ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ – ಕಿಕ್ಕರ್ ಬಾಕಿ ಮೊತ್ತ ಪಾವತಿಗೆ ಸಾಫ್ಟ್ ಲೋನ್ ಬಳಕೆ

ಬೆಂಗಳೂರು: ಕೇಂದ್ರ ರಸ್ತೆ ನಿ(ಸಿಆರ್‍ಎಫ್) ಅಡಿ ನಿರ್ವಹಣೆ ಮಾಡಿರುವ ಹೆದ್ದಾರಿ ಕಾಮಗಾರಿಗಳ ಬಾಕಿ ಮೊತ್ತ ಪಾವತಿಗಾಗಿ ಲಘು ಸಾಲ ಪಡೆಯಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಹುಬ್ಬಳ್ಳಿಯ ರಾಣಿ ಚೆನ್ನಮ್ಮ ವೃತ್ತದ ಬಳಿ ಎಲಿವೇಟೆಡ್ ಕಾರಿಡಾರ್ ಮತ್ತು ಕಲಘಟಗಿ ತಾಲೂಕು ದಾಸ್ತಿಕೊಪ್ಪಳದ ಬಳಿ ಚತುಷ್ಪಥ ರಸ್ತೆ ಹಾಗೂ ಸೇತುವೆ ನಿರ್ಮಾಣದ ಶಂಕುಸ್ಥಾಪನೆ ವರ್ಚುಯಲ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಿಆರ್‍ಎಫ್ ಅಡಿ ರಾಜ್ಯದಲ್ಲಿ ಹಲವು ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದು, ಕೇಂದ್ರ ಸರ್ಕಾರದಿಂದ ಬಾಕಿ ಮೊತ್ತ ಬರಬೇಕಿದೆ. ಹೀಗಾಗಿ ಗುತ್ತಿಗೆದಾರರಿಗೂ ಹಣ ಪಾವತಿಸಲಾಗಿಲ್ಲ. ಇದಕ್ಕೆ ಪರಿಹಾರವಾಗಿ ಲಘು ಸಾಲ ಪಡೆಯುವಂತೆ ಕೇಂದ್ರ ಸರ್ಕಾರವೇ ಸಲಹೆ ನೀಡಿದ್ದು, ಅದರಂತೆ ಲಘು ಸಾಲ ಪಡೆದು ಬಾಕಿ ಮೊತ್ತ ಪಾವತಿಸಲಾಗುತ್ತದೆ. ಕೇಂದ್ರ ಸರ್ಕಾರ ಈ ಹಣವನ್ನು ಸಿಆರ್‍ಎಫ್ ಅನ್ವಯ ಶೀಘ್ರವೇ ಬಿಡುಗಡೆ ಮಾಡಿಕೊಡಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಮನವಿ ಮಾಡಿದರು.
ಭೂಸ್ವಾೀನ ಪರಿಹಾರ ಬಿಡುಗಡೆಗೆ ಮನವಿ:
ತುಮಕೂರು-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಆಗುತ್ತಿದ್ದು, ನನ್ನ ತವರು ಜಿಲ್ಲೆಯಾದ ಶಿವಮೊಗ್ಗವು ಹಲವು ನಗರಗಳಿಗೆ ಸಂಪರ್ಕ ಕಲ್ಪಿಸಲಿದೆ. ಇಲ್ಲಿಗೆ ಭೂಸ್ವಾೀನ ಪರಿಹಾರ ಪ್ಯಾಕೇಜ್-4ನ್ನು ಶೀಘ್ರ ಬಿಡುಗಡೆ ಮಾಡಬೇಕೆಂದು ಸಚಿವ ಗಡ್ಕರಿಗೆ ಸಿಎಂ ಮನವಿ ಮಾಡಿದರು.
ಆರ್ಥಿಕಾಭಿವೃದ್ಧಿಗೆ ಸಂಪರ್ಕ ಜಾಲವೇ ನಿರ್ಣಾಯಕ:
ನಿತಿನ್ ಗಡ್ಕರಿ ಅವರ ಅವಯಲ್ಲಿ ಕರ್ನಾಟಕ ಮಾತ್ರವಲ್ಲದೆ ದೇಶಾದ್ಯಂತ ಸಾಕಷ್ಟು ಹೆದ್ದಾರಿ ಯೋಜನೆಗಳು ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಹೊಸ ತಂತ್ರಜ್ಞಾನಗಳ ಅಳವಡಿಕೆಯೂ ಆಗುತ್ತಿದೆ. ಇತ್ತೀಚೆಗಷ್ಟೇ ಕರ್ನಾಟಕದಲ್ಲಿ 10 ಸಾವಿರ ಕೋಟಿ ರೂ. ಮೊತ್ತದ ಹೆದ್ದಾರಿ ಅಭಿವೃದ್ಧಿ, ಶಂಕುಸ್ಥಾಪನೆ ಮತ್ತು ಸಾರ್ವಜನಿಕ ಸಮರ್ಪಣಾ ಕಾರ್ಯಕ್ರಮ ನಡೆದಿದ್ದು, ಒಟ್ಟಾರೆ 1.16 ಲಕ್ಷ ಕೋಟಿ ರೂ. ಅಂದಾಜು ವೆಚ್ಚದ ಕಾಮಗಾರಿಗಳು ಕರ್ನಾಟಕಕ್ಕೆ ಮಂಜೂರಾಗಿವೆ. ಇದು ಇತಿಹಾಸದಲ್ಲೇ ಮೊದಲು. ಇನ್ನು ಉತ್ತಮ ಸಂಪರ್ಕ ಜಾಲವು ಆರ್ಥಿಕಾಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ದ್ವಿತೀಯ, ತೃತೀಯ ದರ್ಜೆಯ ನಗರಗಳಲ್ಲೂ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲು ಮುಂದಡಿ ಇಟ್ಟಿದ್ದೇವೆ. ಹೆದ್ದಾರಿಗಳ ಸಂಪರ್ಕದಿಂದ ಇದಕ್ಕೆ ಸಾಕಷ್ಟು ಅನುಕೂಲವಾಗಲಿದೆ ಎಂದು ಸಿಎಂ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ