ಬೆಂಗಳೂರು: ಕನ್ನಡ ಚಿತ್ರರಂಗದ ದಿಗ್ಗಜ, ರೆಬಲ್ಸ್ಟಾರ್, ಮಾಜಿ ಸಚಿವರಾದ ಅಂಬರೀಶ್ ಅವರ ನಿಧನ ದಿಗ್ಭ್ರಾಂತಿ ಮೂಡಿಸಿದೆ. ಮಂಡ್ಯದಲ್ಲಿ ನಡೆದ ಬಸ್ ಅಪಘಾತದ ಬೆನ್ನಲ್ಲೇ ಮಂಡ್ಯದ ಗಂಡು ಅಂಬರೀಶ್ ಅವರ ನಿಧನದ ಸುದ್ದಿ ಇಡೀ ಮಂಡ್ಯ, ರಾಜ್ಯ ಹಾಗೂ ದೇಶವನ್ನೇ ಶೋಕದಲ್ಲಿ ಮುಳುಗಿಸಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಶೋಕ ಸಂದೇಶ ವ್ಯಕ್ತಪಡಿಸಿದ್ದಾರೆ.
ಮಂಡ್ಯದಲ್ಲಿ ನಡೆದ ಭೀಕರ ಅಪಘಾತದಲ್ಲಿ ಸಾವನ್ನಪ್ಪಿನ ಜನರ ಶೋಕದ ದುಃಖ ಮಾಸುವ ಮುನ್ನವೇ ಇಡೀ ರಾಜ್ಯಕ್ಕೆ ಮತ್ತೊಂದು ಮರ್ಮಾಘಾತ ಉಂಟಾಗಿದೆ. ಅಂಬರೀಶ್ ಅವರು ನಮ್ಮೆಲ್ಲರ ನೆಚ್ಚಿನ ನಾಯಕ ನಟ, ಕನ್ನಡ ಚಿತ್ರರಂಗ ಮೇರು ನಾಯಕ, ನೇರ ನುಡಿಯಿಂದಲೇ ಎಲ್ಲರಿಗೂ ಮೆಚ್ಚುಗೆ ಆಗುತ್ತಿದ್ದರು.
ಡಾ.ರಾಜಕುಮಾರ್, ವಿಷ್ಣು ವರ್ಧನ್ ಅವರ ಸಾಲಿನ ಅಂಬರೀಶ್ ಇಲ್ಲವೆಂದರೆ ನಂಬಲು ಸಾಧ್ಯವಾಗದಷ್ಟು ದುಃಖ ಉಮ್ಮಳಿಸುತ್ತಿದೆ. ಚಿತ್ರರಂಗ ಅಷ್ಟೆ ಅಲ್ಲದೇ , ರಾಜಕೀಯದಲ್ಲೂ ಸಾಕಷ್ಟು ಗುರುತಿಸಿಕೊಂಡು ಸಚಿವರಾಗಿ ಉತ್ತಮ ಕಾರ್ಯ ಮಾಡಿದವರು. ಚಿತ್ರರಂಗ ಹಾಗೂ ರಾಜಕೀಯ ಕ್ಷೇತ್ರವು ಒಬ್ಬ ನಾಯಕನ್ನು ಕಳೆದುಕೊಂಡು ಅನಾಥವಾಗಿದೆ. ಇವರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸುವೆ.
Rebel Star Ambarish,passed away,DCM G Parameshwar,Condolence