ವಕೀಲ ಅಜಿತ್ ಸಾವಿಗೆ ನ್ಯಾಯ ಕೊಡಿಸಲು ಬದ್ಧ: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಬೆಂಗಳೂರು:ಆ-7:ಇತ್ತೀಚೆಗಷ್ಟೇ ಸಾವನ್ನಪ್ಪಿದ್ದ ದಾಂಡೇಲಿಯಾ ವಕೀಲ ಅಜಿತ್‌ ನಾಯಕ್ ಪ್ರಕರಣದ ತನಿಖೆ ನಡೆಯುತ್ತಿದ್ದು, ನ್ಯಾಯ ಸಿಗದೇ ಹೋದರೆ ವಿಶೇಷ ತನಿಖೆಗೆ ವಹಿಸುವುದಾಗಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.

ಅಡ್ವೋಕೇಟ್ ಅಸೋಸಿಯೇಷನ್ ಆಫ್ ಬೆಂಗಳೂರು ಹಾಗೂ ದಾಂಡೇಲಿಯ ಸದಸ್ಯರು ವಿಧಾನಸೌಧಕ್ಕೆ ಆಗಮಿಸಿ, ಅಜಿತ್‌ ನಾಯಕ್‌ ಕೊಲೆ ಪ್ರಕರಣವನ್ನು ಸಿಐಡಿ ಅಥವಾ ವಿಶೇಷ ತನಿಖೆ‌ಗೆ ವಹಿಸುವಂತೆ ಮನವಿ‌‌ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಅವರು, ಅಜಿತ್‌ ನಾಯಕ್ ಪ್ರಕರಣದ ತನಿಖೆ ಈಗಾಗಲೇ ನಡೆಯುತ್ತಿದೆ. ಈ ತನಿಖೆಯಲ್ಲಿ‌ ನ್ಯಾಯ ಸಿಗದೇ ಹೋದರೇ ಮುಂದಿನ‌ ಕ್ರಮ ತೆಗೆದುಕೊಳ್ಳುತ್ತೇವೆ. ನ್ಯಾಯವಾದಿಗಳಿಗೆ ನ್ಯಾಯ ಕೊಡಿಸುವುದು ನಮ್ಮ ಜವಾಬ್ಧಾರಿ ಎಂದರು.

ಅಡ್ವೋಕೇಟ್ ಅಸೋಸಿಯೇಷನ್ ಆಫ್ ಬೆಂಗಳೂರು ಅಧ್ಯಕ್ಷ ರಂಗನಾಥ್ ಇದ್ದರು.

Advocate Ajit nayak Murder case,Members of the Advocate Association of Bangalore and Dandeli,Meet,DCM G.Parameshwar

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ