ರಾಜ್ಯದ ಕೆಲ ಜಿಲ್ಲೆಯಲ್ಲಿ ಇತ್ತೀಚಿಗೆ ಉಂಟಾದ ಅತಿವೃಷ್ಟಿ ಪ್ರವಾಹದಿಂದ 24 ಸಾವಿರದ 942 ಕೋಟಿ ರೂಪಾಯಿ ಹಾನಿಯಾಗಿದ್ದು, ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಬೆಂಗಳೂರಿನಲ್ಲಿಂದು ತಿಳಿಸಿದ್ದಾರೆ. ಪ್ರವಾಹದಿಂದ 90 ಮಂದಿ ಸಾವನ್ನಪ್ಪಿದ್ದು, 180 ತಾಲೂಕುಗಳನ್ನು ಪ್ರವಾಹಪೀಡಿತ ಎಂದು ಘೋಷಿಸಲಾಗಿದೆ, ಮೃತಪಟ್ಟವರ ಪ್ರತಿ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ವಿತರಿಸಲಾಗಿದೆ. 21.6 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದ್ದು, ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು. 29 ಸಾವಿರದ 560 ಮನೆಗಳಿಗೆ ನೀರು ನುಗ್ಗಿದ್ದು, 48 ಸಾವಿರದ 224 ಮನೆಗಳಿಗೆ ಹಾನಿಯಾಗಿದೆ. ಸಂಪೂರ್ಣ ಹಾನಿಗೊಳಗಾದ ಮನೆಗಳಿಗೆ 5 ಲಕ್ಷ ರೂಪಾಯಿ, ಅಲ್ಪ ಹಾನಿಗೊಳಗಾದ ಮನೆಗಳಿಗೆ 3 ಲಕ್ಷ ರೂಪಾಯಿ ಪರಿಹಾರ ವಿತರಿಸಲಾಗುತ್ತಿದೆ. ಬೆಳೆ ಹಾನಿ ಪರಿಹಾರವನ್ನು ತಕ್ಷಣ ವಿತರಿಸುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಅಶೋಕ ತಿಳಿಸಿದರು.
Related Articles
ಅ. 21ರಂದು ಅತಿವೃಷ್ಟಿ ತಾಲೂಕುಗಳ ವೈಮಾನಿಕ ಸಮೀಕ್ಷೆ
October 20, 2020
Varta Mitra News - SP
ರಾಜ್ಯ, ಪ್ರಧಾನಿ ಮೋದಿ, ಕಾರ್ಯಕ್ರಮಗಳು
Comments Off on ಅ. 21ರಂದು ಅತಿವೃಷ್ಟಿ ತಾಲೂಕುಗಳ ವೈಮಾನಿಕ ಸಮೀಕ್ಷೆ
Seen By: 59 ಶಿಕಾರಿಪುರ : ಉತ್ತರ ಕರ್ನಾಟಕದ ಅತಿವೃಷ್ಟಿ ತಾಲೂಕುಗಳ ವೈಮಾನಿಕ ಸಮೀಕ್ಷೆಯನ್ನು ಅ. 21ರಂದು ನಡೆಸಲಿದ್ದೇನೆ. ಪ್ರಧಾನಮಂತ್ರಿ ಅವರು ನೆರೆಪೀಡಿತ ಪ್ರದೇಶಗಳಿಗೆ ಎಲ್ಲಾ ನೆರವು [more]
* 136 ಗ್ರಾಮಗಳ 43,158 ಜನರ ಸ್ಥಳಾಂತರ * ಪ್ರವಾಹಕ್ಕೆ ಸಿಲುಕಿದ್ದ 5,016 ಜನರ ರಕ್ಷಣೆ * 233 ಕಾಳಜಿ ಕೇಂದ್ರದಲ್ಲಿ 38,676 ಜನರಿಗೆ ಆಶ್ರಯ * ಹಾನಿಗೊಳಗಾದ 13,533 ಮನೆಗಳಿಗೆ ಮೊದಲ ಕಂತಿನ ಪರಿಹಾರ 35.48 ಕೋಟಿ ರೂ. ಬಿಡುಗಡೆ * 16,075 ಕುಟುಂಬಗಳ ಪೈಕಿ 12,113 ಕುಟುಂಬಗಳಿಗೆ ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ತಲಾ 10 ಸಾವಿರ ರೂ. ಪಾವತಿ * 2020ರ ಮುಂಗಾರು ಅವಯಲ್ಲಿ 25 ಜಿಲ್ಲೆಗಳಲ್ಲಿ 173 ತಾಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ * ರಾಜ್ಯದಲ್ಲಿ ವಾಡಿಕೆಗಿಂತ ಶೇ.245 ರಷ್ಟು ಹೆಚ್ಚು ಮಳೆ, ಉ.ಒಳನಾಡಿನಲ್ಲಿ ಶೇ.331 ರಷ್ಟು ಹೆಚ್ಚು, ಕರಾವಳಿಯಲ್ಲಿ ಶೇ.435 ರಷ್ಟು ಹೆಚ್ಚು ಮಳೆ
October 23, 2020
Varta Mitra News - SP
ಬೆಂಗಳೂರು, ರಾಜ್ಯ, ಆರೋಗ್ಯ, ಮತ್ತಷ್ಟು
Comments Off on * 136 ಗ್ರಾಮಗಳ 43,158 ಜನರ ಸ್ಥಳಾಂತರ * ಪ್ರವಾಹಕ್ಕೆ ಸಿಲುಕಿದ್ದ 5,016 ಜನರ ರಕ್ಷಣೆ * 233 ಕಾಳಜಿ ಕೇಂದ್ರದಲ್ಲಿ 38,676 ಜನರಿಗೆ ಆಶ್ರಯ * ಹಾನಿಗೊಳಗಾದ 13,533 ಮನೆಗಳಿಗೆ ಮೊದಲ ಕಂತಿನ ಪರಿಹಾರ 35.48 ಕೋಟಿ ರೂ. ಬಿಡುಗಡೆ * 16,075 ಕುಟುಂಬಗಳ ಪೈಕಿ 12,113 ಕುಟುಂಬಗಳಿಗೆ ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ತಲಾ 10 ಸಾವಿರ ರೂ. ಪಾವತಿ * 2020ರ ಮುಂಗಾರು ಅವಯಲ್ಲಿ 25 ಜಿಲ್ಲೆಗಳಲ್ಲಿ 173 ತಾಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ * ರಾಜ್ಯದಲ್ಲಿ ವಾಡಿಕೆಗಿಂತ ಶೇ.245 ರಷ್ಟು ಹೆಚ್ಚು ಮಳೆ, ಉ.ಒಳನಾಡಿನಲ್ಲಿ ಶೇ.331 ರಷ್ಟು ಹೆಚ್ಚು, ಕರಾವಳಿಯಲ್ಲಿ ಶೇ.435 ರಷ್ಟು ಹೆಚ್ಚು ಮಳೆ
Seen By: 58 ಬೆಂಗಳೂರು: ಮುಂಗಾರು ಅವಯಲ್ಲಿ ಅತಿವೃಷ್ಟಿಯಿಂದಾಗಿರುವ ನಷ್ಟದ ಕುರಿತು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದು, ಸೂಕ್ತ ಪ್ರಸ್ತಾವನೆಗಳೊಂದಿಗೆ ನೆರವು ಕೇಳಲು ರಾಜ್ಯ ಸರ್ಕಾರ [more]
ಮಳೆ ತಗ್ಗಿದರೂ ಮುಂದುವರೆದ ಪ್ರವಾಹ ಭೀತಿ
October 17, 2020
Varta Mitra News - SP
ರಾಜ್ಯ, ವಾಣಿಜ್ಯ, ಮತ್ತಷ್ಟು
Comments Off on ಮಳೆ ತಗ್ಗಿದರೂ ಮುಂದುವರೆದ ಪ್ರವಾಹ ಭೀತಿ
Seen By: 56 ಹುಬ್ಬಳ್ಳಿ: ಕಳೆದ ನಾಲ್ಕೈದು ದಿನಗಳಿಂದ ಕುಂಭದ್ರೋಣದಂತೆ ಸುರಿಯುತ್ತಿದ್ದ ಮಳೆ ಶುಕ್ರವಾರ ತಗ್ಗಿದ್ದು, ಕೃಷ್ಣಾ ಹಾಗೂ ಭೀಮಾ ತೀರದಲ್ಲಿ ಪ್ರವಾಹ ಭೀತಿ ಮುಂದುವರೆದಿದೆ. ಮಹಾರಾಷ್ಟ್ರದಲ್ಲಿ [more]