ತಿರುವನಂತಪುರಂ:ಫೆ-3: ರೈಲಿನಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ನಟಿ ಸನುಷಾರನ್ನು ಕೇರಳ ಪೊಲೀಸರು ಗೌರವಿಸಿದ್ದಾರೆ.
ಕೇರಳ ಡಿಜಿಪಿ ಲೋಕನಾಥ್ ಬೆಹೆರಾ ಅವರು ತ್ರಿವೆಂಡ್ರಮ್ ನಲ್ಲಿರುವ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ನಟಿಗೆ ಗೌರವಿಸಿ, ಆಕೆಯ ಧೈರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಬುಧವಾರ ಮಧ್ಯರಾತ್ರಿ ಸುಮಾರು 1 ಗಂಟೆ ಹೊತ್ತಿಗೆ ಮಂಗಳೂರು-ತಿರುವನಂತಪುರಂ ಮಾವೆಲಿ ಎಕ್ಸ್ ಪ್ರೆಸ್ ರೈಲಿನ ಎಸಿ ಬೋಗಿಯಲ್ಲಿ 40 ವರ್ಷದ ವ್ಯಕ್ತಿಯೋರ್ವ ನಟಿಗೆ ಲೈಂಗಿಕ ಕಿರುಕುಳ ನೀಡಿದ್ದ. ಈ ಸಂಬಂಧ ಆರೋಪಿ ತಮಿಳುನಾಡಿನ ಮೂಲತ ಆಂಟೋ ಬೋಸ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು ತ್ರಿಶೂರ್ ರೈಲ್ವೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.
Photo Credit: India.com