಲು ಹಾಕಿದ್ದಾರೆ.

ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಗೊಂಡ ಬಳಿಕ ಮಾತನಾಡಿದ ಅವರು, ನನಗೆ ತುಂಬಾ ತೊಂದರೆ ಕೊಟ್ಟು, ಮೋಸ ಮಾಡಿದರೇ, ನಿಮಗೆ ದೇವರು ಮೋಸ ಮಾಡ್ತಾನೆ. ಚಾಮರಾಜಪೇಟೆ ಒಂದೇ ಅಲ್ಲ, ಎಲ್ಲಾ ಕ್ಷೇತ್ರದಲ್ಲಿ ಓಡಾಡುತ್ತೇನೆ. ಜಮೀರ್ ಕೇವಲ ಮುಸ್ಲಿಂ ನಾಯಕ ಎಂದು ಹೇಳಿಕೊಳ್ಳುತ್ತಾರೆ. ಆದ್ರೆ ನಾನು ಜನ ನಾಯಕ. ಸುಳ್ಳು ಹೇಳುವ ಜಮೀರ್‌ಗೆ ದೇವರು ಪಾಠ ಕಲಿಸ್ತಾರೆ.

ಚಾಮರಾಜಪೇಟೆಯಲ್ಲಿರುವ ಜಮೀರ್ ಮನೆ ಬಾಡಿಗೆ ಮತ್ತು ಅಡ್ವಾನ್ಸ್ ನನ್ನದು. ನನ್ನ ಕೈ ಹಿಡಿತೀನಿ, ಕಾಲು ಹಿಡಿತೀನಿ ವೋಟ್ ಹಾಕಿಸು ಎಂದಿದ್ದ. ಜಮೀರ್ ಅಹ್ಮದ್ ನನ್ನ ಬಳಿ ಬೇಡಿಕೊಂಡ ವಿಡಿಯೋ ಇದೆ ಎಂದು ಹೇಳಿದರು.

ಮಾರ್ಕೆಟ್ ನಲ್ಲಿ ಬಡವರ 10 ಅಂಗಡಿಗಳನ್ನು ಮಾರಾಟ ಮಾಡಿದ್ದ, ಜಮೀರ್ ಮಾಡಿರುವ ಅಕ್ರಮಗಳ ಎಲ್ಲಾ ದಾಖಲೆ ಇದೆ. ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇನೆ ಎಂದು ಅಲ್ತಾಫ್ ಹೇಳಿದ್ದಾರೆ.

ಇನ್ನು ಶಾಸಕ ಅಖಂಡ ಶ್ರೀನಿವಾಸಮೂರ್ತಿ ವಿರುದ್ಧವೂ ವಾಗ್ದಾಳಿ ನಡೆಸಿದ ಅಲ್ತಾಫ್, ಶ್ರೀನಿವಾಸಮೂರ್ತಿ ಕೂಡ ಯಾರದ್ದೋ ಪ್ರಾಪರ್ಟಿನ ತನ್ನ ಹೆಸರಿಗೆ ಮಾಡಿಕೊಂಡಿರುವ ದಾಖಲೆ ನನ್ನ ಬಳಿ ಇದೆ. ಇಷ್ಟು ದಿನ ನಾನು ಸುಮ್ಮನೆ ಕೂತಿರಲಿಲ್ಲ. ಎಲ್ಲ ದಾಖಲೆ ಸಂಗ್ರಹಿಸಿದ್ದೇನೆ ಎಂದರು.

Assembly election,Altaf Khan, Joining JDS,zamir ahmed

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ