ಬೆಂಗಳೂರು: ಎರಡು ದಿನಗಳ ರಾಜ್ಯ ಪ್ರವಾಸಕ್ಕಾಗಿ ಆಗಮಿಸುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸ್ವಾಗತಿಸಲು ಬೆಂಗಳೂರು, ಭದ್ರಾವತಿ, ಬೆಳಗಾವಿ ಮತ್ತು ಬಾಗಲಕೋಟೆ ನಗರಗಳು ಸಜ್ಜಾಗಿವೆ.
ಶನಿವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿಗೆ ಆಗಮಿಸಲಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಪುಟ ಸಚಿವರು ಬರಮಾಡಿಕೊಳ್ಳಲಿದ್ದಾರೆ. ಈಗಾಗಲೇ ಎಚ್ಎಎಲ್ ಸುತ್ತಮುತ್ತಲ ಪ್ರದೇಶದಲ್ಲಿ ಪಕ್ಷದ ಬಾವುಟಗಳು ರಾರಾಜಿಸುತ್ತಿದ್ದು, ಪಕ್ಷದ ಕಾರ್ಯಕರ್ತರಲ್ಲೂ ಉತ್ಸಾಹ ತುಂಬಿದೆ.
ಎಚ್ಎಎಲ್ನಿಂದ ನೇರವಾಗಿ ಭದ್ರಾವತಿಯ ರ್ಯಾಪಿಡ್ ಆ್ಯಕ್ಷನ್ ಪೊರ್ಸ್ ಕೇಂದ್ರದದಲ್ಲಿ ಮಧ್ಯಾಹ್ನ 1 ಗಂಟೆಯಿಂದ ನಡೆಯಲಿರುವ ಶಿಲಾನ್ಯಾಸ ಕಾರ್ಯಕ್ರಮ ಮತ್ತು ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಂಜೆ 4.40 ಕ್ಕೆ ವಿಧಾನಸೌಧ ಮುಂಭಾಗ ತುರ್ತು ಸೇವೆಗಳ ಪೊಲೀಸ್ ವಾಹನಗಳಿಗೆ ಚಾಲನೆ ನೀಡಲಿದ್ದು, 5 ಗಂಟೆಗೆ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆಯಲಿರುವ ಪೊಲೀಸ್ ಗೃಹ-2025 ಯೋಜನೆಗೆ ಚಾಲನೆ ನೀಡಲಿದ್ದಾರೆ. ಸಂಜೆ 6.30ಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಹಿರಿಯ ಪೊಲೀಸ್ ಅಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ಬೆಳಗಾವಿ, ಬಾಗಲಕೋಟೆಗೂ ಭೇಟಿ :
ಬೆಂಗಳೂರಿನ ವಿಂಡ್ಸರ್ ಮ್ಯಾನರ್ ಹೋಟೆಲ್ನಲ್ಲಿ ವಾಸ್ತವ್ಯ ಹೂಡಲಿರುವ ಗೃಹ ಸಚಿವ ಶಾ, ಜ.17ರ ಬೆಳಗ್ಗೆ ಬೆಳಗಾವಿ ತಲುಪಿ ಅಲ್ಲಿಂದ ಬಾಗಲಕೋಟೆಗೆ ತೆರಳಲಿದ್ದಾರೆ. 11.30ಕ್ಕೆ ಎಂಆರ್ಎನ್ ಲಿಮಿಟೆಡ್ನ ಯತ್ನಾಳ್ ಯೋಜನೆ ಸಂಬಂತ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಧ್ಯಾಹ್ನ 3ಕ್ಕೆ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ಭೇಟಿ ಕೊಡುತ್ತಾರೆ. ಸಂಜೆ 4ಕ್ಕೆ ಜೆಎನ್ಎಂಸಿ ಮೈದಾನದಲ್ಲಿ ಜನಪ್ರತಿನಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಸಂಜೆ 6.10ಕ್ಕೆ ಸಂಕಮ್ ಹೋಟೆಲ್ನಲ್ಲಿ ಪಕ್ಷದ ಮುಖಂಡರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಅದೇ ದಿನ ರಾತ್ರಿಯೇ ಅವರು ದಿಲ್ಲಿಗೆ ವಾಪಸಾಗಲಿದ್ದಾರೆ.