ತಿರುವನಂತಪುರಂ: ಜನರ ವಾಕ್ಸ್ವಾತಂತ್ರ್ಯ ಹತ್ತಿಕ್ಕಲಿರುವ ವಿವಾದಾತ್ಮಕ ಸುಗ್ರೀವಾಜ್ಞೆಯೊಂದನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಕೇರಳದ ಕಮ್ಯುನಿಸ್ಟ್ ಸರ್ಕಾರ ಹೊರಡಿಸಿದ್ದು,ಇದರ ಅನ್ವಯ ಯಾರೇ ಸಾಮಾಜಿಕ ಜಾಲತಾಣದಲ್ಲಿ ಮತ್ತೊಬ್ಬರನ್ನು ದೂಷಿಸಿ, ನಿಂದಿಸಿ ಮಾತನಾಡಿದರೆ ಶಿಕ್ಷೆ ವಿಸಬಹುದಾಗಿದೆ.
ಅಲ್ಲದೇ ಆರೋಪಿಗಳನ್ನು ವಾರಂಟ್ ರಹಿತ ಬಂಸುವ ವಿಶೇಷ ಅಕಾರವನ್ನುಪೊಲೀಸರಿಗೆ ನೀಡಲಾಗಿದ್ದು, ಸರ್ಕಾರದ ವಿರುದ್ಧ ಟೀಕಿಸುವವರನ್ನು ಜೈಲಿಗೆ ದೂಡಲು ಪಿಣರಾಯಿ ಸರ್ಕಾರ ಹೆಣೆದಿರುವ ತಂತ್ರವಿದು ಎಂದು ವಿಪಕ್ಷಗಳು, ಗಣ್ಯರು, ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಸುಗ್ರೀವಾಜ್ಞೆ ಸಾಮಾಜಿಕ ಜಾಲತಾಣದ ಜತೆಗೆ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಿಗೂ ಅನ್ವಯವಾಗುತ್ತದೆ.
ಅಲ್ಲದೇ ರಾಜ್ಯಾದ್ಯಂತ ಜನರು ಸುಗ್ರೀವಾಜ್ಞೆ ವಿರುದ್ಧ ಪ್ರತಿಭಟಿಸುತ್ತಿದ್ದರೂ, ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಸುಗ್ರೀವಾಜ್ಞೆಗೆ ಶುಕ್ರವಾರ ಸಹಿ ಹಾಕಿರುವುದು ಇನ್ನಷ್ಟು ಅಸಮಾಧಾನಕ್ಕೆ ಕಾರಣವಾಗಿದೆ.
ಸುಗ್ರೀವಾಜ್ಞೆಯು ಕೇರಳ ಪೊಲೀಸ್ ಕಾಯ್ದೆಗೆ ತರಲಾಗಿರುವ ತಿದ್ದುಪಡಿಯಾಗಿದ್ದು, 2011ರಲ್ಲಿ ವಿಧಾನಸಭೆಯಲ್ಲಿ ಅನುಮೋದನೆ ಪಡೆದಿದ್ದ ಕಾಯ್ದೆಗೆ ಸೆಕ್ಷನ್ 118 (ಎ) ಸೇರಿಸಲಾಗಿದೆ. ಇದರ ಅನ್ವಯ ತಪ್ಪಿತಸ್ಥರಿಗೆ 10,000 ರೂ. ದಂಡ ಹಾಗೂ ಐದು ವರ್ಷಗಳ ಸೆರೆವಾಸ ವಿಸಲಾಗುವುದು.
ಯಾರೇ ಸಾಮಾಜಿಕ ಜಾಲತಾಣದಲ್ಲಿ ಅಥವಾ ಮುದ್ರಣ, ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಮತ್ತೊಬ್ಬರಿಗೆ ಜೀವ ಬೆದರಿಕೆ ಹೂಡುವ, ವ್ಯಕ್ತಿಯ ಘಟನತೆಗೆ ಧಕ್ಕೆ ಉಂಟುಮಾಡುವ ಮಾಹಿತಿ ಹಂಚಿಕೊಂಡರೆ, ಪ್ರಸಾರ ಅಥವಾ ಮುದ್ರಿಸಿದರೆ ಅಂತವರು ಶಿಕ್ಷೆಗೆ ಪಾತ್ರರಾಗುತ್ತಾರೆ ಎಂದು ಸುಗ್ರೀವಾಜ್ಞೆಯಲ್ಲಿ ವಿವರಿಸಲಾಗಿದೆ.
ಸುಗ್ರೀವಾಜ್ಞೆ ವಿರುದ್ಧ ಜನರ ಆಕ್ರೋಶಕ್ಕೆ ಮುಖ್ಯವಾದ ಕಾರಣವೆಂದರೆ,ಪೊಲಿಸರು ಆರೋಪಿಗಳನ್ನು ವಾರಂಟ್ ರಹಿತ ಬಂಸಬಹುದಾಗಿರುವುದು. ಇದರಿಂದ ಪ್ರಜಾಪ್ರಭುತ್ವದ ಕಗ್ಗೊಲೆಯಾಗಲಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಸಮರ್ಥನೆಗೆ ಮುಂದಾದ ಪಿಣರಾಯಿ
ಸರ್ಕಾರದ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸಿಎಂ ಪಿಣರಾಯಿ ವಿಜಯನ್ ಸುಗ್ರೀವಾಜ್ಞೆಗೆ ಸಮರ್ಥನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಜನರು ಹಂಚಿಕೊಳ್ಳುವ ಅಭಿಪ್ರಾಯಗಳಿಂದ ಗಲಭೆ ಉಂಟಾಗದಿರಲಿ ಎಂದು ಹಾಗೂ ವಿಶೇಷವಾಗಿ ಸೈಬರ್ ಅಪರಾಧಗಳಿಂದ ಮಹಿಳೆ, ಮಕ್ಕಳನ್ನು ರಕ್ಷಿಸಲು ಸುಗ್ರೀವಾಜ್ಞೆ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ. ಜತೆಗೆ ಕಳೆದ ಕೆಲ ವರ್ಷಗಳಲ್ಲಿ ಮಹಿಳೆಯರ ಹಾಗೂ ಮಕ್ಕಳ ವಿರುದ್ಧ ಸೈಬರ್ ಅಪರಾಧಗಳು ಹೆಚ್ಚಾಗುತ್ತಿರುವುದೇ ಸುಗ್ರೀವಾಜ್ಞೆ ಹೊರಡಿಸಲು ಕಾರಣ ಎಂದು ಕಾರಣ ನೀಡಿದ್ದಾರೆ.
ವಾಕ್ ಸ್ವಾತಂತ್ಯಕ್ಕೆ ಧಕ್ಕೆ ಹೇಗೆ ?
ಸಾಮಾಜಿಕ ಜಾಲತಾಣದಲ್ಲಿ ಅಥವಾ ಮಾಧ್ಯಮಗಳಲ್ಲಿ ತಮ್ಮನ್ನು ನಿಂದಿಸಿದರೆ, ಯಾವುದೇ ಆಧಾರವಿಲ್ಲದೇ ಘನತೆಗೆ ಧಕ್ಕೆ ತಂದರೆ, ಜನರು ಸಂವಿಧಾನದ ಸೆಕ್ಷನ್ 499 ಹಾಗೂ 500 ಅನ್ವಯ ಮಾನಹಾನಿ ಮೊಕದ್ದಮೆ ದಾಖಲಿಸಬಹುದು. ಆದರೆ ಇದಕ್ಕೂ, ಕೇರಳ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಗೂ ಒಂದು ಪ್ರಮುಖ ವ್ಯತ್ಯಾಸವಾಗಿದೆ. ಮಾನನಷ್ಟ ಮೊಕದ್ದಮೆ ಹೂಡಲು ಅರ್ಜಿದಾರನ ಅಗತ್ಯವಿದ್ದು, ಇದರಲ್ಲಿಪೊಲೀಸರು ತಾವೇ ಸ್ವಯಂ ಪ್ರಕರಣ ದಾಖಲಿಸಬಹುದು ಹಾಗೂ ಎಫ್ಆರ್ಐನಲ್ಲಿರುವ ಆರೋಪಿಯನ್ನು ಯಾವುದೇ ವಾರಂಟ್ ಇಲ್ಲದೇ ಬಂಸಬಹುದು.