ಈಶಾನ್ಯ ರಾಜ್ಯಗಳು ಅಭಿವೃದ್ಧಿಯಾದರೆ ಮಾತ್ರ ಭಾರತದ ಅಭಿವೃದ್ಧಿ ವೇಗ ಪಡೆದುಕೊಳ್ಳಲಿದೆ ಎಂದು ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ

ಅಸ್ಸಾಂ:ಫೆ-3: ಗುವಾಹಟಿಯಲ್ಲಿ ಅಡ್ವಾಂಟೇಜ್ ಅಸ್ಸಾಂ-ಗ್ಲೋಬಲ್ ಇನ್ವೆಸ್ಟರ್ಸ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿರುವ ಪ್ರಧಾನಿ ಮೋದಿ, ಉದ್ಯಮ ಸ್ಥಾಪನೆ ಸರಳೀಕರಣದಲ್ಲಿ ಈಶಾನ್ಯ ರಾಜ್ಯಗಳಲ್ಲೇ ಅಸ್ಸಾಂ ಮುಂಚೂಣಿಯಲ್ಲಿದೆ. ಈಗಿನ ನಾಯಕತ್ವದಲ್ಲಿ ಅಸ್ಸಾಂ ಅಭಿವೃದ್ಧಿ ಹೊಂದುತ್ತಿದೆ ಎಂದರು.

ರಾಷ್ಟ್ರೀಯ ಬಿದಿರು ಮಿಷನ್ ನ್ನು ಸುಮಾರು 1300 ಕೋಟಿ ರೂಪಾಯಿ ವೆಚ್ಚದಲ್ಲಿ ರೂಪಿಸುತ್ತಿದ್ದೇವೆ, ಇದರಿಂದಾಗಿ ಈಶಾನ್ಯ ರಾಜ್ಯಗಳ ರೈತರಿಗೆ ಸಹಾಯವಾಗಲಿದೆ ಎಂದು ಮೋದಿ ಹೇಳಿದ್ದಾರೆ.

ಆಸೀಯಾನ್ ರಾಷ್ಟ್ರಗಳನ್ನು ತಲುಪಲು ಅಡ್ವಾಂಟೇಜ್ ಅಸ್ಸಾಂ ರಹದಾರಿ ಇದ್ದಂತೆ, ಈಶಾನ್ಯ ರಾಜ್ಯಗಳು ಅಭಿವೃದಿಯಾಗದೇ ಭಾರತದ ಅಭಿವೃದ್ಧಿ ವೇಗ ಪಡೆದುಕೊಳ್ಳುವುದಿಲ್ಲ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ