ಕಷ್ಟದಲ್ಲೂ ಆತ್ಮಹತ್ಯೆಯ ಆಲೋಚನೆ ಮಾಡಬೇಡಿ- ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಬೆಂಗಳೂರು: ಈ ಬಾರಿ ರಾಜ್ಯದಲ್ಲಿ ಮಾನ್ಸೂನ್ ಮಳೆ ನಿರೀಕ್ಷಿತ ಮಟ್ಟದಲ್ಲಿ ಆಗದ ಕಾರಣ ಬರಗಾಲದ ಛಾಯೆ ಮೂಡಿದ್ದು, ೧೦೦ ತಾಲೂಕನ್ನು ಬರಪೀಡಿತ ಎಂದು ಘೋಷಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಆತಂಕ ವ್ಯಕ್ತಪಡಿಸಿದರು.

ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ಕೃಷಿ‌ಮೇಳ ಹಾಗೂ ರಾಜ್ಯನಟ್ಟದ ರೈತ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಸೂಕ್ತ ಸಂದರ್ಭದಲ್ಲಿ‌ ಮಳೆಯಾಗದೇ ರೈತ ಆತ್ಮಹತ್ಯೆಯಂಥ ಆತುರದ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಈ ಬಾರಿ‌ ಮಾನ್ಸೂನ್‌ ಕೂಡ ನಿರೀಕ್ಷೆಯ ಮಟ್ಟ ತಲುಪಿಲ್ಲ. ಇದರಿಂದ ಬರಗಾಲದ ಸೂಚನೆ ಕಂಡು ಬಂದಿದೆ. ರಾಜ್ಯ ಸರಕಾರ ಬರಗಾಲಕ್ಕೆ ಸೂಕ್ತ ರೀತಿಯ ಕ್ರಮ ಕೈಗೊಳ್ಳುತ್ತಿದೆ ಎಂದರು.

ಇಡೀ ದೇಶದಲ್ಲಿ ಬೆಂಗಳೂರು ಕೃಷಿ ವಿವಿ ಮಾದರಿಯಾಗಿದೆ. ಇದುವರೆಗು ೧೮೪ ಹೊಸ ತಳಿಗಳನ್ನು ಉತ್ಪಾದನೆ ಮಾಡಿ ದೇಶಕ್ಕೆ ಕೊಡುಗೆ ನೀಡಿದೆ. ನಾನು ಕೂಡ ಇದೇ ವಿವಿಯಲ್ಲಿ ಕಲಿತೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದರು.

ಹಿಂದೆಲ್ಲ ಭಾರತ ಆಹಾರ ಧಾನ್ಯಗಳನ್ನು ಬೇರೆ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುವ ಸ್ಥಿತಿ ಇತ್ತು. ಇಂದು ನಮ್ಮ ದೇಶದಿಂದಲೇ ಆಹಾರ ಪದಾರ್ಥ ರಫ್ತು ಮಾಡುವ ಮಟ್ಟಕ್ಕೆ ಬೆಳೆದು‌ನಿಂತಿದ್ದೇವೆ. ಆದರೆ ಸಾಧನೆ ಮಾಡುವುದು ಸಾಕಷ್ಟಿದೆ. ಕೃಷಿ ಮಾಡುವುದು ಕಷ್ಟಕರವಾದರೂ ರೈತರು ಇನ್ನಷ್ಟು ಹೆಚ್ಚಿನ ಪ್ರಯತ್ನ ಹಾಕಿದರೆ ದೇಶದ ಆರ್ಥಿಕತೆಗೂ ಕೃಷಿಯಿಂದ ಕೊಡುಗೆ ನೀಡಲು ಸಾಧ್ಯವಾಗಲಿದೆ ಎಂದರು.

Bangalore GKVK,krishi mela,DCM G parameshwar

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ