ಮಂಡ್ಯ:ಜು-1: ಒಂದು ವರ್ಷದ ಮಗು ಕುಕ್ಕರ್ನ ವಿಷಲ್ ನುಂಗಿದ ಪರಿಣಾಮ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಮುದ್ದೂರಿನ ನಗರಕೆರೆಯಲ್ಲಿ ನಡೆದಿದೆ.
ಮರಿಲಿಂಗೇಗೌಡ ಮತ್ತು ರೂಪಾ ದಂಪತಿಯ ಪುತ್ರ ಭುವನ್ ಮೃತಪಟ್ಟ ಮಗು.
ರಾತ್ರಿ ಆಟವಾಡುತ್ತಿದ್ದ ಮಗು ಕುಕ್ಕರ್ ವಿಷಲ್ ನ್ನು ಬಾಯಿಗೆ ಹಾಕಿಕೊಂಡಿದೆ. ಕೂಡಲೇ ಅಸ್ವಸ್ಥಗೊಂಡ ಮಗುವನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ ಎಂದು ತಿಳಿದುಬಂದಿದೆ.
Mandya,one year child died,swallowing cooker vessel