ಭಾರತದಲ್ಲಿ ಇಸ್ಲಾಮ್ ಅಪಾಯದಲ್ಲಿದೆ ಎಂಬ ಪ್ರಚಾರಕ್ಕೆ ಬಲಿಯಾಗದಿರಿ:ಭಾಗ್ವತ್ ಎಲ್ಲ ಭಾರತೀಯರ ಡಿಎನ್‍ಎ ಒಂದೇ: ದೇಶಕ್ಕಾಗಿ ಒಂದಾಗಿ ದುಡಿಯೋಣ

Nagpur: RSS Chief Mohan Bhagwat addresses during Balasaheb Deoras Birth Centenary function in Nagpur on Wednesday. PTI Photo(PTI12_17_2015_000123A)

ಗಾಜಿಯಾಬಾದ್:`ಭಾರತದಲ್ಲಿ ಇಸ್ಲಾಮ್ ಅಪಾಯದಲ್ಲಿದೆ ‘ ಎಂಬ ಪ್ರಚಾರಕ್ಕೆ ಬಲಿಯಾಗದಿರಿ ಎಂದು ಮುಸ್ಲಿಮರನ್ನು ಆಗ್ರಹಿಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್ ಮೋಹನ್ ಭಾಗ್ವತ್ ಅವರು, ಇಲ್ಲಿರುವ ಎಲ್ಲ ಭಾರತೀಯರ ಡಿಎನ್‍ಎಯೂ ಒಂದೇ . ಜನರ ಪೂಜಾ ಪದ್ಧತಿ, ಮತಾಚಾರಗಳನ್ನು ಆಧರಿಸಿ ಇಲ್ಲಿ ಜನರನ್ನು ಪ್ರತ್ಯೇಕವಾಗಿ ಕಾಣಲಾಗುವುದಿಲ್ಲ. ಈ ದೇಶದಲ್ಲಿ ಎಲ್ಲ ಧರ್ಮೀಯರೂ ಒಗ್ಗಟ್ಟಿನಿಂದ , ಸಾಮಾಜಿಕ ಸ್ವಾತಂತ್ರ್ಯದಿಂದ ಬಾಳಲು ಮುಕ್ತ ಅವಕಾಶವಿದೆ ಎಂದಿದ್ದಾರೆ.

ದೇಶದಲ್ಲಿರುವ ಎಲ್ಲರೂ ಹಿಂದುಗಳೇ ಎಂದ ಅವರು, ಹಿಂದು ಎನ್ನಲು ಬಯಸುವುದಿಲ್ಲ ಎಂದಾದರೆ ಭಾರತೀಯ ಎನ್ನಿ.ಯಾವುದೇ ಸಮಸ್ಯೆ ಇಲ್ಲ. ಆದರೆ ಎಲ್ಲರೂ ಒಂದಾಗಿ ದೇಶಕ್ಕಾಗಿ ಕೆಲಸ ಮಾಡಬೇಕು ಎಂಬುದೇ ಮುಖ್ಯ ಎಂದು ಒತ್ತಿ ಹೇಳಿದರು .ಅವರು ಗಾಜಿಯಾಬಾದ್‍ನಲ್ಲಿ ಮುಸ್ಲಿಂ ರಾಷ್ಟ್ರೀಯ ಮಂಚ್ ಆಯೋಜಿಸಿದ್ದ `ಹಿಂದುಸ್ತಾನಿ ಫಸ್ಟ್, ಹಿಂದುಸ್ತಾನ ಫಸ್ಟ್ ‘ಎಂಬ ಧ್ಯೇಯದಡಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ, ಖ್ವಾಜಾ ಇಫ್ತಿಕಾರ್ ಅಹಮ್ಮದ್ ಬರೆದ `ದ ಮೀಟಿಂಗ್ ಆಫ್ ಮೈಂಡ್ಸ್’ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಸಂಘ ಮುಸ್ಲಿಂ ವಿರೋ, ಮುಸ್ಲಿಮರು ಭಾರತದಲ್ಲಿ ಅಪಾಯದಲ್ಲಿದ್ದಾರೆ ಎಂಬೆಲ್ಲ ಪ್ರಚಾರಕ್ಕೆ ಬಲಿಬೀಳದಿರಿ. ಯಾರಿಗೂ ಯಾರಿಂದಲೂ ತೊಂದರೆಯಿಲ್ಲ. ಯಾರನ್ನು ಪೂಜಿಸಲಾಗುತ್ತದೆ ಎಂಬುದರ ಮೇಲೆ ಯಾರನ್ನೂ ದ್ವೇಷಿಸುವ ವ್ಯವಸ್ಥೆ ನಮ್ಮಲ್ಲಿಲ್ಲ. ಭಾರತದಲ್ಲಿನ ಎಲ್ಲ ಮತಾಚಾರಗಳ ಅನುಯಾಯಿಗಳ ಡಿಎನ್‍ಎಯೂ ಒಂದೇ ಎಂಬುದರಲ್ಲಿ ಸಂಘ ನಂಬಿಕೆ ಹೊಂದಿದೆ . ಹಿಂದು -ಮುಸ್ಲಿಂ ಭಾವೈಕ್ಯತೆಯನ್ನು ತಪ್ಪಾಗಿ ಬಿಂಬಿಸಲಾಗುತ್ತದೆ. ಭಾರತೀಯರು ಒಂದಾಗಿದ್ದರೆ ದೇಶದ ಅಭಿವೃದ್ಧಿ ಸಾಂಗವಾಗಿ ನಡೆಯಲು ಸಾಧ್ಯ . ಈ ನಿಟ್ಟಿನಲ್ಲೇ ಆರೆಸ್ಸೆಸ್ ವಿಭಿನ್ನ ನಂಬಿಕೆಗಳನ್ನು ಹೊಂದಿರುವ ಜನರಲ್ಲಿ ಏಕತೆ ಮೂಡಿಸಲು ಕೆಲಸ ಮಾಡುತ್ತಿದೆ . ಆದರೆ ಇದು ಯಾವುದೇ ರಾಜಕೀಯ ಅಥವಾ ವೋಟ್‍ಬ್ಯಾಂಕ್ ರಾಜಕೀಯ ಅಲ್ಲ. ಬದಲಿಗೆ ರಾಷ್ಟ್ರೋನ್ನತಿಗಾಗಿ ಸಂಘ ಮಾಡುವ ಪ್ರಯತ್ನ ಎಂದರು.

ಗೋ ರಕ್ಷಕರಿಂದ ಅಲ್ಪಸಂಖ್ಯಾತರ ಮೇಲೆ ಹಿಂಸೆ ನಡೆದಿದೆ ಎಂಬ ಆರೋಪದ ಬಗ್ಗೆ ಪ್ರಸ್ತಾವಿಸಿದ ಅವರು, ಗೋವು ಭಾರತೀಯರಿಗೆ ಪೂಜ್ಯವಾದುದು. ಹಾಗೆಂದು ಗೋವಿನ ಹೆಸರಿನಲ್ಲಿ ಹಿಂಸೆ ನಡೆಸುವುದನ್ನು ಸಮರ್ಥಿಸಲಾಗದು. ಕಾನೂನು ತನ್ನದೇ ಕ್ರಮ ಕೈಗೊಳ್ಳಲಿ.ತನಿಖೆ ನಡೆದು ಅಪರಾಗಳಿಗೆ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ.ಆದರೆ ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು.ಕೊಲ್ಲುವವ ಹಿಂದುವಾಗಲು ಸಾಧ್ಯವಿಲ್ಲ. ಇದೇ ವೇಳೆ ಅಲ್ಪಸಂಖ್ಯಾತರ ಮೇಲೆ ಹಲ್ಲೆಯ ಅನೇಕ ಪ್ರಕರಣಗಳು ನಕಲಿಯಾಗಿದ್ದು, ಇಂತಹದಕ್ಕೂ ಅಂತ್ಯ ಹಾಡಬೇಕಾಗಿದೆ ಎಂಬುದನ್ನೂ ಅವರು ಬೊಟ್ಟು ಮಾಡಿದರು.

ಈ ಕಾರ್ಯಕ್ರಮಕ್ಕೆ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯನ್ನು ಥಳಕು ಹಾಕಬೇಡಿ ಎಂದೇ ಮಾತು ಆರಂಭಿಸಿದ ಮೋಹನ್ ಭಾಗ್ವತ್, ಇದನ್ನು ಇಂತಹ ಒಂದು ಪ್ರಯತ್ನ ಎಂದೆಲ್ಲ ವ್ಯಾಖ್ಯಾನಿಸುವುದು ಬೇಡ.ಸಂಘಕ್ಕೆ ಇಂತಹ ಯಾವುದೇ ಅಗತ್ಯವಿಲ್ಲ.ಸಂಘ ದೇಶದ ಪರ ಯಾರು ಮಾತನಾಡುತ್ತಾರೋ ಅವರನ್ನು ಬೆಂಬಲಿಸುತ್ತದೆ. ನಾವು ದೇಶದ ಪರವಾಗಿರುವವರು. ಸಂಘ ಎಂದೂ ಯಾರ ವಿರುದ್ಧವೂ ಇಲ್ಲ. ಬದಲಿಗೆ ಎಲ್ಲರ ಒಳಿತಿಗಾಗಿ ಕೆಲಸ ಮಾಡುತ್ತದೆ. ಇತರರು ಏನು ಹೇಳುತ್ತಾರೆ ಎಂಬ ಬಗ್ಗೆ ಸಂಘ ತಲೆಕೆಡಿಸಿಕೊಳ್ಳುವುದಿಲ್ಲ. ಬದಲಿಗೆ ನಾವು ನಮ್ಮ ಕೆಲಸವನ್ನು ಮುಂದುವರಿಸುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ