ಮಂಗಳೂರು: ಜೂ-26: ಮಂಗಳೂರು ಗಡಿಭಾಗದ ಮೂಲರಪಟ್ಣದಲ್ಲಿ ಫಲ್ಗುಣಿ ನದಿಗೆ ಕಟ್ಟಿರುವ ಸೇತುವೆ ಕುಸಿದುಬಿದ್ದಿದೆ. ಅದೃಷ್ಟವಶಾತ್ ಸೇತುವೆಯ ಮೇಲಿನಿಂದ ಸಾಗುತ್ತಿದ್ದ ಎರಡು ಖಾಸಗಿ ಕೂದಲೆಳೆ ಅಂತರದಲ್ಲಿ ಸಂಭವಿಸಬೇಕಿದ್ದ ಭಾರೀ ಅಪಾಯದಿಂದ ಪಾರಾಗಿವೆ.
ಸೇತುವೆ ಮೇಲೆ ಎರಡು ಬಸ್ ಗಳು ಸಂಚರಿಸಿದ ತತ್ಕ್ಷಣ ಅವಘಡ ಸಂಭವಿಸಿದ್ದು, ಗಂಜಿಮಠ, ಕುಪ್ಪೆಪದವಿನಿಂದ ಬಂಟ್ವಾಳಕ್ಕೆ ಸಂಪರ್ಕ ಕಡಿತಗೊಂಡಿದೆ. ಅಕ್ರಮ ಮರಳುಗಾರಿಕೆಯೇ ಸೇತುವೆ ಕುಸಿಯಲು ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
1981-1982ರಲ್ಲಿ 176.40 ಮೀ. ಉದ್ದದ ಈ ಸೇತುವೆ ಕಟ್ಟಲಾಗಿತ್ತು. ಎಡಪದವು- ಕುಪ್ಪೆ ಪದವು, ಅರಳ ಸೊರ್ನಾಡಿನ ಜಿಲ್ಲಾ ಮುಖ್ಯರಸ್ತೆಯ ಕಿ.ಮೀ. 7.40 ರಲ್ಲಿ ಬರುವ ಮೂಲರ ಪಟ್ನ ದಲ್ಲಿ ಬಂಟ್ವಾಳದ ಗಡಿಭಾಗದ ಮಂಗಳೂರು ತಾಲೂಕಿನ ವ್ಯಾಪ್ತಿಗೊಳಪಡುವ ಸೇತುವೆ ಇದಾಗಿದೆ. ಸೇತುವೆಯಲ್ಲಿ ಒಟ್ಟು ಎಂಟು ಸ್ಲ್ಯಾಬ್ಗಳಿದ್ದು, ಮಂಗಳೂರು ಉತ್ತರ ಕ್ಷೇತ್ರಕ್ಕೆ ಸೇರಿದ ಭಾಗದ ಎರಡನೇ ಮತ್ತು ಮೂರನೇ ಸ್ಲಾಬ್ಗಳು ಕುಸಿದು ಬಿದ್ದಿವೆ. ಇನ್ನು ಬಂಟ್ವಾಳ ಕ್ಷೇತ್ರದ ಭಾಗವೂ ಬಿರುಕುಬಿಟ್ಟಿದೆ. ಇದರಿಂದ ಬಂಟ್ವಾಳ ತಾಲೂಕಿನ ಬಡಬೆಳ್ಳೂರು, ಅರಳ ಹಾಗೂ ಮುತ್ತೂರು, ಕೊಳವೂರು ಸಂಪರ್ಕ ನೇರವಾಗಿ ಕಡಿದುಹೋಗಿದೆ.
ಪ್ರತಿನಿತ್ಯ ಇಲ್ಲಿ ಸುಮಾರು 15 ಬಸ್ ಗಳು ಹಾಗೂ ನೂರಾರು ಖಾಸಗಿ ವಾಹನಗಳು ಸಂಚರಿಸುತ್ತವೆ. ಬಂಟ್ವಾಳ ಭಾಗ ದಿಂದ ಪೊಳಲಿ ಕಡೆಗೆ ತೆರಳು ವವರಿಗೆ, ಗುರುಪುರ ಕಡೆ ಯಿಂದ ಬಂಟ್ವಾಳಕ್ಕೆ ಬರಲೂ ಈ ರಸ್ತೆ ಅನುಕೂಲ ವಾಗುತ್ತಿತ್ತು. ಸೇತುವೆ ಕುಸಿತದಿಂದಾಗಿ ಬಂಟ್ವಾಳ, ಗಂಜಿಮಠದಿಂದ ಕುಪ್ಪೆ ಪದವು- ನೋಣಲ್ ಮುಖಾಂತರ ಬಂಟ್ವಾಳ, ಬಿ.ಸಿ. ರೋಡ್ಗೆ ಸಂಚಾರ ಸ್ಥಗಿತ ವಾಗಿರುವ ಕಾರಣ ಪ್ರಯಾಣಿಕರು ಪೊಳಲಿ ಮಾರ್ಗವಾಗಿ ಹೋಗ ಬೇಕಾಗುತ್ತದೆ. ಇದರಿಂದಾಗಿ ಇಲ್ಲಿಯ ಜನತೆ ಬಿ.ಸಿ. ರೋಡ್ಗೆ ಹೋಗ ಬೇಕಾದರೆ ಮೊದಲಿಗಿಂತ ಸುಮಾರು 20 ಕಿ.ಮೀ.ಗೂ ಅಧಿಕ ದೂರ ಕ್ರಮಿಸ ಬೇಕಾಗುತ್ತದೆ.
Mangalore, moolarapatna bridge collapse, a major tragedy to miss