ಗದಗ:ಜು-26: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲಿ ಆರ್ ಎಸ್ ಎಸ್ ಸೇರಿದಂತೆ ಹಿಂದೂ ಸಂಘಟನೆಗಳ ಕೈವಾಡ ಇದೆ ಎಂದು ಬಂಡಾಯ ಸಾಹಿತಿ ಬಸವರಾಜ್ ಸೂಳಿಭಾವಿ ಗಂಭೀರ ಆರೋಪ ಮಾಡಿದ್ದಾರೆ.
ಗದಗದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಎಸ್ಐಟಿ ಬಂಧಿಸಿರುವ 10 ಜನ ಆರೋಪಿಗಳು ಬೇರೆ ಬೇರೆ ಹಿಂದೂ ಸಂಘಟನೆಗಳ ಸದಸ್ಯರು. ಸಂಘಟನೆಗಳ ಹೆಸರು ಬೇರೆಯಾದ್ರೂ ಅದರ ಮಾತೃಸಂಸ್ಥೆ ಆರ್ಎಸ್ಎಸ್ ಎಂದು ದೂರಿದರು.
ಆರ್ ಎಸ್ ಎಸ್ ದೇಶದಲ್ಲಿ ಹಿಂಸೆ ನಡೆಸುತ್ತಿದ್ದು, ವಿಧ್ವಂಸಕ ಕೃತ್ಯಗಳು ನಡೆದ ನಂತರ ಅದನ್ನು ಮಾಡಿದ ವ್ಯಕ್ತಿ ನಮ್ಮ ಸಂಘಟನೆಯವನಲ್ಲ ಎನ್ನುತ್ತೆ. ಈ ಮೂಲಕ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾ ಬೇರೆ ಬೇರೆ ಧರ್ಮಗಳ ಪ್ರತಿನಿಧಿಗಳನ್ನು ಹತ್ಯೆ ಮಾಡುತ್ತೆಎಂದು ಆರೋಪಿಸಿದರು.
ಎಸ್ ಐ ಟಿ ಅಧಿಕಾರಿಗಳು ಪ್ರಮುಖವಾಗಿ ಆರ್ಎಸ್ಎಸ್ ನ ಕಚೇರಿ ಕೇಶವ ಕೃಪದ ಮೇಲೆ ತನಿಖೆ ನಡೆಸಬೇಕು, ಗೋ ರಕ್ಷಣೆಯ ಹೆಸರಿನಲ್ಲಿ ಸಾಮೂಹಿಕ ಹಿಂಸೆ ನಡೆಸುತ್ತಾ, ಆಹಾರ ಪದ್ಧತಿಯಲ್ಲೂ ಸಹ ದ್ವಿರಾಷ್ಟ್ರ ಪದ್ಧತಿಯನ್ನು ಅನುಸರಿಸಿ ಗುಂಪು ಹಿಂಸೆ ನಡೆಸುತ್ತಿದ್ದಾರೆ ಎಂದು ಬಸವರಾಜ್ ಸೂಳಿಭಾವಿ ವಾಗ್ದಾಳಿ ನಡೆಸಿದರು.
Gauri Lankesh murder case, Basavaraj Sulibhavi,RSS