ಹೊಸದಿಲ್ಲಿ: ಪ್ರತಿ ಚುನಾವಣೆ ಸೋತಾಗ ಕಾಂಗ್ರೆಸ್ ನಾಯಕರೇ ಸ್ವಪಕ್ಷದ ಪರಾಮರ್ಶೆ ಮಾಡುವ ಪ್ರವೃತ್ತಿ ಬಿಹಾರ ಚುನಾವಣೆ ಕಳಪೆ ಪ್ರದರ್ಶನದ ಬಳಿಕವೂ ಮುಂದುವರಿದಿದ್ದು, ಸೋಲಿನ ಕುರಿತು ನಾವು ಆತ್ಮಾವಲೋಕನ ಮಾಡಿಕೊಳ್ಳುವುದು ಅತ್ಯವಶ್ಯ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ತಾರಿಕ್ ಅನ್ವರ್ ಹೇಳಿದ್ದಾರೆ.
ಬಿಹಾರ ಚುನಾವಣೆಯಲ್ಲಿ ನಾವು ಕಳಪೆ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿಯೇ ಮಹಾಘಟಬಂಧನವು ಅಕಾರದಿಂದ ವಂಚಿತವಾಯಿತು. ನಾವು ಸೋಲನ್ನು ಸ್ವೀಕರಿಸಿ, ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಬಿಹಾರದಲ್ಲಿ ಎಐಎಂಐಎಂ ಪಕ್ಷವು ಐದು ಕ್ಷೇತ್ರಗಳಲ್ಲಿ ಗೆಲುವು ಸಾಸಿರುವುದು ನಮಗೆ ಒಳ್ಳೆಯ ಬೆಳವಣಿಗೆಯಲ್ಲ. ನಾವು ಸೋಲಿಗೆ ಕಾರಣ ಹುಡುಕಿ, ಇದನ್ನು ಮೆಟ್ಟಿನಿಲ್ಲಲು ಯತ್ನಿಸಬೇಕು ಎಂದು ಹೇಳಿದ್ದಾರೆ.
ಬಿಹಾರದ 70 ಕ್ಷೇತ್ರಗಳಲ್ಲಿ ಸ್ರ್ಪಸಿದ್ದ ಕಾಂಗ್ರೆಸ್, ಕೇವಲ 19 ಕ್ಷೇತ್ರಗಳಲ್ಲಿ ಗೆಲುವು ಸಾಸಲು ಶಕ್ತವಾಗಿದೆ. ಕಾಂಗ್ರೆಸ್ಸಿನ ಕಳಪೆ ಪ್ರದರ್ಶನ ಕುರಿತು ಆರ್ಜೆಡಿ ನಾಯಕರು ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಆದಾಗ್ಯೂ, ಚುನಾವಣೆಗಳಲ್ಲಿ ಸೋತಾಗ, ಹಿನ್ನಡೆ ಅನುಭವಿಸಿದಾಗ ಕಾಂಗ್ರೆಸ್ ನಾಯಕತ್ವದ ಬಗ್ಗೆ ಸ್ವಪಕ್ಷೀಯರೇ ಟೀಕಿಸುತ್ತಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕೆಲ ತಿಂಗಳ ಹಿಂದೆ ಸಭೆ ಸಹ ಆಯೋಜಿಸಿತ್ತು.