19ನೇ ಕಾರ್ಗಿಲ್ ವಿಜಯದ ದಿವಸ್: ಯೋಧರಿಗೆ ಪ್ರಧಾನಿ ನಮನ

ನವದೆಹಲಿ:ಜು-೨೬: 19ನೇ ಕಾರ್ಗಿಲ್ ವಿಜಯದ ದಿವಸ್ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ವೀರಯೋಧರಿಗೆ ನಮನ ಸಲ್ಲಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಶಾಂತಿಯನ್ನು ಕದಡಲು ಯತ್ನ ನಡೆಸಿದವರಿಗೆ ‘ಆಪರೇಷನ್ ವಿಜಯ್’ ಮೂಲಕ ಯೋಧರು, ದೇಶದ ಸುರಕ್ಷತೆಯನ್ನು ಸಾಬೀತು ಮಾಡಿದ್ದರು ಎಂದು ಹೇಳಿದ್ದಾರೆ.

ಆಪರೇಷನ್ ವಿಜಯದಲ್ಲಿ ದೇಶಕ್ಕಾಗಿ ತ್ಯಾಗ ಮಾಡಿದ, ಹೋರಾಡಿದ ವೀರ ಯೋಧರಿಗೆ ನನ್ನ ನಮನಗಳು ಎಂದು ತಿಳಿಸಿದ್ದಾರೆ.

1999, ಮೇ. 9 ರಂದು ಪಾಕಿಸ್ತಾನ, ಭಾರತದ ಗಡಿ ಭಾಗದಲ್ಲಿ ನುಸುಳಿ ಶೆಲ್ ದಾಳಿ ಮಾಡಲು ಪ್ರಾರಂಭಿಸಿತ್ತು. ಭಾರತ ಸೇನೆಯೂ ಸನ್ನದ್ಧವಾಗಿ ಯೋಧರನ್ನು ಕಾರ್ಗಿಲ್ ಸೆಕ್ಟರ್’ಗೆ ಕಳುಹಿಸಿತ್ತು. ಭಾರತ ಆಗ ಪ್ರಮುಖವಾಗಿ ನಡೆಸಿದ್ದು, ವಾಯುಪಡೆಯ ದಾಳಿಯನ್ನು. ಈ ವೇಳೆ ಭಾರತದ ವಾಯುಸೇನೆಯ 2 ಫೈಟರ್ ಹಾಗೂ ಒಂದು ಹೆಲಿಕಾಪ್ಟರ್ ಕೂಡ ಪಾಕಿಸ್ತಾನ ಸೇನೆ ಉಡಾಯಿಸಿತ್ತು. ಆದಾಗಿಯೂ ಭಾರತ ಸೇನೆ 32000 ಅಡಿ ಎತ್ತರದ ಪ್ರದೇಶದಲ್ಲಿ ಭಾರತ ಮೊದಲ ಬಾರಿ ವಾಯುದಾಳಿ ನಡೆಸಿತ್ತು. ಕಾರ್ಗಿಲ್ ದ್ರಾಸ್ ಸೆಕ್ಟರ್ ನಲ್ಲಿರುವ ಟೈಗರ್ ಹಿಲ್ ಪಾಕಿಸ್ತಾನದ ವಶದಲ್ಲಿರುವ ಅತ್ಯಂತ ಎತ್ತರದ ಪ್ರದೇಶ. ಅಲ್ಲಿ ನಡೆದ 11 ಗಂಟೆ ಯುದ್ಧ ಸೆರೆಯಾಗಿದೆ. ಅಂತಿಮವಾಗಿ ಜು.26ರಂದು ಕಾರ್ಯಾಚರಣೆ ಮುಗಿದು ವಿಜಯ ದಿವಸವನ್ನು ಭಾರತ ಘೋಷಿಸಿತು.

PM Modi pays homage to martyrs on Kargil Diwas, praises Vajpayee’s leadership

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ