ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಆದರೆ ಪ್ರಕರಣದ ಬಗ್ಗೆ ಹೆಚ್ಚು ವಿಚಾರ ಬಹಿರಂಗ ಪಡಿಸಲು ಸಾಧ್ಯವಾಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.
ಗೃಹಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಕೇಳಿ ಬಂದಿರಿವ ಸಂಘ ಸಂಸ್ಥೆಗಳ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಶೀಘ್ರವೇ ತೀರ್ಮಾನ ಮಾಡಲಾಗುವುದು ಎಂದರು.
ಸತೀಶ್ ಜಾರಕಿಹೊಳಿ ಅವರು ಅಸಮಾಧಾನವಾಗಿರುವ ಬಗ್ಗೆ ನನಗೆ ಗೊತ್ತಿಲ್ಲ. ಈ ಬಗ್ಗೆ ಅವರಿಂದಲೇ ತಿಳಿದುಕೊಳ್ಳುತ್ತೇನೆ. ವೈಯಕ್ತಿಯ ಅಥವಾ ಕ್ಷೇತ್ರದ ಕೆಲಸವಿದ್ದರೆ ಮಾತನಾಡುತ್ತೇನೆ ಎಂದರು.
ಬೆಳಗಾವಿ ಅಧಿವೇಶಕ್ಕೆ ಕಾಂಗ್ರೆಸ್ ಶಾಸಕರ ಗೈರು ಆಗುವ ವಿಚಾರದ ಬಗ್ಗೆ ಮಾಹಿತಿ ಇಲ್ಲ.ಯಾವ ಶಾಸಕರೂ ಹಾಗೆ ನಮಗೆ ಹೇಳಿಲ್ಲ. ಅಧ್ಯಕ್ಷರ ಗಮನಕ್ಕೆ ತಂದಿರಬಹುದು ಎಂದರು.
ಸಚಿವ ಸಂಪುಟ ವಿಸ್ತರಣೆ ವಿಚಾರ ಹೈಕಮಾಂಡ್ ಗೆ ಬಿಟ್ಟ ವಿಚಾರ. ಹೈಕಮಾಂಡ್ ಒಪ್ಪಿಗೆ ಕೊಟ್ಟರೆ ಅರ್ಥ ಗಂಟೆಯ ಕೆಲಸ. ಅಧಿವೇಶನಕ್ಕೆ ಮುಂಚೆಯೇ ಮಾಡಲು ಅವಕಾಶ ಕೇಳಿದ್ದೇವೆ ಅನುಮತಿ ಸಿಕ್ಕರೆ ಮಾಡುತ್ತೇವೆ ಎಂದರು.
Gauri Lankesh murder case,filed Charge Sheet,DCM