ಸೈಕಲ್ ಯಾತ್ರೆಯಲ್ಲಿ ಆಯತಪ್ಪಿ ಬಿದ್ದ ತೇಜ್‌ ಪ್ರತಾಪ್‌ ಯಾದವ್‌

ಪಾಟ್ನಾ:ಜು-೨೬: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಎನ್‌ಡಿಎ ಸರ್ಕಾರದ ವಿರುದ್ಧ ಹೋರಾಟ ರೂಪದಲ್ಲಿ ಬೆಂಬಲಿಗರೊಂದಿಗೆ ಪಾಟ್ನಾದಿಂದ ಗಯಾದ ವರೆಗೆ ಸೈಕಲ್‌ ಯಾತ್ರೆ ಹೊರಟಿದ್ದ ಆರ್‌ಜೆಡಿ ಯುವ ನಾಯಕ ತೇಜ್‌ ಪ್ರತಾಪ್‌ ಯಾದವ್‌ ಅವರು ಆಯತಪ್ಪಿ ಬಿದ್ದ ಘಟನೆ ನಡೆದಿದೆ.

ವೇಗವಾಗಿ ಸೈಕಲ್‌ ಚಲಾಯಿಸಿದ ತೇಜ್‌ ಪ್ರತಾಪ್‌ ಸರ್ಕಲ್‌ನಲ್ಲಿ ನಿಯಂತ್ರಣ ತಪ್ಪಿ ಬಿದ್ದಿದ್ದಾರೆ. ಅದೃಷ್ಟವಷಾತ್‌ ಯಾವುದೇ ಹಾನಿಯಾಗಿಲ್ಲ

ಬಿದ್ದ ಕೂಡಲೇ ಜೊತೆಯಲ್ಲಿ ಸಾಗುತ್ತಿದ್ದವರು, ಭದ್ರತಾ ಸಿಬಂದಿಗಳು ನೆರವಿಗೆ ಧಾವಿಸಿದರೂ, ಕೂಡಲೆ ಎದ್ದ ತೇಜ್‌ ಪ್ರತಾಪ್ ಮತ್ತೆ ಸೈಕಲ್ ಏರಿ ಪ್ರತಿಭಟನಾ ಯಾತ್ರೆ ಮುಂದುವರಿಸಿದರು.

Tej pratap yadav,Falls,during a cycle yatra

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ